Guhalakshmi Scheme: ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋದಕ್ಕೆ ಕಡೆಗೂ ಸಿಕ್ತು ಪರಿಹಾರ; ಹೀಗೆ ಮಾಡಿ ಥಟ್ ಅಂತ ಹಣ ನಿಮ್ಮ ಖಾತೆಗೆ ಬಂದು ತಲುಪುತ್ತೆ!

Guhalakshmi Scheme: ಕಾಂಗ್ರೆಸ್ ಸರ್ಕಾರವು (Congress Government) ಚುನಾವಣಾ ಪೂರ್ವದಲ್ಲಿ ಹೇಳಿದಂತೆ 5 ಗ್ಯಾರೆಂಟಿಗಳಾದ ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ (Grahalshmi Scheme)ಯುವನಿಧಿ ಯೋಜನೆ ಜಾರಿಗೆ ತಂದಿದೆ. ಇದರಲ್ಲಿ ಯುವನಿಧಿ ಯೋಜನೆ ಜಾರಿಗೆ ಬರಬೇಕಾಗಿದೆ. ಇದನ್ನೂ ಓದಿ: PM Kisan samman Nidhi Yojana: ಸೆ. 3೦ರೊಳಗೆ ಈ ಕೆಲಸ ಮಾಡದೇ ಇದ್ದಲ್ಲಿ ರೈತರ ಖಾತೆಗೆ ಉಚಿತವಾಗಿ ಬರುವ 2,000ರೂ. ಬರುವುದಿಲ್ಲ; ಈಗಲೇ ಈ ಕೆಲಸ ಮಾಡಿ!

ಈ ಐದು ಗ್ಯಾರಂಟಿಗಳಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ. ಆ.30ರಂದು ಮೈಸೂರಿನಲ್ಲಿ (Musore) ನಡೆದ ಭವ್ಯ ಸಮಾರಂಭದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಚಾಲನೆ ನೀಡಲಾಯಿತು. ಈ ಯೋಜನೆಯ ಸಂಪೂರ್ಣ ಹೊಣೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ನೀಡಲಾಗಿದೆ.

ಈ ಗೃಹಲಕ್ಷ್ಮಿ ಯೋಜನೆಯಡಿ 1.2೦ ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 63 ಲಕ್ಷ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗಿದೆ. ಹಣ ಪಡೆದ ಮಹಿಳೆಯರು ಈ ಯೋಜನೆಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ನಿಮ್ಮ ಖಾತೆಗೂ ಹಣ ಜಮಾ ಆಗಿಲ್ವಾ?

ಉಳಿದ ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಕೆಲವೊಬ್ಬರಿಗೆ ಸರ್ಕಾರದಿಂದ ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗಿದೆ ಎನ್ನುವ ಸಂದೇಶ ಬಂದಿದ್ದು, ಆದರೆ ಹಣ ಜಮಾ ಆಗಿಲ್ಲ. ಇನ್ನು ಹಲವರಿಗೆ ಸಂದೇಶವೂ ಬಂದಿಲ್ಲ. ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದು, ಯಾರೂ ಕೂಡ ಚಿಂತೆ ಮಾಡುವ ಅಗತ್ಯವಿಲ್ಲ. ಎಲ್ಲ ಫಲಾನುಭವಿಗಳ ಖಾತೆಗೂ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: Kannada entertainment: ಬಿಗ್ ಬಾಸ್ TRP ಮುಂದೆ ಧಾರಾವಾಹಿಗಳು ತಂದುಕೊಡುವ TRP ಲೆಕ್ಕಕ್ಕೆ ಇಲ್ವಾ: ಅರ್ಧದಲ್ಲಿಯೇ ಜನರ ನೆಚ್ಚಿನ ಧಾರಾವಾಹಿಗಳು ಮುಗಿಯುತ್ತಾ? ಇದು ಸರಿನಾ!

ಈ ನಡುವೆ ತಮ್ಮ ಖಾತೆಗೆ ಹಣ ಬಾರದೆ ಇರಲು ಕಾರಣವೇನು? ಹಣ ಜಮಾ ಆಗಿತ್ತೋ ಇಲ್ಲವೋ? ಆಗುವುದಾದರೆ ಎಷ್ಟು ದಿನಗಳ ಒಳಗೆ ಆಗಬಹುದು ಎನ್ನುವ ಪ್ರಶ್ನೆಗಳು ಅರ್ಜಿ ಸಲ್ಲಿಸಿರುವ ಫಲಾನುಭವಿಗಳಲ್ಲಿ ಕಾಡುತ್ತಿದೆ.

ಸರ್ಕಾರ ಹೇಳಿದ್ದೇನು?

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಎರಡು ತಿಂಗಳಿಗೆ ಫಲಾನುಭವಿಗಳ ಖಾತೆಗೆ ಹಾಕುವಷ್ಟು ಹಣವನ್ನು ಬಿಡುಗಡೆ ಮಾಡಿದೆ. ಹಣವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದೆ. ಆರ್ಬಿಐ ಮಾರ್ಗಸೂಚಿಗಳ ಪ್ರಕಾರವೇ ಹಣವನ್ನು ಜಮಾ ಮಾಡಬೇಕಾಗುತ್ತದೆ. ಹಾಗಾಗಿ ಹಂತ ಹಂತವಾಗಿ ಫಲಾನುಭವಿಗಳಿಗೆ ತಲುಪಿಸಬೇಕಾಗುತ್ತದೆ. ಅಲ್ಲದೆ ಹಲವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಸರಿಯಾಗಿ ಜೋಡಣೆ ಆಗಿಲ್ಲ. ಇನ್ನು ಹಲವರ ಖಾತೆ ಬಂದ್ ಆಗಿದೆ. ಈ ಎಲ್ಲ ಕಾರಣಗಳಿಂದ ವರ್ಗಾವಣೆ ವಿಳಂಭ ಆಗುತ್ತಿದೆ. ಎರಡನೇ ತಿಂಗಳಿಂದ ಈ ರೀತಿ ಆಗುವುದಿಲ್ಲ. ಎಲ್ಲವೂ ಸರಾಗವಾಗಿ ನಡೆಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Health Benefits of Buttermilk: ಈ ಒಂದು ಖಾಯಿಲೆಗೆ ಧರೆಯ ಅಮೃತ ಮಜ್ಜಿಗೆ ಸೇವಿಸಿದ್ರೆ ಸಾಕು, ಯಾವ ಔಷಧಿಯೂ ಬೇಕಾಗಿಲ್ಲ; ಟ್ರೈ ಮಾಡ್ ನೋಡಿ!

Comments are closed.