Maruti MPV: 7 ಸೀಟರ್ ಕಾರು ಕೇವಲ 5 ಲಕ್ಷಕ್ಕೆ; ಖರೀದಿ ಮಾಡಲು ಮುಗಿಬಿದ್ದ ಜನ!

Maruti MPV: ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ಮಾರುತಿ ಸುಜುಕಿ ಕಂಪನಿಗೆ ದೊಡ್ಡ ಮಟ್ಟದ ಹೆಸರಿದೆ. ಈ ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ದೊಟ್ಟ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಇ ಕಂಪನಿಯು ಕಾಲಕಾಲಕ್ಕೆ ಜನರ ಅಭಿರುಚಿಗೆ ತಕ್ಕಂತೆ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದೆ. ಇದೀಗ ಏಳು ಆಸನಗಳುಳ್ಳ ಹೊಸ ಮಾರುತಿ ಸುಜುಕಿ ಕಾರನ್ನು ಬಿಡುಗಡೆ ಮಾಡಲು ಸದ್ದಿಲ್ಲದೆ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಸದ್ಯ ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ಮಾರುತಿ ಸುಜುಕಿ ಕಂಪನಿ ಸಿದ್ಧವಾಗಿದೆ. ಈ ಕಾಲಕ್ಕೆ ಜನರು ಏನನ್ನು ಬಯಸುತ್ತಾರೆ ಎನ್ನುವುದನ್ನು ಅರಿತಿರುವ ಕಂಪನಿಯು ಹೊಸ ರೂಪಾಂತರದಲ್ಲಿ ಕಾರನ್ನು ಬಿಡುಗಡೆ ಮಾಡಲಿದೆ. ಕಾರಿನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾರು ಬಹಳ ಆಕರ್ಷಕಾಗಿದೆ.

ಮಾರುತಿ ಸುಜುಕಿ ಕಂಪನಿಯು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಾರುತಿ ಎಕೋ ಕಾರನ್ನು ಸದ್ಯವೇ ಬಿಡುಗಡೆ ಮಾಡಲಿದೆ. ಈ ಕಾರಿನ ಒಳ ಹಾಗೂ ಹೊರಭಾಗದಲ್ಲಿ ವಿಶೇಷ ಫೀಚರ್ಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿ 1.2 ಲೀಟರ್ ಸಾಮರ್ಥ್ಯದ ಡ್ಯುಯೆಲ್ ಜೆಟ್ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ. ಈ ಇಂಜಿನ್ ಗರೀಷ್ಟ 8೦.6 ಪಿಎಸ್ ಪವರ್ ಸಾಮರ್ಥ್ಯವನ್ನು ಹೊಂದಿದ್ದು 104 ಎನ್ಎಂ ಸಾಮರ್ಥ್ಯದ ಟರ್ಕ ಉತ್ಪಾದಿಸುವ ಶಕ್ತಿ ಹೊಂದಿದೆ.

27 ಕೀ.ಮಿ ಮೈಲೇಜ್

ಇನ್ನು ಈ ಕಾರಿನಲ್ಲಿ ಸಿಎನ್ಜಿ ಆಯ್ಕೆಯನ್ನು ನೀಡಲಾಗಿದೆ. 71.65 ಪಿಎಸ್ 95 ಎನ್ಎಂ ಟರ್ಕ್ ಉತ್ಪಾದಿಸುವ ಸಿಎನ್ಜಿ ಇಂಜಿನ್ ಸಾಮರ್ಥ್ಯ ಹೊಂದಿದೆ. ಈ ಕಾರು ಪೆಟ್ರೋಲ್ನಲ್ಲಿ 2೦ ಕೀ.ಮಿ ಹಾಗೂ ಸಿಎನ್ಜಿಯಲ್ಲಿ 27 ಕೀ.ಮಿ ಮೈಲೇಜ್ ನೀಡಲಿದೆ.

ಮಾರುತಿ ಸುಜುಕಿ ಎಕೋ ಕಾರು ಹಲವು ಬಣ್ಣಗಳಲ್ಲಿ ಲಭ್ಯವಿದೆ. ನಿಮಗೆ ಯಾವ ಬಣ್ಣ ಇಷ್ಟವಾಗುತ್ತದೆಯೋ ಆ ಬಣ್ಣದ ಕಾರನ್ನು ನೀವು ಕೊಂಡುಕೊಳ್ಳಬಹುದು. ಈ ಕಾರಿನ ಬೆಲೆಯು 5 ಲಕ್ಷ ರೂ.ಗಳಾಗಿದೆ. ಅದರಲ್ಲಿಯೂ ನೀವು ಇಎಂಐ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಹಾಗಾಗಿ ಇದು ಗ್ರಾಹಕರಿಗೆ ಸುಲಭವಾಗಿ ಕೈಗೆಟುಕುತ್ತದೆ. ನೀವು ಪೆಟ್ರೋಲ್ ಬೇಡ ಎಂದುಕೊಂಡರೆ ಸಿಎನ್ಜಿ (CNG) ಬಳಸಿ ಬೇಕಾದರೂ ಕಾರನ್ನು ಚಲಾಯಿಸಬಹುದಾಗಿದೆ. ಅಲ್ಲದೆ ಏಳು ಆಸನಗಳು ಇರುವುದರಿಂದ ಕುಟುಂಬ ಸಮೇತ ಪ್ರವಾಸ ಕೈಗೊಳ್ಳಲು ಈ ಕಾರು ಸೂಕ್ತ ಎಂದೇ ಹೇಳಬಹುದು.

Comments are closed.