Car Service: ಸ್ವಲ್ಪ ಯಾಮಾರಿದ್ರೂ ಕಳೆದುಕೊಳ್ಳುತ್ತೀರಿ ಹಣ, ವಾಹನ: ನಿಮ್ಮ ಕಾರನ್ನು ಮೆಕ್ಯಾನಿಕ್, ಸರ್ವಿಸ್ ಸೆಂಟರ್ ಗೆ ಬಿಡುವಾಗ ಈ ಕೆಲಸ ಮಾಡಿ!

Car Service: ಈಗ ಸಾಮಾನ್ಯವಾಗಿ ಪ್ರತಿಯೊಬ್ಬರ ಬಳಿಯೂ ಕಾರು ಇದ್ದೆ ಇರುತ್ತದೆ. ಕೆಲವರು ಹೊಸ ಕಾರನ್ನು ಕೊಂಡುಕೊಂಡರೆ ಇನ್ನು ಕೆಲವರು ಬಳಕೆಯಾದ ಕಾರನ್ನು ಕೊಂಡುಕೊಳ್ಳುತ್ತಾರೆ. ಮನೆಮಂದಿಯೆಲ್ಲ ಆರಾಮವಾಗಿ ಪ್ರವಾಸ ಮಾಡಲು ಇದು ಅನುಕೂಲಕರವಾಗಿದೆ. ನೀವು ಕಾರು ಹೊಂದಿದ್ದರಷ್ಟೇ ಸಾಲದು, ಅದರ ಸಂಪೂರ್ಣ ಮಾಹಿತಿ ನಿಮಗೆ ಇರಬೇಕು. ಇಲ್ಲದಿದ್ದಲ್ಲಿ ಸರ್ವಿಸ್ ಸೆಂಟರ್ಗಳಲ್ಲಿ ನಿಮ್ಮ ಕಣ್ಮುಂದೆ ನಿಮಗೆ ಮೋಸ ಮಾಡಿದರೂ ನಿಮಗೆ ತಿಳಿಯುವುದಿಲ್ಲ. ಹಾಗಾಗಿ ನೀವು ನಿಮ್ಮ ಕಾರಿನ ಸಂಪೂರ್ಣ ಮಾಹಿತಿ ಹೊಂದುವುದು ಸಹ ಅವಶ್ಯಕವಾಗಿದೆ. ಇಲ್ಲದಿದ್ದಲ್ಲಿ ನಿಮ್ಮ ಬಳಿ ಒಂದಕ್ಕೆ ಎರಡು ಪಟ್ಟು ಹಣ ಪೀಕುತ್ತಾರೆ.

ಡ್ರೈ ಕ್ಲೀನಿಂಗ್:

ಪ್ರತಿಯೊಂದು ಕಾರಿಗೂ ಡ್ರೈ ಕ್ಲೀನಿಂಗ್ ಮಾಡಿಸುವುದು ಅವಶ್ಯ.ಆದರೆ ಹೊಸದಾಗಿ ಕೊಂಡುಕೊಂಡು ಮೊದಲ ಬಾರಿಗೆ ಸರ್ವಿಸ್ಗೆ ಒಯ್ದ ಗಾಡಿಗೂ ಡ್ರೈ ಕ್ಲೀನಿಂಗ್ ಹೆಸರಿನಲ್ಲಿ ನಿಮ್ಮ ಬಳಿ ದುಡ್ಡು ವಸೂಲಿ ಮಾಡಲಾಗುತ್ತದೆ. ಇದರಿಂದ ನಿಮ್ಮ ಜೇಬಿಗೆ 15೦೦ ರೂ. ವರೆಗೂ ಕತ್ತರ ಬೀಳಬಹುದು ನಿಮ್ಮ ಕಾರು ಸುಸಜ್ಜಿತವಾಗಿದ್ದಲ್ಲಿ ನೀವು ಡ್ರೈ ಕ್ಲೀನಿಂಗ್ ಮಾಡಿಸುವ ಅವಶ್ಯಕತೆ ಇಲ್ಲ.

