Kannada Astrology: ಅಬ್ಬಾ! ಈ ರಾಶಿಯವರಿಗೆ ಮೂಗಿನ ತುದಿಯಲ್ಲೇ ಇರುತ್ತೆ ಕೋಪ; ನೀವೂ ಹಿಂಗೆನಾ?

Kannada Astrology: ಉಪ್ಪು, ಹುಳಿ, ಖಾರ ತಿನ್ನುವ ದೇಹ ಇದು. ಅಂದಮೇಲೆ ಸಿಟ್ಟು, ಕೋಪ, ದುಃಖ ಹಾಗೂ ಇತರ ಎಮೋಷನ್ ಗಳು ಆಗುವುದು ಸಹಜ ಆದರೆ ನಿಮ್ಮ ಈ ಸ್ವಭಾವ ನಿಮ್ಮ ರಾಶಿ ನಕ್ಷತ್ರವನ್ನು ಕೂಡ ಆಧರಿಸಿ ಇರುತ್ತೆ ಎನ್ನುವುದು ನಿಮಗೆ ಗೊತ್ತಾ? ಹೌದು ಜ್ಯೋತಿಷ್ಯಾಸ್ತ್ರದ ಪ್ರಕಾರ ವ್ಯಕ್ತಿಯ ಗುಣ ಹಾಗೂ ದೋಷಗಳು ಆತನ ರಾಶಿ ಚಕ್ರದ ಚಿಹ್ನೆಯಿಂದ ನಿರ್ಧರಿಸಬಹುದಾಗಿದೆ ಕೆಲವು ರಾಶಿಯವರಂತು ಕೋಪಕ್ಕೆ ಹೆಸರುವಾಸಿ ಯಾವ ರಾಶಿಯವರಿಗೆ ಮೂಗಿನ ತುದಿಯಲ್ಲಿ ಕೋಪ ಇರುತ್ತೆ ನೋಡೋಣ.

ಮೇಷ ರಾಶಿ: ಮೇಷ ರಾಶಿಯ ಆಡಳಿತ ಗ್ರಹ ಮಂಗಳವಾಗಿದ್ದು ಈಜನ ಹೆಚ್ಚು ಕೋಪ ಮಾಡಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ ಮೊಂಡುತನ ಇವರ ಸ್ವಭಾವವಾಗಿರುತ್ತದೆ. ಇವರು ಯಾವುದೇ ಅವಮಾನವನ್ನು ಸಹಿಸುವುದಿಲ್ಲ ತಕ್ಷಣ ಕೋಪ ಮಾಡಿಕೊಳ್ಳುತ್ತಾರೆ ಆದರೆ ಕೋಪ ಹೆಚ್ಚು ಸಮಯ ಇರುವುದಿಲ್ಲ.

ಸಿಂಹ ರಾಶಿ: ಈ ರಾಶಿಯವರಿಗೆ ಉರಿಯುವ ಸೂರ್ಯನೆ ಆಡಳಿತ ಗ್ರಹ. ಈ ರಾಶಿಯವರ ದೊಡ್ಡ ಸಮಸ್ಯೆ ಅಂದರೆ ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಇರುವುದಿಲ್ಲ. ಇವರ ಇಗೋ ಹರ್ಟ್ ಆದರೆ ಅಂದರೆ ಅಹಂಕಾರಕ್ಕೆ ಪೆಟ್ಟು ಬಿದ್ದರೆ ತಕ್ಷಣ ಕೋಪ ಮಾಡಿಕೊಳ್ಳುತ್ತಾರೆ ತಮ್ಮ ಅಸಮಾಧಾನವನ್ನು ಯಾವುದಾದರೂ ರೀತಿಯಲ್ಲಿ ತೋರಿಸಿಕೊಳ್ಳುತ್ತಾರೆ.

