Ration Card Changes: ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ; ನಿಮ್ಮ ಜಿಲ್ಲೆಗೆ ಯಾವ ದಿನ ಫಿಕ್ಸ್ ಆಗಿದೆ ತಿಳಿದುಕೊಳ್ಳಿ; ಕೇವಲ 3 ದಿನಗಳ ಅವಕಾಶ!  

Ration Card Changes: ಈಗ ಯಾವುದೇ ಯೋಜನೆಗೆ ಫಲಾನುಭವಿ ಆಗಬೇಕು ಎಂದಾದರೂ ಪಡಿತರ ಚೀಟಿ ಕಡ್ಡಾಯವಾಗಿದೆ. ಅದರಲ್ಲೂ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಬೇಕು ಎಂದಾದರೆ ನೀವು ಕಡ್ಡಾಯವಾಗಿ ಪಡಿತರ ಚೀಟಿ ಹೊಂದಿರಲೇಬೇಕು. ಹಾಗಾಗಿ ಈಗ ಜನರು ಪಡಿತರ ಚೀಟಿ ಸರಿಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಜನರ ಸಂಕಷ್ಟ ಅರಿತ ಸರ್ಕಾರವು ಇದೀಗ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ.

ಕಳೆದ ತಿಂಗಳೂ ಸಹ ಸರ್ಕಾರವು ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಅರ್ಧಕ್ಕೆ ನಿಂತುಹೋಗಿತ್ತು. ಕಳೆದ ತಿಂಗಳು ಸುಮಾರು 2೦,೦೦೦ ಜನರು ಅರ್ಜಿ ಸಲ್ಲಿಸಿದ್ದರು. ಆದರೆ ತಿದ್ದುಪಡಿ ಆಗಿರಲಿಲ್ಲ. ಆದರೆ ಈ ಬಾರಿ ಸರ್ಕಾರ ಮತ್ತೆ ಅವಕಾಶ ಮಾಡಿಕೊಟ್ಟಿದೆ. ಅಕ್ಟೋಬರ್ 5ರಿಂದ 13ರವರೆಗೆ ೯ 9ದಿನಗಳ ಕಾಲ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಅವಧಿಯಲ್ಲಿ ಎಲ್ಲರೂ 5 ರಿಂದ 13ರ ಒಳಗೆ ಅರ್ಜಿ ಸಲ್ಲಿಸುವಂತಿಲ್ಲ. ಬದಲಾಗಿ ವಲಯವಾರು ಅವಕಾಶ ಕಲ್ಪಿಸಲಾಗಿದೆ. ಅಂದರೆ ಬೆಂಗಳೂರು ವಲಯಕ್ಕೆ 5 ರಿಂದ 7 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಇ ವಲಯದಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬರುತ್ತವೆ.

ಇನ್ನು ಕಲಬುರಗಿ ವಲಯಕ್ಕೆ 8 ನೇ ತಾರೀಕಿನಿಂದ 1೦ನೇ ತಾರೀಕಿನವರೆಗೆ ಅವಕಾಶ ಕಲ್ಪಿಸಲಾಗಿದೆ. ಕಲಬುರಗಿ ವಲಯಯದಲ್ಲಿ, ಬಳ್ಳಾರಿ ಜಿಲ್ಲೆ, ವಿಜಯನಗರ ಜಿಲ್ಲೆ, ಕಲಬುರಗಿ ಜಿಲ್ಲೆ, ಬೀದರ್ ಜಿಲ್ಲೆ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ ಜಿಲ್ಲೆಗಳು.

ಬೆಳಗಾವಿ ವಲಯಕ್ಕೆ 11 ರಿಂದ 13 ರವರೆಗೆ ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಿಸಿಕೊಳ್ಳಬಹುದು. ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಹಾಸನ್, ಹಾವೇರಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಚಿಕ್ಕಮಗಳೂರು, ಧಾರವಾಡ, ಗದಗ, ಕೊಡಗು, ಮೈಸೂರು, ವಿಜಯಪುರ ಜಿಲ್ಲೆಯಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ.

ಈ ಬಾರಿ ನೀವು ವೈಯಕ್ತಿಕವಾಗಿಯೂ ತಿದ್ದುಪಡಿ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಸರ್ವರ್ ಡೌನ್ ಆಗಿ ಸಮಸ್ಯೆಆಗಿತ್ತು. ಈ ಬಾರಿ ಕೇವಲ ಸೇವಾ ಕೇಂದ್ರಗಳಾದ ಬೆಂಗಳೂರು ಒನ್, ಕರ್ನಾಟಕ ಒನ್, ಹುಬ್ಬಳ್ಳಿ-ಧಾರವಾಡ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ತಿದ್ದುಪಡಿ ಮಾಡಲಾಗುತ್ತದೆ.

ತಿದ್ದುಪಡಿಗೆ ಅರ್ಜಿ ಸಲ್ಲಿಸಲು ತೆರಳುವ ವೇಳೆ ನೀವು ಪಡಿತರ ಚೀಟಿ, ಆಧಾರ್ ಕಾರ್ಡ್, ನೋಂದಣಿ ಆಗಿರುವ ಮೊಬೈಲ್ ತೆಗೆದುಕೊಂಡು ಹೋಗಬೇಕು. ಯಾಕೆಂದರೆ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಮೊಬೈಲ್ಗೆ ಓಟಿಪಿ ಬರುತ್ತದೆ. ಅದನ್ನು ನೀವು ಹೇಳಬೇಕಾಗುತ್ತದೆ. ಹಾಗಾಗಿ ಮೊಬೈಲ್ ತೆಗೆದುಕೊಂಡು ಹೋಗಬೇಕು.

ಇನ್ನು ಹೊಸ ಪಡಿತರ ಚೀಟಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅದನ್ನು ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಪರಿಗಣಿಸುವುದಿಲ್ಲ. ಕೇವಲ ಆರೋಗ್ಯ ಸೇವೆ ಪಡೆಯಲು ಮಾತ್ರ ಇದು ಉಪಯೋಗವಾಗುತ್ತದೆ. ಇದನ್ನು ಗೃಹಲಕ್ಷ್ಮಿಯಾಗಲಿ, ಅನ್ನಭಾಗ್ಯ ಯೋಜನೆ ಪಡೆಯಲು ಅಥವಾ ಇನ್ನಿತರ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ನೀವು ಬಿಪಿಎಲ್ ಪಡಿತರ ಚೀಟಿ ಇದ್ದಲ್ಲಿ ನಿಮಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕೆ ಬೇಕಾಗಿ ನೀವು ಮಾಡಿಸಿಕೊಳ್ಳಬಹುದು.

Comments are closed.