Jio offer: ಜಿಯೋ ಕಂಪನಿಯ ಧಮಾಕಾ ಆಫರ್; 5 ತಿಂಗಳ ರಿಚಾರ್ಜ್ ಸಂಪೂರ್ಣ ಉಚಿತ!

Jio offer: ತಂತ್ರಜ್ಞಾನ (Technology) ಅಭಿವೃದ್ಧಿ ಹೊಂದಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಪ್ಡೇಡ್ (Update) ವರ್ಷನ್ಗಳು ಲಭ್ಯವಾಗುವುದು ಸಾಮಾನ್ಯ.ಅದರಲ್ಲೂ ಮೊಬೈಲ್ ಕ್ಷೇತ್ರದಲ್ಲಿ ಪ್ರತಿದಿನ ಅಪ್ಡೇಟ್ ವರ್ಷನ್ಗಳು ಬರುತ್ತಲೇ ಇರುತ್ತವೆ. ಇದೀಗ ಆಪಲ್ ಐ ಫೋನ್ 15 (IPhone15) ಸದ್ಯ ಮಾರುಕಟ್ಟೆಯಲ್ಲಿ ಬಿಸಿ ಬಿಸಿ ದೋಸೆಯಂತೆ ಖಾಲಿಯಾಗುತ್ತಿದೆ. ಐ ಫೋನ್ ಅಂಗಡಿಗಳ ಮುಂದೆ ಸದಾ ಜನಜಂಗುಳಿಯಿಂದ ತುಂಬಿರುತ್ತದೆ. ಇದೀಗ ಜಿಯೋ ಒಂದು ಆಫರ್ ಬಿಟ್ಟಿದ್ದು, ನೀವು ಜಿಯೋ ಸ್ಟೋರ್ನಲ್ಲಿ ಐ ಫೋನ್-15 ಕೊಂಡುಕೊಂಡರೆ 6 ತಿಂಗಳ ಉಚಿತ ರೀಚಾರ್ಜ್ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: Bengaluru land: ಬೆಂಗಳೂರಿನಲ್ಲಿ ಸೈಟ್ ತಗೊಂಡವರಿಗೂ, ತಗೊಳ್ಳುವವರಿಗೂ ಸಂಕಷ್ಟ; ನಡೆದಿದೆ ಸಾವಿರಾರು ಎಕರೆ ಅಕ್ರಮ, ನಿಮ್ಮ ಸೈಟ್ ನಿಮ್ಮದಲ್ಲ ಎನ್ನುತ್ತಿದೆಯಾ ಸರ್ಕಾರ!

ಐ ಫೋನ್ 15 ಸೀರಿಸ್ ಇದೀಗ ಜೋರಾಗಿ ಮಾರಾಟವಾಗುತ್ತಿದೆ. ದೇಹಲಿ, ಮುಂಬೈನ ಐ ಫೋನ್ ಸ್ಟೋರ್ಗಳ ಎದುರು ಯುವಕರು ಪ್ರತಿದಿನ ಸಾಲುಗಟ್ಟಿ ನಿಂತು ಕೊಳ್ಳುತ್ತಿದ್ದಾರೆ. ಇದರ ಜೊತೆ ಬ್ಲಿಂಕಿಟ್ ಕೆಲವೇ ನಿಮಿಷಗಳಲ್ಲಿ ಐ ಫೋನನ್ನು ನಿಮ್ಮ ಮನೆಗೆ ತಲುಪಿಸುತ್ತಿದೆ. ಇದೀಗ ಜಿಯೋ ಸಂಸ್ಥೆ ಐ ಫೋನ್-15 ಕೊಂಡವರಿಗೆ 6 ತಿಂಗಳ ಕಾಲ ಪ್ರತಿ ದಿನ 3 ಜಿಬಿ ನೆಟ್, ಅನಿಯಮಿತ ಕರೆ, 1೦೦ ಎಸ್ಎಂಎಸ್ ಉಚಿತವಾಗಿ ನೀಡುವುದಾಗಿ ಆಫರ್ ಘೋಷಣೆ ಮಾಡಿದೆ.

ಇದಕ್ಕಾಗಿ ಜಿಯೋ ವಿಧಿಸಿರುವ ಕಂಡಿಷನ್ಗಳು:

ಗ್ರಾಹಕರು, ರಿಲಯನ್ಸ್ ಡಿಜಿಟಲ್ ಮಾರ್ಟ್, ಜಿಯೋ ಮಾರ್ಟ್, ರಿಲಯನ್ಸ್ ರಿಟೇಲ್ ಸ್ಟೋರಗಳಲ್ಲಿ ಐ ಫೋನ್ -15 ಸೀರಿಸ್ ಖರೀದಿಸಬೇಕು. ಹೀಗೆ ಖರೀದಿಸಿದ ಗ್ರಾಹಕರಿಗೆ ಪ್ರತಿ ತಿಂಗಳು 399 ರೂ. ಬೆಲೆಯ ರೀಚಾರ್ಜ್ ಉಚಿತವಾಗಿ ಸಿಗಲಿದೆ.

ಆಫರ್ ಜಿಯೋ ಸಿಮ್ ಹೊಂದಿದವರಿಗೆ ಮಾತ್ರ!:

ನೀವು ಐ ಫೋನ್ ಖರೀದಿಸುವ ವೇಳೆ ನೀವು ಜಿಯೋ ಸಿಮ್ ಬಳಕೆ ಮಾಡುತ್ತಿಲ್ಲವಾದಲ್ಲಿ ನಿಮಗೆ ಈ ಆಪರ್ ಲಭ್ಯವಾಗುವುದಿಲ್ಲ. ಈ ಆಫರ್ ಲಾಭ ಪಡೆಯಬೇಕು ಎಂದಾದರೆ ನೀವು ಜಿಯೋ ಸಿಮ್ ಖರೀದಿಸಬೇಕಾಗುತ್ತದೆ. ಆಗ ಮಾತ್ರ ನೀವು ಈ ಆಫರ್ನ ಲಾಭ ಪಡೆಯಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಈಗಿರುವ ಸಿಮ್ನ್ನು ಜಿಯೋಗೆ ಪೋರ್ಟ್ ಮಾಡಿ ಸಹ ಈ ಆಫರ್ ಪಡೆದುಕೊಳ್ಳಬಹುದು.

ಈ ಆಫರ್ ಸೆ.22 ರಿಂದ ಮಾರುಕಟ್ಟೆಯಲ್ಲಿ ಆರಂಭಗೊಂಡಿದೆ. ಐ ಫೋನ್ -15 ಹಾಗೂ ಐ ಫೋನ್ 15 ಪ್ಲಸ್ ಫೋನ್ಗಳನ್ನು ಭಾರತದಲ್ಲಿಯೇ ತಯಾರು ಮಾಡಲಾಗುತ್ತಿದೆ.

ಐ ಫೋನ್ ಸ್ಟೋರ್ಗಳನ್ನು ಬೆಳಿಗ್ಗೆ 8 ಗಂಟೆಗೆ ತೆರೆಯಲಾಗುತ್ತದೆ. ಗ್ರಾಹಕರ ಅನುಕೂಲಕ್ಕಾಗಿಯೇ ಈ ರೀತಿ ಮಾಡಲಾಗಿದೆ. ಹಾಗಾಗಿ ಐ ಫೋನ್ ಕೊಳ್ಳುವ ಇಷ್ಟ ಇದ್ದವರು ಈ ಆಫರ್ ಬಳಸಿಕೊಳ್ಳುವುದು ಉತ್ತಮ ಎಂದೇ ಹೇಳಬಹುದು.

Comments are closed.