Property News: ಪಿತ್ರಾರ್ಜಿತ ಆಸ್ತಿಗೂ ತೆರಿಗೆ ಪಾವತಿ ಮಾಡ್ಬೇಕಾ? ಸರ್ಕಾರದಿಂದ ಆಸ್ತಿ ತೆರಿಗೆ ನಿಯಮದಲ್ಲಿ ಭಾರೀ ಬದಲಾವಣೆ; ಏನದು?

Property News: ಸಾಮಾನ್ಯವಾಗಿ ಪ್ರತಿಯೊಬ್ಬರು ಆಸ್ತಿಯನ್ನು ಹೊಂದಿರುತ್ತಾರೆ. ಈ ಆಸ್ತಿಯಲ್ಲಿ ಎರಡು ವಿಧಗಳಿವೆ. ಒಂದು ನಾವು ಕೊಂಡುಕೊಂಡಿರುವ ಆಸ್ತಿ. ಇನ್ನೊಂದು ನಮಗೆ ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಆಸ್ತಿ. ಹೀಗೆ ಪೂರ್ವಜರಿಂದ ನಮಗೆ ಬಂದಿರುವ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯುತ್ತಾರೆ. ಸುಮಾರು ನಾಲ್ಕು ತಲೆಮಾರಿನ ಪುರುಷರಿಂದ ನಮಗೆ ಬಂದ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿರುತ್ತದೆ.
ಕಾನೂನು ಏನು ಹೇಳುತ್ತದೆ?;
೨೦೦೫ರಲ್ಲಿ ಈ ಪಿತ್ರಾರ್ಜಿತ ಕಾನೂನಿಗೆ ತಿದ್ದುಪಡಿ ತರಲಾಯಿತು. ಅಲ್ಲಿಯವರೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳು ಮಾತ್ರ ಹಕ್ಕುದಾರರಾಗಿದ್ದರು. 2೦೦5ರಲ್ಲಿ ಕಾನೂನಿನಲ್ಲಿ ತಿದ್ದುಪಡಿ ತಂದ ಬಳಿಕ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ದೊರೆಯುವಂತಾಯಿತು. ಅನುವಂಶೀಯವಾಗಿ ಹೀಗೆ ಪಡೆದ ಆಸ್ತಿಯ ಬಗ್ಗೆ ಜನರಲ್ಲಿ ಹಲವಾರು ಗೊಂದಲಗಳಿರುತ್ತವೆ. ಈ ಆಸ್ತಿಗೂ ನಾವು ತೆರಿಗೆ ಪಾವತಿ ಮಾಡಬೇಕಾ? ತೆರಿಗೆ ಪಾವತಿಸಿದರೆ ಎಷ್ಟು ಪಾವತಿಸಬೇಕು ಹೀಗೆ ಹಲವಾರು ಪ್ರಶ್ನೆಗಳು ಇರುತ್ತದೆ.
ಇನ್ನು ಈ ಪಿತ್ರಾರ್ಜಿತ ಆಸ್ತಿಗೆ ಯಾರ್ಯಾರು ಹಕ್ಕುದಾರರು?:
ಪಿತ್ರಾರ್ಜಿತ ಆಸ್ತಿಗೆ ಆ ಆಸ್ತಿಯ ಮಾಲೀಕನ ಎಲ್ಲ ಮಕ್ಕಳು ಅಂದರೆ ಗಂಡು ಹಾಗೂ ಹೆಣ್ಣು ಮಕ್ಕಳಿಗೂ ಸಮ ಪಾಲು ಇರುತ್ತದೆ. ಒಂದು ವೇಳೆ ಪಾಲು ನಡೆದ ನಂತರ ಅದು ಸ್ವಯಾರ್ಜಿತ ಆಸ್ತಿಯಾಗಿ ಮಾರ್ಪಾಟಾಗುತ್ತದೆ. ಇದು ಕುಟುಂಬ ಸದಸ್ಯರಿಗೆ ವ್ಯವಹರಿಸಲು ಅನಿಯಂತ್ರಿತ ಹಕ್ಕನ್ನು ನೀಡುತ್ತದೆ.
