Daily Horoscope: ಶನಿಯ ಕೃಪೆಯಿಂದ ಈ ರಾಶಿಯವರ ಲೈಫ್ ಜಿಂಗಾಲಾಲಾ! ಶನಿ ಜೊತೆ ಲಕ್ಷ್ಮಿ ತಾಯಿಯ ಅದೃಷ್ಟವೂ ಜೊತೆಗೆ ಇರುತ್ತೆ ನೋಡಿ

Daily Horoscope: ಇಂದು ಶುಭ ಶನಿವಾರ. ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿ. ಇಂದು ರೂಪುಗೊಳ್ಳುವ ಶೋಭನ ಯೋಗದಿಂದ ಕೆಲವು ರಾಶಿಯವರ ಜೀವನದ ಮೇಲೆ ಅತ್ಯುತ್ತಮ ಪರಿಣಾಮ ಬೀರಲಿದೆ. ಆದರೂ ಕೆಲವು ರಾಶಿಯವರು ಜಾಗರೂಕರಾಗಿರುವುದು ಬಹಳ ಮುಖ್ಯ. ಯಾವ ಯಾವ ರಾಶಿಯವರಿಗೆ ಇಂದಿನ ಫಲ ಹೇಗಿದೆ ನೋಡೋಣ.

ಮೇಷ ರಾಶಿ: ಇಂದು ಆರೋಗ್ಯ ಸಮಸ್ಯೆ ಇರಬಹುದು. ಅನಗತ್ಯವಾಗಿ ಹಣ ಖರ್ಚಾಗಬಹುದು ಆದರೆ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಎಲ್ಲವೂ ಉತ್ತಮವಾಗಿರುತ್ತದೆ.

ವೃಷಭ ರಾಶಿ: ಶನಿ ಆಶೀರ್ವಾದವಿರುತ್ತದೆ. ಜೊತೆಗೆ ಚಂದ್ರನು ಕೂಡ ಹೆಚ್ಚಿನ ಲಾಭ ತಂದು ಕೊಡಲಿದ್ದಾನೆ. ಇಂದಿನ ಹೂಡಿಕೆಯಿಂದ ಇಂದು ಲಾಭ ಸಿಗುತ್ತದೆ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.

ಮಿಥುನ ರಾಶಿ: ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಿ ಬುದ್ಧಿವಂತಿಕೆ ಇದ್ದರೆ ಯಶಸ್ಸು ಕೂಡ ನಿಮ್ಮ ಜೊತೆಗೆ ಇರುತ್ತದೆ ಪ್ರತಿ ಕ್ಷಣವನ್ನು ಆನಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಿ.

ಕರ್ಕಾಟಕ ರಾಶಿ: ಈ ರಾಶಿಯವರಿಗೆ ಚಂದ್ರನ ಆಶೀರ್ವಾದ ಇರುತ್ತದೆ ಯಾವುದೇ ಕೆಲಸ ಮುಂದೂರುಪಟ್ಟಿದ್ದರೆ ಇಂದು ಆ ವ್ಯವಹಾರ ಮಾಡಿ ಲಾಭವಾಗುತ್ತದೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಸಿಂಹ ರಾಶಿ: ನೀವು ಇಂದು ಆಲಸ್ಯವನ್ನು ಅನುಭವಿಸುತ್ತೀರಿ ಆರೋಗ್ಯದ ಸಮಸ್ಯೆ ಎದುರಾಗಬಹುದು ಹೂಡಿಕೆ ಅಥವಾ ಹೊಸ ಉದ್ಯಮ ಪ್ರಾರಂಭಿಸುವುದಕ್ಕೆ ಯೋಚಿಸುತ್ತಿದ್ದರೆ ಇವತ್ತು ಸೂಕ್ತ ಸಮಯವಲ್ಲ.

ಕನ್ಯಾ ರಾಶಿ: ತೊಗೋರಿತ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ ವ್ಯಾಪಾರ ಪಾಲುದಾರಿಕೆ ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ.

ತುಲಾ ರಾಶಿ: ಆರೋಗ್ಯದ ಸ್ಥಿತಿ ಉತ್ತಮವಾಗಿರುತ್ತದೆ ಅನಾರೋಗ್ಯದಿಂದ ಹಳೆಯ ಸಮಸ್ಯೆಗಳು ಇದ್ದರೆ ಅವು ನಿವಾರಣೆಯಾಗುತ್ತವೆ ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ಇಂದು ಆತ್ಮವಿಶ್ವಾಸ ಹೆಚ್ಚುತ್ತದೆ ಯೋಚಿಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಉತ್ತಮ ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗುವ ಸಮಯ ಇದು ಅವರೊಂದಿಗೆ ನಿಮ್ಮ ವಿಚಾರ ವಿನಿಮಯ ಮಾಡಿಕೊಂಡು ಲಾಭ ಪಡೆದುಕೊಳ್ಳಿ.

ಧನು ರಾಶಿ; ನಿಮ್ಮ ಕಷ್ಟದ ಕಾರ್ಯ ಇಂದಿಗೆ ಮುಗಿಯಿತು ಎಂದುಕೊಳ್ಳಿ ಆತ್ಮವಿಶ್ವಾಸ ಹೆಚ್ಚುವುದರಿಂದ ಎಲ್ಲಾ ಕೆಲಸದಲ್ಲಿಯೂ ಲಾಭ ಉಂಟಾಗುತ್ತದೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವಿದೆ.

ಮಕರ ರಾಶಿ; ಪರಿಣಾಮಕಾರಿಯಾಗಿ ಯಾವುದೇ ಕೆಲಸವನ್ನು ಇಂದು ನಿರ್ವಹಿಸುತ್ತೀರಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಇದರಿಂದ ಆತ್ಮವಿಶ್ವಾಸವು ಹೆಚ್ಚಾಗುತ್ತದೆ.

ಕುಂಭ ರಾಶಿ: ಚಂದ್ರನ ಆಶೀರ್ವಾದವು ನಿಮ್ಮ ಮೇಲೆ ಇರುವುದರಿಂದ ನೀವು ಸಾಕಷ್ಟು ಸಂತೋಷವಾಗಿ ದಿನವನ್ನು ಕಳೆಯುತ್ತೀರಿ. ಕಠಿಣ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ ವ್ಯಾಪಾರದಲ್ಲಿ ಸಹೋದ್ಯೋಗಿಗಳೊಂದಿಗೆ ಉಂಟಾಗಬಹುದು ಆದರೂ ನಿಮ್ಮ ಗೌರವಕ್ಕೆ ಧಕ್ಕೆ ಬರುವುದಿಲ್ಲ.

ಮೀನಾ ರಾಶಿ: ಈ ದಿನ ನಿಮಗೆ ಮಂಗಳಕರವಾಗಿದೆ ಉದ್ಯೋಗ ಪಡೆದುಕೊಳ್ಳಲು ಬಯಸುವವರಿಗೆ ಇಂದು ಉದ್ಯೋಗ ಸಿಗಬಹುದು ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಕೇಳುವ ಸಾಧ್ಯತೆ. ಚಿಂತೆ ಮಾಡದೆ ನೀವು ಮಾಡುವ ಕೆಲಸವನ್ನು ಮುಂದುವರಿಸಿ.

Comments are closed.