TATA Car: ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಇಷ್ಟದ ಕಾರು; ಬಡವರ ಕೈಗೆಟುಕುವ ಕಾರು| ಅಬ್ಬಾ ಇಷ್ಟು ಕಡಿಮೆ ಬೆಲೆನಾ!

TATA Car ಭಾರತದಲ್ಲಿ ವಾಹನ ಉತ್ಪಾದನಾ ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್ (TATA Motors)  ಸಂಸ್ಥೆಯದು ಬಹುದೊಡ್ಡ ಹೆಸರು. ಈ ಸಂಸ್ಥೆಯ ಮಾಲೀಕ ರತನ್ ಟಾಟಾ. ಭಾರತದಲ್ಲಿ ಅತಿಹೆಚ್ಚು ಕಾರುಗಳನ್ನು ಉತ್ಪಾದಿಸುವ ಹಾಗೂ ಅತಿ ಹೆಚ್ಚು ಭದ್ರತಾ ತಂತ್ರಜ್ಞಾನ ಅಳವಡಿಸುವ ಸಂಸ್ಥೆಗಳಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಹಾಗಾಗಿಯೇ ಟಾಟಾ ಕಂಪನಿಯ ಕಾರುಗಳ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟ ಆಗುತ್ತದೆ. ಇದೀಗ ಈ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಇ-ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.

ಈ ಕಾರಿನ ಮುಖ್ಯ ವಿಶೇಷವೆಂದರೆ ಈ ಕಾರನ್ನು ಸ್ವತಃ ರತನ್ ಟಾಟಾ (Ratan TATA) ಅವರೇ ಇಷ್ಟಪಟ್ಟಿದ್ದಾರೆ ಎನ್ನುವುದು. ಈ ಟಾಟಾ ನ್ಯಾನೋ (TATA Nano Car) ಕಾರು ಆಕರ್ಷಕವಾಗಿದೆ. ಈಗಾಗಲೇ ಕಾರು ಯಾವ ರೀತಿ ಇರಲಿದೆ ಎನ್ನುವುದರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕಾರಿನ ಲುಕ್ಕಿಗೆ ಕಾರು ಪ್ರಿಯರು ಫಿದಾ ಆಗಿದ್ದಾರೆ.

ಈ ಹೊಸ ಟಾಟಾ ನ್ಯಾನೋ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಸೌಲಭ್ಯ ಒದಗಿಸಲಾಗುತ್ತದೆ. ಇದಲ್ಲದೆ ಏಳು ಇಂಚಿನ ಇನ್ಫೋಟೆನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅಳವಡಿಸಲಾಗುತ್ತದೆ. ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ. ಆರು ಸ್ಪೀಕರ್ಗಳನ್ನು ನೀಡಲಾಗಿದೆ. ಇದರ ಜೊತೆ ಕಾರು ಪವರ್ ಸ್ಟೇರಿಂಗ್ ಹೊಂದಿರಲಿದೆ.

ಪವರ್ ವಿಂಡೋ ಸೇಫ್ಟಿ ಫಿಚರ್ಗಳಾಗಿರುವ ಇಬಿಡಿ ಎಬಿಎಸ್ ಹಾಗೂ ಇನ್ನಿತರ ಹಲವಾರು ತಂತ್ರಜ್ಞನವನ್ನು ಒಳಗೊಂಡಿದೆ. ಈ ಟಾಟಾ ನ್ಯಾನೋ ಕಾರು ಇಲೆಕ್ಟ್ರಿಕಲ್ ಮೋಡ್ ಹೊಂದಿರಲಿದೆ. ಇದರಲ್ಲಿ 17 ಕೆಡಬ್ಲ್ಯೂಎಚ್ ಬ್ಯಾಟರಿ ಅಳವಡಿಸಲಾಗಿದೆ. ಹಾಗಾಗಿ ನೀವು ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಈ ಕಾರನ್ನು 3೦೦ ಕಿಮೀ ವರೆಗೆ ಓಡಿಸಬಹುದಾಗಿದೆ.

ಈ ಹೊಸ ಟಾಟಾ ನ್ಯಾನೋ ಕಾರಿಗೆ ನಾಲ್ಕು ಲಕ್ಷ ರೂ. ಆಸುಪಾಸಿನಲ್ಲಿ ದರ ನಿಗದಿ ಮಾಡಬಹುದು ಎಂದು ತಿಳಿದು ಬಂದಿದೆ. ಆದ್ದರಿಂದ ಬಡವರೂ ಸಹಿತ ಈ ಕಾರನ್ನು ಸುಲಭವಾಗಿ ಕೊಂಡುಕೊಳ್ಳಬಹುದು. ಅಲ್ಲದೆ ಇಎಂಐ ಸೌಲಭ್ಯಗಳನ್ನು ಸಹ ಒದಗಿಸುವ ಸಾಧ್ಯತೆಗಳಿವೆ. ಈ ಕಾರಿನಲ್ಲಿ ನಾಲ್ಕು ಜನರು ಆರಾಮವಾಗಿ ಪ್ರಯಾಣಿಸಬುಹುದು. ಅಂದರೆ ಒಂದು ಕುಟುಂಬ ಆರಾಮವಾಗಿ ತಮಗೆ ಬೇಕಾದಲ್ಲಿ ಪ್ರವಾಸಕ್ಕೆ ತೆರಳಲು ಈ ಕಾರು ಅನುಕೂಲಕರವಾಗಿದೆ. ಅಲ್ಲದೆ ಪೆಟ್ರೋಲ್ ಹಾಕಿಸುವ ಚಿಂತೆಯೂ ಇರುವುದಿಲ್ಲ.

Comments are closed.