ವೃಶ್ಚಿಕ ರಾಶಿ: ಆಡಳಿತ ಗ್ರಹ ಪ್ಲುಟೊ ಆಗಿದ್ದು ಭಾವನೆಗಳಿಗೆ ಈ ಗ್ರಹ ಹೆಸರುವಾಸಿಯಾಗಿದೆ. ಹಾಗಾಗಿ ಇಂತವರು ಬಹಳ ಶಾಂತವಾಗಿರುತ್ತಾರೆ. ಆದರೆ ಯಾರಾದರೂ ಪ್ರಚೋದನೆ ಮಾಡಿದರೆ ಬೇಗ ಕೋಪಗೊಳ್ಳುತ್ತಾರೆ. ಹಾಗೂ ಆ ವಿಷಯವನ್ನು ಸುಲಭವಾಗಿ ಮರೆಯುವುದಿಲ್ಲ ಇವರ ಕೋಪ ದೀರ್ಘಕಾಲದ ವರೆಗೆ ಉಳಿಯುತ್ತದೆ.

ವೃಷಭ ರಾಶಿ: ಶುಕ್ರ ಈ ರಾಶಿಯ ಆಡಳಿತ ಗ್ರಹನಾಗಿದ್ದು ಸೌಕರ್ಯ ಹಾಗೂ ಭದ್ರತೆಗೆ ಮಹತ್ವ ನೀಡುತ್ತಾನೆ ಹಾಗಾಗಿ ವೃಷಭ ರಾಶಿಯವರು ಹೆಚ್ಚಿನ ಸಮಯ ಶಾಂತವಾಗಿಯೇ ಇರುತ್ತಾರೆ ಆದರೆ ಇವರಿಗೆ ಯಾರಾದರೂ ಮೋಸ ಮಾಡಲು ಪ್ರಯತ್ನಿಸಿದರೆ ತಕ್ಷಣ ಕೋಪಗೊಳ್ಳುತ್ತಾರೆ. ಇವರ ಕೋಪವೂ ಕೂಡ ಹಂತ ಹಂತವಾಗಿ ಹೆಚ್ಚಾಗುತ್ತದೆ ಒಮ್ಮೆಲೆ ಕೋಪಗೊಂಡು ಕೂಗಾಡುವುದಿಲ್ಲ ಆದರೆ ಒಮ್ಮೆ ಕೋಪ ಬಂದರೆ ಅಷ್ಟು ಸುಲಭವಾಗಿ ಕರಗುವುದಿಲ್ಲ.

ಮಕರ ರಾಶಿ: ಶನಿ ಈ ರಾಶಿಯ ಆಡಳಿತ ಗ್ರಹ ಎಷ್ಟು ಜವಾಬ್ದಾರಿಗೆ ಶನಿ ಹೆಸರುವಾಸಿ ಹಾಗಾಗಿ ಈ ರಾಶಿಯವರು ಬಹಳ ದೊಡ್ಡ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಯಶಸ್ವಿಗಾಗಿ ಸಾಕಷ್ಟು ಶ್ರಮಿಸುತ್ತಾರೆ ಆದರೆ ಏನಾದರೂ ಅವರ ಪ್ರಯತ್ನದಲ್ಲಿ ವೈಫಲ್ಯ ಉಂಟಾದರೆ ಬೇಗನೆ ದುಃಖ ಪಡುತ್ತಾರೆ ಹಾಗೂ ಕೋಪಗೊಳ್ಳುತ್ತಾರೆ ತನ್ನ ವೈಫಲ್ಯತೆ ಬೇರೆಯವರು ಕಾರಣ ಎಂಬಂತೆ ದೂರುತ್ತಾರೆ. ಈಗ ಹೇಳಿ ನಿಮ್ಮ ರಾಶಿ ಯಾವುದು? ನೀವು ಕೂಡ ಹೀಗೆ ಕೋಪಗೊಳ್ಳುತ್ತೀರಾ?

Comments are closed.