Post Office Scheme: ಇಲ್ಲಿ ಹೂಡಿಕೆಯ ಮೊತ್ತ ಅಧಿಕವಲ್ಲ; ಆದ್ರೇ ರಿಟರ್ನ್ ಪಡೆಯುವ ಹಣ ಮಾತ್ರ ಲಕ್ಷ ಲಕ್ಷ; ಇಂದೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 100% ಗ್ಯಾರಂಟಿರೀ!  

Post Office Scheme: ಪ್ರತಿಯೊಬ್ಬರು ದುಡಿಯುವುದೇ ಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ. ಜೀವನ ಕಟ್ಟಿಕೊಳ್ಳಬೇಕು ಎಂದಾದಾಗ ನಾವು ಭವಿಷ್ಯವನ್ನು ಆಲೋಚಿಸಿ ಸ್ವಲ್ಪ ಸ್ವಲ್ಪ ಹಣವನ್ನು ಉಳಿತಾಯ ಮಾಡಬೇಕಾಗುತ್ತದೆ. ಈ ರೀತಿ ಉಳಿಸಿದ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿದರೆ ಅದಕ್ಕೆ ಲಾಭ ಸಿಗುತ್ತದೆ. ಹಾಗಾಗಿ ಹಣವನ್ನು ಸರಿಯಾದ ಹಾಗೂ ಪಕ್ಕಾ ಲಾಭ ಬರುವ ಜಾಗದಲ್ಲಿ ಹೂಡಿಕೆ ಮಾಡಬೇಕು. ಈ ರೀತಿ ಪಕ್ಕಾ ಲಾಭ ನೀಡುವ ಜಾಗವೆಂದರೆ ಅದು ಅಂಚೆ ಕಚೇರಿ ಎಂದರೆ ಅತಿಶಯೋಕ್ತಿಯಲ್ಲ. ಇದನ್ನೂ ಓದಿ: Health Benefits of Buttermilk: ಈ ಒಂದು ಖಾಯಿಲೆಗೆ ಧರೆಯ ಅಮೃತ ಮಜ್ಜಿಗೆ ಸೇವಿಸಿದ್ರೆ ಸಾಕು, ಯಾವ ಔಷಧಿಯೂ ಬೇಕಾಗಿಲ್ಲ; ಟ್ರೈ ಮಾಡ್ ನೋಡಿ!

ಅಂಚೆ ಕಚೇರಿಯಲ್ಲಿ ನೀವು ಉಳಿಸಿದ ಹಣವನ್ನು ಇಡುವುದರಿಂದ ಹಣಕ್ಕೆ ಭದ್ರತೆಯೂ ಇರುತ್ತದೆ. ಜೊತೆಗೆ ಹೆಚ್ಚಿನ ಲಾಭವನ್ನು ಗಳಿಸಬಹುದು. ಮೊದಲೆಲ್ಲ ಕೇವಲ ಪತ್ರಗಳು, ಬ್ಯಾಂಕ್ ನೋಟಿಸ್ಗಳನ್ನು ನೀಡಲು ಸೀಮಿತವಾಗಿದ್ದ ಅಂಚೆ ಇಲಾಖೆ ಇದೀಗ ನಾವು ಉಳಿಸಿದ ಹಣವನ್ನು ಠೇವಣಿ ಮಾಡುವ ಜಾಗವಾಗಿ ಬದಲಾಗಿದೆ.

ನಾವು ಹಣವನ್ನು ಹೂಡಿಕೆ ಮಾಡಬೇಕಿದ್ದರೆ ಎರಡು ವಿಚಾರಗಳನ್ನು ಅರಿತಿರಬೇಕು. ಅದೆನೆಂದರೆ ಹೆಚ್ಚಿನ ಹಣ ಹಾಗೂ ದೀರ್ಘಾವಧಿ. ಹೆಚ್ಚಿನ ಮೊತ್ತ ಹೂಡಿಕೆ ಮಾಡಿದರೆ ಸಹಜವಾಗಿಯೇ ಹೆಚ್ಚಿನ ಲಾಭ ಸಿಗುತ್ತದೆ. ಆದರೆ ಜನರು ಯೋಚಿಸದೆ ಇರುವ ಇನ್ನೊಂದು ವಿಚಾರವಿದೆ. ಅದೆನೆಂದರೆ ಯೋಜನೆಗಳ ಅರಿವು. ಇದನ್ನೂ ಓದಿ: Hyundai I20:  ಕೆಲವೇ ದಿನಕ್ಕೆ ಸೀಮಿತ ಹುಂಡೈ ನ ಈ ಕೊಡುಗೆ; ಹೊಸ ಐ-2೦ ಕೈಗೆಟುಕುವ ಬೆಲೆಯಲ್ಲಿ, ಈಗಲೇ ಬುಕ್ ಮಾಡಿ!

