Vastu Tips: ನಿಮ್ಮ ಫ್ರಿಜ್ ನಲ್ಲಿ  ಬೇರೆ ವಸ್ತು ಇಡುವುದು ಹಾಗಿರಲಿ, ಇಂದು ಒಂದು ರೂ. ನಾಣ್ಯ ಇಟ್ಟು ನೋಡಿ | ಎಂಥ ಮ್ಯಾಜಿಕ್ ಆಗಲಿದೆ ಗೊತ್ತಾ?  

Vastu Tips: ಈ ಅಧುನಿಕ ಯುಗದಲ್ಲಿ ಎಂತಹ ಬಡವರ ಮನೆಯಲ್ಲಿಯೂ ಫ್ರಿಜ್, ಟಿವಿ, ವಾಶಿಂಗ್ ಮಶಿನ್ ಸೋಫಾ, ಕೂಲರ್ ಎಲ್ಲವೂ ಇದ್ದೆ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಫ್ರಿಜ್ ಇಟ್ಟುಕೊಂಡೆ ಇರುತ್ತಾರೆ. ಯಾಕೆಂದರೆ ಆಹಾರ ಪದಾರ್ಥ, ತರಕಾರಿಗಳನ್ನು ತಾಜವಾಗಿ ಬಹಳ ದಿನಗಳ ಕಾಲ ಕಾಯ್ದುಕೊಳ್ಳಲು ಫ್ರಿಜ್ ಅವಶ್ಯಕವಾಗಿದೆ. ಇಂತಹ ಫ್ರಿಜ್ ಒಳಗೆ ನೀವು ಒಂದು ರೂ. ನಾಣ್ಯ ಇಡುವುದರಿಂದ ನಿಮ್ಮ ಆರೋಗ್ಯ ವೃದ್ಧಿಸುತ್ತದೆ!

ಫ್ರಿಜ್ನಲ್ಲಿಟ್ಟ ಆಹಾರವನ್ನು ಫ್ರಿಜ್ನಿಂದ ತೆಗೆದ ತಕ್ಷಣ ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದಾಗಿ ಗ್ಯಾಸ್ಟ್ರಿಕ್, ಅಜೀರ್ಣದಂತಹ ಉದರಬಾಧೆಗಳು ಉಂಟಾಗಬಹುದು.

ದೀರ್ಘ ಕಾಲದವರೆಗೆ ವಿದ್ಯುತ್ ಕಡಿತವಾಗಿದ್ದರೆ ಫ್ರಿಜ್ನಲ್ಲಿರುವ ಐಸ್ ಕರಗುತ್ತದೆ. ಹೀಗೆ ಕರಗಿದ ಐಸ್ ಫ್ರಿಜ್ ಒಳಗಿರುವ ಆಹಾರ ಪದಾರ್ಥದೊಂದಿಗೆ ಸೇರಿಕೊಳ್ಳುವುದರಿಂದ ಬ್ಯಾಕ್ಟಿರಿಯಾ ಉತ್ಪತ್ತಿಯಾಗುತ್ತದೆ. ಇಂತಹ ಆಹಾರ ಪದಾರ್ಥವನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಇಂತಹ ಸಮಸ್ಯೆಯನ್ನು ನೀವು ಒಂದು ರೂ. ನಾಣ್ಯದಿಂದ ಪರಿಹರಿಸಬಹುದು. ಒಂದು ಬೌಲ್ನಲ್ಲಿ ನೀರು ಹಾಕಿಕೊಂಡು ಆ ಬೌಲ್ನ್ನು ಫ್ರಿಜ್ನಲ್ಲಿರುವ ಡೀಪ್ ಫ್ರಿಜ್ನಲ್ಲಿಡಬೇಕು. ಆ ನೀರು ಮಂಜುಗಡ್ಡೆಯಾದ ನಂತರ ಅದರ ಮೇಲೆ ಒಂದು ರೂ. ನಾಣ್ಯ ಇಡಬೇಕು.

ಬೆಳಿಗ್ಗೆ ನೀವು ಈ ರೀತಿ ಮಾಡಿಟ್ಟು ಕಚೇರಿಗೆ ಕೆಲಸಕ್ಕೆ ತೆರಳಬೇಕು. ನಂತರ ಸಂಜೆ ವಾಪಸ್ ಬಂದ ಮೇಲೆ ಒಂದು ರೂಪಾಯಿ ನಾಣ್ಯವನ್ನು ಪರಿಶೀಲನೆ ಮಾಡಬೇಕು. ಒಂದು ವೇಳೆ ನೀವು ಇಲ್ಲದ ವೇಳೆಯಲ್ಲಿ ವಿದ್ಯುತ್ ಬಹಳ ಕಾಲ ಕಡಿತಗೊಂಡಿದ್ದರೆ ಆ ನಾಣ್ಯ ಬೌಲ್ನಲ್ಲಿ ಸ್ವಲ್ಪ ಕೆಳಭಾಗಕ್ಕೆ ಹೋಗಿರುತ್ತದೆ. ಈ ರೀತಿ ನಾಣ್ಯ ಕೆಳಭಾಗಕ್ಕೆ ಹೋಗಿದ್ದರೆ ಆ ಫ್ರಿಜ್ನಲ್ಲಿರುವ ಆಹಾರಗಳು ಕೆಟ್ಟಿದೆ ಎಂದರ್ಥ.

ನೀವು ಈ ಸಣ್ಣ ಟ್ರಿಕ್ಸ್ ಬಳಸುವುದರಿಂದ ಕೆಟ್ಟ ಪದಾರ್ಥ ತಿಂದು ನಿಮ್ಮ ಆರೋಗ್ಯ ಕೆಡಿಸಿಕೊಳ್ಳುವುದು ತಪ್ಪುತ್ತದೆ. ಸಾಮಾನ್ಯವಾಗಿ ಯಾವುದೇ ಅಡುಗೆಯನ್ನಾದರೂ ಎರಡು ದಿನಗಳ ನಂತರ ಬಳಕೆ ಮಾಡಬಾರದು. ಹೆಚ್ಚಿಗೆ ಇದ್ದಲ್ಲಿ ಅದನ್ನು ಚೆಲ್ಲಬೇಕು. ಮತ್ತು ತಾಜಾ ಅಡುಗೆ ಮಾಡಿ ಸೇವನೆ ಮಾಡಬೇಕು. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಫ್ರಿಜ್ನಲ್ಲಿ ಇಟ್ಟಿದ್ದೆವೆ ಎಂದು ಸೇವನೆ ಮಾಡಿದರೆ ಆಸ್ಪತ್ರೆಗೆ ಓಡಾಡುವುದು ತಪ್ಪುವುದಿಲ್ಲ.

Comments are closed.