ಎಂಜಿನ್ ಡಿಕಾರ್ಬನೈಸಿಂಗ್ ಮತ್ತು ಡ್ರಸ್ಸಿಂಗ್

ಯಾವುದೇ ಕಾರು ಸರಿಯಾಗಿ ಓಡಬೇಕು. ಎಲ್ಲಿಯೂ ಸಮಸ್ಯೆ ಎದುರಾಗಬಾರದು ಎಂದಾದರೆ ಅದರ ಇಂಜಿನ್ ಸರಿಯಾಗಿರಬೇಕಾಗುತ್ತದೆ. ಇಂಜಿನ್ ಸರಿ ಇದ್ದಲ್ಲಿ ಕಾರು ಎಲ್ಲಿಯೂ ಸಮಸ್ಯೆ ನೀಡುವುದಿಲ್ಲ. ಈಗಿನ ಕಾರುಗಳು ಹೆಚ್ಚಿನ ಧಕ್ಷತೆಯೊಂದಿಗೆ ಬರುತ್ತದೆ. ಹಾಗಾಗಿ ಸುಮಾರು ಐವತ್ತು ಸಾವಿರ ಕೀ.ಮೀ ಓಡುವ ವರೆಗೂ ನೀವು ಡಿಕಾರ್ಬನೈಸಿಂಗ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ನೀವು ಸರ್ವಿಸ್ ಸೆಂಟರಿಗೆ ಹೋದಾಗ ನಿಮ್ಮ ಕಾರು 15-2೦ ಸಾವಿರ ಕೀಮಿ ಓಡಿದ್ದರೂ ಡಿ ಕಾರ್ಬನೈಸಿಂಗ್ ಹೆಸರಿನಲ್ಲಿ ಬಿಲ್ ಮಾಡುತ್ತಾರೆ. ಹೀಗೆ ಡಿಕಾರ್ಬನೈಸಿಂಗ್ ಮಾಡಿಸಿದಲ್ಲಿ ನೀವು ಹೆಚ್ಚುವರಿಯಾಗಿ 18೦೦ ರೂ.ಗಳನ್ನು ನೀಡಬೇಕಾಗುತ್ತದೆ. ನಿಮ್ಮ ಕಾರಿನ ಇಂಜಿನ್ ಸರಿ ಇದ್ದಾಗ ಈ ರೀತಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ.

ಫ್ಯೂಯೆಲ್ ಇಂಜೆಕ್ಟರ್ ಸ್ವಚ್ಛಗೊಳಿಸುವುದು;

ಫ್ಯೂಯೆಲ್ ಇಂಜೆಕ್ಟರ್ ಸ್ವಚ್ಛಗೊಳಿಸಬೇಕೆ ಬೇಡವೇ ಎನ್ನುವುದನ್ನು ನೀವು ಓಬಿಡಿ ಪರೀಕ್ಷೆ ಇಲ್ಲವೇ ತಂತ್ರಜ್ಞರ ಸಹಾಯದಿಂದ ತಿಳಿದುಕೊಳ್ಳಬಹುದು. ಈ ರೀತಿ ಪರೀಕ್ಷೆ ವೇಳೆ ಅವರು ಹೇಳಿದ್ದನ್ನೇ ಗ್ರಾಹಕರು ನಂಬಬೇಕಾಗುತ್ತದೆ. ತಮ್ಮ ಕಾರು ಸರಿ ಇರಬೇಕು ಎನ್ನುವ ಕಾರಣಕ್ಕಾಗಿ ಅವರು ಹೇಳಿದ್ದಕ್ಕೆ ಹೂಂ ಎನ್ನಬೇಕಾಗುತ್ತದೆ. ಆದರೆ ನೀವು ಪ್ರತಿ ಬಾರಿಯೂ ಸರ್ವಿಸ್ಗೆ ಹೋದಾಗ ಫ್ಯೂಯೆಲ್ ಇಂಜೆಕ್ಟರ್ ಸ್ವಚ್ಛಗೊಳಿಸುವ ಅಗತ್ಯ ಇರುವುದಿಲ್ಲ ಎನ್ನುವುದನ್ನು ನೀವು ತಿಳಿದುಕೊಂಡಿರಬೇಕು.

Comments are closed.