Business Ideas: ನಿಮ್ಮ ಬಳಿ 6೦,೦೦೦ ರೂ. ಇದ್ರೆ ಈ ಬ್ಯುಸಿನೆಸ್ ಶುರು ಮಾಡಿ; ಐದು ಲಕ್ಷ ರೂ. ವರೆಗೂ ಲಾಭ ಪಡೆಯಿರಿ !

Business Ideas: ಮಾರುಕಟ್ಟೆಯಲ್ಲಿ ಯಾವುದೇ ಒಂದು ವಸ್ತು ಮಾರಾಟ ಆಗುತ್ತದೆ ಎಂದರೆ ಮೊದಲು ಅದು ತಯಾರಾಗಬೇಕು. ಹಾಗಾಗಿ ವಸ್ತುಗಳನ್ನು ತಯಾರು ಮಾಡುವುದು ಸಹ ಒಂದು ಲಾಭದಾಯಕ ಉದ್ಯಮವಾಗಿ ಪರಿವರ್ತನೆಯಾಗಿದೆ. ಆದರೆ ಮಾರಾಟದಲ್ಲಿ ಇರುವ ಹಾಗೆ ಕೇವಲ ಮಾರಾಟ ಮಾತ್ರ ಮಾಡಿದರೆ ಇಲ್ಲಿ ಸಾಲವುದಿಲ್ಲ. ನೀವು ಕಚ್ಚಾ ವಸ್ತುಗಳನ್ನು  ತಂದುಕೊಳ್ಳಬೇಕಾಗುತ್ತದೆ. ಅಲ್ಲದೆ ಒಂದಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಬಳಿ ಒಂದು 6೦,೦೦೦ ರೂ. ಇದ್ದರೆ ನೀವು ಪೊರಕೆ ತಯಾರು ಮಾಡುವ ಉದ್ಯಮವನ್ನು ಶುರು ಮಾಡಬಹುದು. ಇಂದು ಎಲ್ಲ ಕಡೆ ಪೊರಕೆ ಮಾರಾಟವಾಗುತ್ತಿದೆ. ಅಲ್ಲದೆ ಮನೆ, ಕಚೇರಿ, ಮಾಲ್ ಹೀಗೆ ಎಲ್ಲ ಕಡೆ ಸ್ವಚ್ಛಗೊಳಿಸಲು ಪೊರಕೆ ಅತ್ಯವಶ್ಯ. ಹಾಗಾಗಿ ನೀವು ಪೊರಕೆ ತಯಾರು ಮಾಡುವ ಉದ್ಯಮ ಆರಂಭಿಸಿದರೆ ಲಾಭ ಗಳಿಸಬಹುದು.

ಈ ವ್ಯಾಪಾರದ ಸರಾಸರಿ ವೆಚ್ಚಗಳು ಪ್ರದೇಶವಾರು ಬದಲಾವಣೆ ಆಗುತ್ತದೆ. ಕೆಲವೊಂದು ಗ್ರಾಮೀಣ ಭಾಗಕ್ಕೆ ಹತ್ತಿರವಿರುವಲ್ಲಿ ಕಚ್ಚಾವಸ್ತುಗಳು, ಶೆಡ್ ಎಲ್ಲವೂ ಕಡಿಮೆ ದರದಲ್ಲಿ ನಿಮಗೆ ಲಭ್ಯವಾಗುತ್ತದೆ. ಹೀಗಾದಲ್ಲಿ ನೀವು ಹೆಚ್ಚಿನ ಲಾಭಗಳಿಸಬಹುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ತಿಳಿಸಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಗ್ರಾಮೋದ್ಯೋಗ ರೋಜಗಾರ್ಗೆ ಸಂಬಂಧಪಟ್ಟ ವಿವರಗಳ ಪ್ರಕಾರ ಪೊರಕೆ ತಯಾರಿಕೆಗೆ ಅಗತ್ಯ ಸಹಾಯ ನಿಮಗೆ ನೀಡಲಿದೆ.

