Senior Citizen Pension: ಲಕ್ಷ್ಮಿ ಹೆಬ್ಬಾಳ್ಕರ್ ಮಾತಿಗೆ ಸ್ಪಂದಿಸಿದ ಸಿಎಂ ಸಿದ್ಧರಾಮಯ್ಯ; ಹಿರಿಯ ನಾಗರಿಕರಿಗೆ ಹೊಸ ಯೋಜನೆ ಘೋಷಣೆ; ಅಕ್ಟೋಬರ್ ಒಂದರಿಂದಲೇ ಜಾರಿ!

Senior Citizen Pension: ಮೊನ್ನೆ ಹಿರಿಯ ನಾಗರೀಕರ ದಿನಾಚರಣೆ ಆಚರಿಸಲಾಯಿತು. ಈ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಿರಿಯ ನಾಗರೀಕರ ಪರವಾಗಿ ಮಾಡಿದ ಮನವಿಗೆ ಸಿಎಂ ಸಿದ್ಧರಾಮಯ್ಯ ತಕ್ಷಣ ಸ್ಪಂದನೆ ನೀಡಿದ್ದು ಹಿರಿಯ ನಾಗರಿಕರಿಗೆ ಸಂತಸದ ಸುದ್ದಿ ತಿಳಿಸಿದ್ದಾರೆ. ಇದನ್ನು ಓದಿ: Pitru Paksha 2023: ಪಿತೃಪಕ್ಷದ ದಿನಗಳಲ್ಲಿ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ; ಈ ತಪ್ಪು ಮಾಡಿದ್ರೆ ಏನಾಗುತ್ತೆ ಗೊತ್ತಾ?

ಹಿರಿಯ ನಾಗರೀಕರ ದಿನಾಚರಣೆ ಸಮಾರಂಭದಲ್ಲಿ ಮೊದಲು ಸಾಧಕ ಹಿರಿಯ ನಾಗರೀಕರನ್ನು ಸನ್ಮಾನ ಮಾಡಲಾಯಿತು. ನಂತರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ನಮ್ಮ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರವಾಗಿದೆ. ಸರ್ಕಾರ ರಚನೆಯಾಗಿ ಆರು ತಿಂಗಳೊಳಗೆ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ. ಇದರಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2೦೦೦ ರೂ. ನೀಡುವ ಗೃಹಲಕ್ಷ್ಮಿಯೂ ಒಂದಾಗಿದೆ. ಈಗ ಹಿರಿಯ ನಾಗರೀಕರು ನನಗೆ ಮನವಿ ಮಾಡಿದ್ದಾರೆ. ನಮಗೆ ಇಲ್ಲಿವರೆಗೆ 12೦೦ ರೂ. ಮಾಸಿಕ ಪಿಂಚಣಿ ಬರುತ್ತಿದೆ. ಇದನ್ನು ಸಹ 2೦೦೦ರೂ.ಗೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎಂದರು.

ಮುಖ್ಯಮಂತ್ರಿಗಳು ಸಹ ಇದೇ ವೇದಿಕೆಯಲ್ಲಿ ಇರುವುದರಿಂದ ಈಗಲೇ ಅವರ ಗಮನಕ್ಕೆ ತರುತ್ತಿದ್ದೇನೆ. ನೀವು ಸಹ ಹಿರಿಯರಿದ್ದೀರಿ. ನಿಮಗೂ ಹಿರಿಯ ನಾಗರೀಕರ ಕಷ್ಟಗಳ ಅರಿವಿದೆ. ಆದ್ದರಿಂದ ಹಿರಿಯ ನಾಗರೀಕರ ಪಿಂಚಣಿಯನ್ನು 12೦೦ ರೂ.ನಿಂದ 2೦೦೦ ರೂ.ಗೆ ಏರಿಕೆ ಮಾಡಬೇಕು ಎಂದು ಸಚಿವರು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಮುಂದಿನ ಬಜೆಟ್ನಲ್ಲಿ ಹಿರಿಯ ನಾಗರೀಕರ ಪಿಂಚಣಿಯನ್ನು 2೦೦೦ ರೂ.ಗೆ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎನ್ನುವ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿಗೆ ಸ್ಥಳದಲ್ಲಿಯೇ ಸ್ಪಂದಿಸುವ ಜೊತೆ ಹಿರಿಯ ನಾಗರೀಕರಿಗೆ ಗುಡ್ ನ್ಯೂಸ್ ನೀಡಿದರು. ಇದನ್ನು ಓದಿ: Vastu Tips: ನಿಮ್ಮ ಫ್ರಿಜ್ ನಲ್ಲಿ  ಬೇರೆ ವಸ್ತು ಇಡುವುದು ಹಾಗಿರಲಿ, ಇಂದು ಒಂದು ರೂ. ನಾಣ್ಯ ಇಟ್ಟು ನೋಡಿ | ಎಂಥ ಮ್ಯಾಜಿಕ್ ಆಗಲಿದೆ ಗೊತ್ತಾ?  

ಸದ್ಯ ರಾಜ್ಯದಲ್ಲಿ ಸುಮಾರು 49 ಲಕ್ಷ ಫಲಾನುಭವಿಗಳು ವೃದ್ಧಾಪ್ಯ ವೇತನ ಪಡೆದುಕೊಳ್ಳುತ್ತಿದ್ದಾರೆ. ಇವರಿಗೆ ಕೇವಲ 12೦೦ ರೂ. ಪ್ರತಿ ತಿಂಗಳು ನೀಡಲಾಗುತ್ತಿದ್ದು, ಇದು ನಮ್ಮ ಅಗತ್ಯ ಕರ್ಚುಗಳಿಗೆ ಸಾಕಾಗುತ್ತಿಲ್ಲ. ನಮಗೆ ಔಷಧಗಳಿಗೆ ಸಾವಿರಾರು ರೂ. ಖರ್ಚಾಗುತ್ತದೆ. ಹಾಗಾಗಿ ಕನಿಷ್ಟ 2೦೦೦ ರೂ. ಮಾಸಿಕವಾಗಿ ನೀಡಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತ ಬಂದಿದ್ದರು. ಅಂತೂ ಇಂತೂ ಈ ವಿಚಾರವು ಇದೀಗ ಸರ್ಕಾರಕ್ಕೆ ಮುಟ್ಟಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಕೊಟ್ಟ ಮಾತು ಉಳಿಸಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಾಗಿದೆ.

Comments are closed.