Anna Bhagya Scheme: ಒಂದೇ ಒಂದು ಕಂತಿನ ಅನ್ನಭಾಗ್ಯ ಹಣವೂ ನಿಮ್ಮ ಖಾತೆಗೆ ಜಮಾ ಆಗಿಲ್ವಾ? ಅಂತವರಿಗೆ ಸರಕಾರದಿಂದ ಸಿಕ್ತು ಗುಡ್ ನ್ಯೂಸ್!

Anna Bhagya Scheme: ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯು ಒಂದಾಗಿದೆ. ಆದರೆ ಈ ಯೋಜನೆಯಲ್ಲಿನ ಗೊಂದಲ ಹಾಗೂ ಅಕ್ಕಿ ಸಿಗದಿರುವುದರಿಂದ ರಾಜ್ಯವು ತನ್ನ ಪಾಲಿನ ೫ ಕೆ.ಜಿ ಅಕ್ಕಿಯ ೧೭೦ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕುತ್ತಿದೆ. ಈ ಹಣವು ಎಷ್ಟೋ ಜನರಿಗೆ ಬಂದಿರುವುದಿಲ್ಲ. ಈ ಹಣ ನಿಮ್ಮ ಖಾತೆಗೆ ಜಮಾ ಆಗಬೇಕು ಎಂದಾದರೆ ಈಗ ನಾವು ಹೇಳುವ ಕೆಲಸವನ್ನು ಮಾಡಬೇಕಾಗುತ್ತದೆ. ಹಾಗೆ ಮಾಡಿದಲ್ಲಿ ವಾರದೊಳಗೆ ನಿಮ್ಮ ಖಾತೆಗೆ ಹಣ ಬರುತ್ತದೆ.

ಮೊದಲನೆಯದಾಗಿ ನೀವು ಪ್ರತಿ ತಿಂಗಳು ಅಕ್ಕಿ ತೆಗೆದುಕೊಂಡರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ನೀವು ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿಯನ್ನು ಪಡೆದುಕೊಂಡಿಲ್ಲ ಎಂದಾದರೆ ನಿಮಗೆ ಹಣ ಜಮಾ ಆಗುವುದಿಲ್ಲ.

ಎರಡನೇಯದಾಗಿ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ನೀವು ಆಹಾರ ಇಲಾಖೆಯ ವೆಬ್ ಸೈಟ್ಗೆ ಭೇಟಿ ನೀಡಿ ನಿಮ್ಮ ಸ್ಟೇಟಸ್ ಚೆಕ್ ಮಾಡಬೇಕು. ಅಲ್ಲಿ ಕೆ೨ ಪಾವತಿ ವಿಫಲವಾಗಿದೆ ಎಂದು ಬಂದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸರಿಯಾಗಿ ಜೋಡಣೆ ಆಗಿಲ್ಲ ಎಂದರ್ಥ. ಕೂಡಲೇ ನೀವು ಬ್ಯಾಂಕ್ಗೆ ಭೇಟಿ ನೀಡಿ ಸರಿಯಾಗಿ ಆಧಾರ್ ಜೋಡಣೆ ಮಾಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಇನ್ನು ನಾಲ್ಕನೆಯದಾಗಿ ನಿಮ್ಮ ಪಡಿತರ ಚೀಟಿಯಲ್ಲಿರುವ ಹೆಸರು, ನಿಮ್ಮ ಹೆಸರು ಮಾತ್ರವಲ್ಲದೆ ನಿಮ್ಮ ಕುಟುಂಭದವರ ಹೆಸರುಗಳು ಆಧಾರ್ನಲ್ಲಿರುವ ಹೆಸರಿಗೆ ತಾಳೆ ಆಗದಿದ್ದರೂ ಹಣ ಜಮಾ ಆಗುವುದಿಲ್ಲ. ಆದ್ದರಿಂದ ಇದನ್ನು ಪರಿಶೀಲಿಸಿ. ಒಂದು ವೇಳೆ ಸಮಸ್ಯೆ ಇದ್ದಲ್ಲಿ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಿಮ್ಮ ಹೆಸರು ಸರಿಪಡಿಸಿಕೊಳ್ಳಿ. ಆಧಾರ್ನಲ್ಲಿ ಹೆಸರು ಸರಿಯಾದ ನಂತರ ಅದನ್ನು ಬ್ಯಾಂಕ್ಗೆ ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಆಧಾರ್ ಲಿಂಕ್ ಸರಿಯಾಗಲಿದೆ.

ಇದಲ್ಲದೆ ಬೇರೆ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಅಥವಾ ನಿಮಗೆ ಅರ್ಥವಾಗದ ಪಕ್ಷದಲ್ಲಿ ನೀವು ಪಡಿತರ ತೆಗೆದುಕೊಳ್ಳುವ ಪಡಿತರದ ಅಂಗಡಿಗೆ ಒಮ್ಮೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಅವರು ಸರಿಯಾದ ಮಾರ್ಗದರ್ಶನ ಮಾಡಲಿದ್ದಾರೆ.

Comments are closed.