ಈ ಪಿತ್ರಾರ್ಜಿತ ಆಸ್ತಿಯ ಹಕ್ಕು ಮಕ್ಕಳಿಗೆ ಹುಟ್ಟಿನಿಂದಲೇ ಬರುತ್ತದೆ. ಆಸ್ತಿಯ ಮಾಲೀಕರು ಮರಣ ಹೊಂದಿದ ನಂತರ ಆ ಆಸ್ತಿಯನ್ನು ಆತನ ಮಕ್ಕಳು ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಪಿತ್ರಾರ್ಜಿತ ಆಸ್ತಿಗೆ ಮಕ್ಕಳೇ ಮೊದಲ ವಾರಸುದಾರರು ಎಂದು ಪರಿಗಣಿಸಲಾಗುತ್ತದೆ.
ಪಿತ್ರಾರ್ಜಿತ ಆಸ್ತಿ ಪಡೆಯಲು ತೆರಿಗೆ ಪಾವತಿ ಮಾಡಬೇಕಾ?:
ಅನುವಂಶಿಕವಾಗಿ ಪಡೆದಿರುವ ಆಸ್ತಿಗೆ ನೀವು ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಆಸ್ತಿ ನಿಮ್ಮ ಹೆಸರಿನಲ್ಲಿ ಇರುವವರೆಗೂ ಅದಕ್ಕೆ ಟ್ಯಾಕ್ಸ್ ಕಟ್ಟಬೇಕಾಗಿಲ್ಲ. ಯಾವಾಗ ನೀವು ಅದನ್ನು ಮಾರಾಟ ಮಾಡುತ್ತೀರೋ ಆಗ ನೀವು ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿಯು ಕ್ಯಾಪಿಟಲ್ ಗೆಯ್ನ ಟ್ಯಾಕ್ಸ್ ವ್ಯಾಪ್ತಿಗೆ ಬರುತ್ತದೆ.ಹಾಗಾಗಿ ಆಸ್ತಿಯು ನಿಮ್ಮ ಹೆಸರಿಗೆ ಬಂದ ಎಷ್ಟು ವರ್ಷದ ನಂತರ ಮಾರಾಟ ಮಾಡುತ್ತಿದ್ದೀರಿ ಎನ್ನುವುದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನೀವು ಎರಡು ವರ್ಷದ ನಂತರ ಮಾರಾಟ ಮಾಡಿದಲ್ಲಿ ಶೇ. 2೦.5 ಕ್ಯಾಪಿಟಲ್ ಗೇಯ್ನ ಟಾಕ್ಸ್ ಪಾವತಿ ಮಾಡಬೇಕಾಗುತ್ತದೆ. ಇನ್ನು ಎರಡು ವರ್ಷದ ಒಳಗೆಯೇ ನೀವು ಮಾರಾಟ ಮಾಡಿದಲ್ಲಿ ಅಲ್ಪಾವಧಿ ಗೇಯ್ನ ಟಾಕ್ಸ್ ಪಾವತಿ ಮಾಡಬೇಕಾಗುತ್ತದೆ ಎನ್ನುವ ನಿಯಮವನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ.
ಹೀಗಾಗಿ ನೀವು ಆಸ್ತಿ ಮಾರಾಟ ಮಾಡುವ ಮುನ್ನ ಅದರ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು ಅವಶ್ಯ. ಇಲ್ಲದೆ ಹೋದಲ್ಲಿ ನೀವು ಮೋಸ ಹೋಗಿ ನೀವು ಕಷ್ಟಕ್ಕೆ ಎಂದು ಮಾರಾಟ ಮಾಡಿದರೂ ನಿಮಗೆ ಹಣ ಸಿಗುವುದಿಲ್ಲ. ಯಾಕೆಂದರೆ ದಂಡ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಆಸ್ತಿ ಮಾರಾಟದ ವೇಳೆ ಜಾಗರೂಕತೆಯಿಂದ ಹೆಜ್ಜೆ ಇಡುವುದು ಒಳಿತು.

Comments are closed.