Kannada Astrology: ಈ ತಿಂಗಳು ಈ ನಾಲ್ಕು ರಾಶಿಯವರಿಗೆ ಲಕ್ಷ್ಮಿ ದೇವಿಯಿಂದ ಮಹಾಯೋಗ; ಹರಿಯಲಿದೆ ಸಂಪತ್ತಿನ ಹೊಳೆ ! ಯಾವುದು ಆ ಅದೃಷ್ಟವಂತ ರಾಶಿಗಳು!

Kannada Astrology: ಜ್ಯೋತಿಷ್ಯದಲ್ಲಿ ಕೆಲವೊಂದು ಯೋಗಗಳನ್ನು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಅದರಲ್ಲಿ ರಾಜಯೋಗ, ಮಹಾಯೋಗ ಹೀಗೆ ಹಲವಾರು ಯೋಗಗಳಿವೆ. ಮಹಾಯೋಗವು ಸಹ ಜೀವನದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಬರುವಂತಹುದು. ಇಂತಹ ಸಂದರ್ಭದಲ್ಲಿ ಈ ಯೋಗ ಬಂದವರಿಗೆ ತಾಯಿ ಲಕ್ಷ್ಮಿ ದೇವಿಯ ಕೃಪೆಯಾಗುತ್ತದೆ. ಇವರು ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತಿಯನ್ನು ಕಾಣುತ್ತಾರೆ. ಈ ಬಾರಿ ಯಾವ ನಾಲ್ಕು ರಾಶಿಯವರಿಗೆ ಯೋಗ ಇದೆ ಎಂದು ತಿಳಿದುಕೊಳ್ಳೋಣ.

ಮೇಷ ರಾಶಿ:

ಮೇಷ ರಾಶಿಯಲ್ಲಿ ಜನಿಸಿದವರಿಗೆ ಈ ತಿಂಗಳು ಮಹಾಯೋಗವಿದೆ. ಈ ತಿಂಗಳು ನಿಮಗೆ ಅರಿವಿಗೆ ಬಾರದಂತೆ ನಿಮ್ಮಲ್ಲಿ ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ. ಉದ್ಯಮ ಪ್ರಾರಂಭಿಸುವ ಸಲುವಾಗಿ ತಾಯಿ ಬಳಿಯಿಂದ ಹಣ ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಕೌಟುಂಬಿಕ ಜೀವನದಲ್ಲೂ ಸಂತಸ, ನೆಮ್ಮದಿ ಮನೆ ಮಾಡಿರುತ್ತದೆ. ಇದರ ಜೊತೆ ಹಲವು ವರ್ಷಗಳಿಂದ ಕಚೇರಿಯಲ್ಲಿ ಭಡ್ತಿ ಸಿಗಲಿಲ್ಲವೆಂದು ಕೊರಗು ನಿಮಗಿದ್ದರೆ ಆ ಕೊರಗು ಈ ತಿಂಗಳು ಈಡೇರಲಿದೆ. ಇದರಿಂದಾಗಿ ನೆಮ್ಮದಿಯ ಜೀವನ ನಿಮ್ಮದಾಗಲಿದೆ.

ಮಿಥುನ ರಾಶಿ:

ಮಿಥುನ ರಾಶಿಯವರ ಜೀವನದಲ್ಲೂ ಈಗ ಲಕ್ಷ್ಮಿ ದೇವಿಯ ಕೃಪೆ ಆಗುವ ಸಮಯ ಬಂದಿದೆ. ಈ ರಾಶಿಯವರ ಮನೆಯಲ್ಲಿ ಈ ತಿಂಗಳು ಹಲವು ಧಾರ್ಮಿಕ ಕಾರ್ಯಗಳು ನಡೆಯಲಿವೆ. ವಿವಾಹವಾಗಿ ಹಲವಾರು ವರ್ಷಗಳು ಸಂದಿವೆ. ಇನ್ನೂ ಸಂತಾನ ಆಗಿಲ್ಲ ಎಂದು ಬೇಸರದಲ್ಲಿರುವವರಿಗೆ ಈ ತಿಂಗಳು ಸಿಹಿ ಸುದ್ದಿ ಸಿಗಲಿದೆ. ಈ ಮೂಲಕ ಮನೆಯಲ್ಲಿ ಸಂಭ್ರಮ ಮನೆ ಮಾಡಲಿದೆ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿದೇಶ ಪ್ರಯಾಣ ಮಾಡುವ ಯೋಗವಿದೆ. ಉದ್ಯೋಗದ ಸ್ಥಳದಲ್ಲಿ ನಿಮಗೆ ಸ್ಥಳ ಬದಲಾವಣೆ ಆಗುವ ಸಾಧ್ಯತೆಗಳಿವೆ.

ಸಿಂಹ ರಾಶಿ:

ಮಹಾಭಾಗ್ಯ ಯೋಗದಿಂದ ಸಿಂಹ ರಾಶಿಯವರ ಪ್ರಭಾವ ಸಮಾಜದಲ್ಲಿ ಹೆಚ್ಚಾಗಲಿದೆ. ಜನರು ನಿಮ್ಮನ್ನು ಅನುಸರಿಸತೊಡಗುತ್ತಾರೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ವೃದ್ಧಿಸಲಿದೆ. ನೀವು ಮಾಡುವ ಎಲ್ಲ ಉತ್ತಮ ಕಾರ್ಯಗಳಿಗೆ ನಿಮ್ಮ ಪಾಲಕರು, ಪೋಷಕರ ಬೆಂಬಲ ಸಿಗಲಿದೆ. ಈ ರಾಶಿಯವರು ಸಹಜವಾಗಿ ಶಿಕ್ಷಣ, ಓದಿನ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಉದ್ಯೋಗ ಕ್ಷೇತ್ರದಲ್ಲೂ ಸಹ ನೀವು ಊಹೆಯು ಮಾಡಲಾರದಂತಹ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಲಿದೆ.

ಕನ್ಯಾ ರಾಶಿ;

ಕನ್ಯಾ ರಾಶಿಯವರು ಇಲ್ಲಿಯವರೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಸಮಸ್ಯೆಯಲ್ಲಿದ್ದರು. ಇನ್ನು ಮುಂದೆ ಇವರಿಗೂ ಸಹ ಲಕ್ಷ್ಮಿ ದೇವಿ ಕೃಪೆ ಆಗಲಿದೆ. ಇವರಿಗೆ ಹಣದ ಹರಿವು ಹೆಚ್ಚಾಗಲಿದೆ. ಯಾವುದಾದರೂ ಹೂಡಿಕೆ, ಉದ್ಯಮ ಸ್ಥಾಪಿಸಲು ಇದು ಒಳ್ಳೆಯ ಸಂದರ್ಭವಾಗಿದೆ. ಯಾಕೆಂದರೆ ಈ ಸಂದರ್ಭದಲ್ಲಿ ನಿಮಗೆ ಗ್ರಹಗಳ ಬಲವು ಇರುವುದರಿಂದ ನಿಮಗೆ ಯಾವುದೇ ನಷ್ಟ ಆಗುವ ಸಂಭವ ಕಡಿಮೆ ಇದೆ. ಮಾಘ ಮಾಸದ ಹುಣ್ಣಿಮೆ ಕನ್ಯಾ ರಾಶಿಯವರಿಗೆ ಬಹಳ ಉತ್ತಮ ದಿನವಾಗಿದೆ.

Comments are closed.