ಅಂಚೆ ಕಚೇರಿಯಲ್ಲಿ ನೀವು ಉಳಿಸಿದ ಹಣವನ್ನು ಠೇವಣಿ ಮಾಡಲು ಹಲವಾರು ಯೋಜನೆಗಳಿವೆ. ಅದರಲ್ಲಿ ಕೆಲವೊಂದು ಐದು ವರ್ಷದ ಒಳಗಿನ ಯೋಜನೆಗಳಾಗಿದ್ದರೆ, ಇನ್ನು ಕೆಲವು ದೀರ್ಘ ಕಾಲದ ಯೋಜನೆಯಾಗಿದೆ. ದೀರ್ಘಕಾಲದ ಯೋಜನೆಗಳಲ್ಲಿ ಸಹಜವಾಗಿಯೇ ನಿಮಗೆ ವಾಪಾಸು ಸಿಗುವ ಹಣದ ಮೊತ್ತ ಹೆಚ್ಚಿಗೆ ಇರುತ್ತದೆ. ಐದು ವರ್ಷದ ಒಳಗಿನ ಯೋಜನೆಗಳಲ್ಲಿಯೂ ಕೆಲವೊಂದು ಯೋಜನೆಗಳು ನಿಮಗೆ ದೊಡ್ಡ ಪ್ರಮಾಣದ ಲಾಭ ನೀಡಲಿವೆ.

ಮೊದಲನೆಯದಾಗಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿಯ ಬಗ್ಗೆ ತಿಳಿದುಕೊಳ್ಳೊಣ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಎಂದರೆ ನಿಮಗೆ ಖಾತರಿಯ ಆದಾಯ ನೀಡುವುದಾಗಿದೆ. ಇದರ ಹೂಡಿಕೆ ಅವಧಿ ೫ ವರ್ಷಗಳು. ಈ ಐದು ವರ್ಷಗಳಲ್ಲಿ ನೀವು ಪ್ರತಿ ತಿಂಗಳು ಹೂಡಿಕೆ ಮಾಡಬೇಕಾಗುತ್ತದೆ. ಈ ರೀತಿ ನೀವು ಉಳಿತಾಯ ಮಾಡುವ ಹಣಕ್ಕೆ ನಿಮಗೆ ಶೇ. 5.8 ಬಡ್ಡಿ ಸಿಗಲಿದೆ. ನೀವು ಕನಿಷ್ಟ 1೦೦ ರೂ.ಗಳಿಂದ ಇಲ್ಲಿ ಹೂಡಿಕೆ ಆರಂಭಿಸಬಹುದು.

ಇನ್ನು ಎರಡನೆಯದಾಗಿ ಪೋಸ್ಟ್ ಆಫೀಸ್ ಟೈಮ್ ಠೇವಣಿ; ಈ ಯೋಜನೆ ಅಡಿಯಲ್ಲಿ ನೀವು ಒಂದು ವರ್ಷ, ಎರಡು ವರ್ಷ ಹೀಗೆ ನಿಮಗೆ ಎಷ್ಟು ಸಾಧ್ಯವೋ ಅಷ್ಟು ವರ್ಷಗಳ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನಿಮಗೆ ಶೇ. 5.5 ಬಡ್ಡಿ ನೀಡಲಾಗುತ್ತದೆ. ನೀವು 5 ವರ್ಷ ಹೂಡಿಕೆ ಮಾಡಿದಲ್ಲಿ ಶೇ. 6.7 ಬಡ್ಡಿ ನೀಡುತ್ತಾರೆ. ಇದರ ಜೊತೆ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆಯಲ್ಲಿಯೂ ವಿನಾಯತಿ ಪಡೆಯಬಹುದಾಗಿದೆ.

ಮೂರನೆಯದಾಗಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ; ಈ ಉಳಿತಾಯ ಪ್ರಮಾಣ ಪತ್ರ ಯೋಜನೆಯಲ್ಲಿ ನೀವು ದೊಡ್ಡ ಪ್ರಮಾಣದ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸುತ್ತೀರಿ. ಇದರ ಅವಧಿಯೂ ಐದು ವರ್ಷವಾಗಿದೆ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಶೇ.7.7 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.

Comments are closed.