Pitru Paksha 2023: ಪಿತೃಪಕ್ಷದ ದಿನಗಳಲ್ಲಿ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ; ಈ ತಪ್ಪು ಮಾಡಿದ್ರೆ ಏನಾಗುತ್ತೆ ಗೊತ್ತಾ?

Pitru Paksha 2023: ಸಪ್ಟೆಂಬರ್ 29, 2023 ರಿಂದ ಆರಂಭವಾದ ಪಿತೃ ಪಕ್ಷ ಅಕ್ಟೋಬರ್ 14ರ ವರೆಗೆ ಮುಂದುವರೆಯಲಿದೆ. ಪಿತೃ ಪಕ್ಷವನ್ನು ಹಿರಿಯರಿಗೆ ಗೌರವ ನೀಡುವುದಕ್ಕೆ ಮೀಸಲಿಡಲಾಗಿದೆ. ಈ ಸಂದರ್ಭದಲ್ಲಿ ಕೆಲವು ಪ್ರಮುಖ ಕೆಲಸಗಳನ್ನು ಮಾಡಬೇಕು ಹಾಗೂ ಕೆಲವು ಕೆಲಸಗಳನ್ನು ಮಾಡಲೇಬಾರದು ಎನ್ನುತ್ತೇ ವೈದಿಕ ಶಾಸ್ತ್ರ. ಪಿತೃಪಕ್ಷದಲ್ಲಿ ನಿಧನರಾದ ಹಿರಿಯರಿಗೆ ಶಾಸ್ತ್ರಗಳನ್ನು ಮಾಡಲಾಗುತ್ತದೆ ಈ ಸಂದರ್ಭದಲ್ಲಿ ನೀತಿ ನಿಯಮ ರೀತಿ ರಿವಾಜುಗಳನ್ನು ಫಾಲೋ ಮಾಡಬೇಕು.

ಪಿತೃಪಕ್ಷದ ಸಂದರ್ಭದಲ್ಲಿ ಬಡವರಿಗೆ ಬ್ರಾಹ್ಮಣರಿಗೆ ಕೆಲವು ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು ಆದರೆ ಯಾವ ವಸ್ತುಗಳನ್ನು ದಾನ ಮಾಡಬೇಕು ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು.

ಪಿತೃಪಕ್ಷದಲ್ಲಿ ಸಾಸಿವೆ ಎಣ್ಣೆ ದಾನ ಮಾಡಬಾರದು ಅದನ್ನು ದಾನ ಮಾಡಿದರೆ ಹಿರಿಯರು ಕೋಪಗೊಳ್ಳುತ್ತಾರೆ ಎಂದು ಹೇಳಲಾಗುತ್ತೆ ಹಾಗಾಗಿ ಯಾವುದೇ ಕಾರಣಕ್ಕೂ ಯಾರಿಗೂ ಸಾಸಿವೆ ಎಣ್ಣೆ ದಾನ ಮಾಡಬೇಡಿ.

ಪಿತೃಪಕ್ಷದಲ್ಲಿ ಯಾರಿಗೆ ಆಗಲಿ ಆಹಾರವನ್ನು ದಾನ ಮಾಡುವುದು ಒಳ್ಳೆಯದು ಆದರೆ ತಂಗಳು, ಉಳಿದ ಆಹಾರ ದಾನ ಮಾಡಬಾರದು. ಹಾಗೂ ಸುಮ್ಮನೆ ವೇಸ್ಟ್ ಆಗುತ್ತಲ್ಲ ಎನ್ನುವಂತೆ ಇರುವ ಆಹಾರವನ್ನು ದಾನ ಮಾಡಬಾರದು.

ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆಗಳನ್ನ ಮಾಡಬೇಡಿ. ಕಪ್ಪು ಬಟ್ಟೆ ಬಿಳಿ ಬಟ್ಟೆ ದಾನ ಮಾಡಿದ್ರೆ ಪಿತೃಪಕ್ಷದಲ್ಲಿ ಹಿರಿಯರ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತೆ.  ಅದೇ ರೀತಿ ಹಳೆಯ ಬಟ್ಟೆಗಳನ್ನು ಕೂಡ ದಾನ ಮಾಡಬಾರದು ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಕಬ್ಬಿಣದ ವಸ್ತುಗಳನ್ನು ದಾನ ಮಾಡಿದರೆ ಪಿತೃ ದೋಷ ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ ಹಾಗೂ ಪಿತೃ ಪಕ್ಷದಲ್ಲಿ ಈರುಳ್ಳಿ ಬೆಳ್ಳುಳ್ಳಿ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಮರಣ ಹೊಂದಿದ ಹಿರಿಯರಿಗೆ ಗೌರವ ನೀಡುವಂತಹ ಕೆಲಸವನ್ನು ಮಾಡಬೇಕು.

Comments are closed.