ಪೊರಕೆ ತಯಾರಿಕಾ ಉದ್ಯಮ ಆರಂಭಕ್ಕೆ ಬೇಕು 5.58 ಲಕ್ಷ ರೂ. (Broomstick Business)

ಉದ್ಯಮ ಪ್ರಾರಂಭಿಸಬೇಕು ಎಂದರೆ ಮೊದಲು ಅದನ್ನು ಶುರು ಮಾಡುವ ಶೆಡ್ ನಿರ್ಮಿಸಬೇಕಾಗುತ್ತದೆ. ಈ ಶೆಡ್ ನಿರ್ಮಾಣಕ್ಕೆ 12೦೦ ಚದರ್ ಅಡಿಗೆ 2 ಲಕ್ಷ ರೂ. ವೆಚ್ಚವಾಗಲಿದೆ. ಸಸ್ಯ ಮತ್ತು ಯಂತ್ರೋಪಕರಣಗಳಿಗೆ 1.5  ಲಕ್ಷ ರೂ., ಪೀಠೋಪಕರಣಗಳು ಮತ್ತು ಪಿಚ್ಚರ್ಗಳಿಗೆ 45,೦೦೦ ರೂ., ಕಾರ್ಯಾಚರಣೆಯ ಪೂರ್ವ ವೆಚ್ಚಕ್ಕೆ 1.93 ಲಕ್ಷ ರೂ. ಬೇಕಾಗುತ್ತದೆ.

ಈ ಮೊದಲೆ ನಾವು ಹೇಳಿದಂತೆ ನಿಮ್ಮ ಬಳಿ 6೦,೦೦೦ ರೂ. ಇದ್ದರೆ ಸಾಕು. ಈ ಉದ್ಯಮವನ್ನು ಪ್ರಾರಂಭಿಸಬಹುದು. ನಿಮ್ಮ ಕೊಡುಗೆ ಶೇ.1೦ ಆದರೆ ಅಂದರೆ 59,೦೦೦ ರೂ. ಆಗಿರುತ್ತದೆ. ಇನ್ನು 3.56 ಲಕ್ಷ ರೂ. ಸಾಲ., 1.74 ಲಕ್ಷ ರೂ.ವನ್ನು ವರ್ಕಿಂಗ್ ಕ್ಯಾಪಿಟಲ್ ಲೋನ್ ಮಾಡಿದಲ್ಲಿ ನಿಮಗೆ ಹಣ ಹೊಂದಾಣಿಕೆ ಆಗಿಬಿಡುತ್ತದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವರದಿಗಳ ಪ್ರಕಾರ ಮೊದಲ ವರ್ಷ 28.62 ಲಕ್ಷ ರೂ., ಎರಡನೇ ವರ್ಷ 32.31 ಲಕ್ಷ ರೂ., ಮೂರನೇ ವರ್ಷ 3೦.51 ಲಕ್ಷ ರೂ., ನಾಲ್ಕನೇ ವರ್ಷ 32.41 ಲಕ್ಷ ರೂ. ಲಾಭವನ್ನು ನಿರೀಕ್ಷಿಸಬಹುದಾಗಿದೆ.

ಕೆವಿಐಸಿ ನಿವ್ವಳ ಲಾಭವನ್ನು ಸೂಚಿಸಿದ್ದು, ಅದರ ಪ್ರಕಾರ ಮೊದಲ ವರ್ಷ 4.19 ಲಕ್ಷ ರೂ., ಎರಡನೇ ವರ್ಷ 5.7 ಲಕ್ಷ ರೂ. ಮೂರನೇ ವರ್ಷ 5.36 ಲಕ್ಷ ರೂ., ನಾಲ್ಕನೇ ವರ್ಷ 5.57 ಲಕ್ಷ ರೂ. ಲಾಭ ಗಳಿಸಬಹುದಾಗಿದೆ.

Comments are closed.