Business Idea: 10 ಸಾವಿರ ನಿಮ್ಮ ಬಳಿ ಇದ್ರೆ ಸಾಕು, ಲಕ್ಷ ಲಕ್ಷ ಹಣ ಗಳಿಸಬಹುದು; ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್!  

Business Idea: ಕರೋನಾ ಲಾಕ್ ಡೌನ್ ಬಳಿಕ ಭಾರತದಲ್ಲಿ ಕಂಪನಿಗಳು ಉದ್ಯೋಗ ಕಡಿತ ಮಾಡಲಾರಂಭಿಸಿವೆ. ಇದೀಗ ಮತ್ತೆ ನಿಧಾನವಾಗಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಿದ್ದರೂ, ಮೊದಲಿನಷ್ಟು ಉದ್ಯೋಗಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದರಿಂದ ಎಷ್ಟೋ ಜನರು ಉದ್ಯೋಗ ಬಿಟ್ಟು ಊರನ್ನು ಸೇರಿದ್ದಾರೆ. ಏನೇ ಆಗಲಿ ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯಮ ಆರಂಭಿಸುವುದು ಉತ್ತಮ. ಇದರಲ್ಲಿ ನೆಮ್ಮದಿ ಇರುತ್ತದೆ. ಹಾಗಾಗಿ ನಿಮ್ಮ ಬಳಿ 1೦,೦೦೦ ರೂ. ಇದ್ದರೆ ಸಾಕು. ಈ ಐದು ಉದ್ಯಮವನ್ನು ಶುರು ಮಾಡಿ ಲಾಭಗಳಿಸಬಹುದು.

ಮೊದಲನೆಯದಾಗಿ ಬ್ಲಾಗಿಂಗ್:

ಈಗ ಡಿಜಿಟಲ್ ಯುಗ. ಈಗ ಪ್ರತಿಯೊಬ್ಬರು ಮೊಬೈಲ್ ಹೊಂದಿರುತ್ತಾರೆ. ನೀವು ಬ್ಲಾಗಿಂಗ್ನ್ನು 1೦,೦೦೦ ರೂ. ಒಳಗೆ ಶುರು ಮಾಡಬಹುದು. ಜನರಿಗೆ ಯಾವ ವಿಚಾರ ಇಷ್ಟವಾಗುತ್ತದೆ ಎನ್ನುವುದನ್ನು ಅರಿತು ಅವುಗಳ ಕುರಿತು ಆರ್ಟಿಕಲ್ಗಳನ್ನು ಬರೆದು ನಿಮ್ಮದೆ ಆದ ಬ್ಲಾಗ್ ಮೂಲಕ ಪಬ್ಲಿಷ್ ಮಾಡಬೇಕು. ಇದಕ್ಕೆ ಬರುವ ಲೈಕ್ ಹಾಗೂ ವಿವ್ಸ್ ಗಳ ಆಧಾರದ ಮೇಲೆ ನಿಮಗೆ ಹಣ ಬರುತ್ತದೆ. ಡಿಜಿಡಲ್ ಬ್ಲಾಗಿಂಗ್ ಎನ್ನುವುದು ಸುಲಭವಾಗಿ ಮಾಡಬಹುದಾಗಿದೆ. ನೀವು ಬರೆಯುವ ವಿಚಾರಗಳು ಜನರಿಗೆ ಇಷ್ಟವಾದಲ್ಲಿ ನಿಮಗೆ ಹೆಚ್ಚಿನ ಹಣ ಬರಲಿದೆ.

ಉಪ್ಪಿನ ಕಾಯಿ ಉದ್ಯಮ:

ಉಪ್ಪಿನ ಕಾಯಿಯನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಬಳಕೆ ಮಾಡುತ್ತಾರೆ. ಎಷ್ಟೋ ಜನರಿಗೆ ಉಪ್ಪಿನ ಕಾಯಿ ಇಲ್ಲದೆ ಊಟ ರುಚಿಸುವುದೇ ಇಲ್ಲ. ಹಾಗಾಗಿ ಉಪ್ಪಿನ ಕಾಯಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ನೀವು ಸಹ ಎಲ್ಲ ರೀತಿಯ ತರಕಾರಿ ಹಾಕಿ, ಮಸಾಲೆ ಪದಾರ್ಥ ಸೇರಿಸಿ ರುಚಿಕರವಾಗಿ ಉಪ್ಪಿನಕಾಯಿ ಮಾಡಿದಲ್ಲಿ ಮಾರಾಟವಾಗುತ್ತದೆ. ಇದಕ್ಕೆ ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರಚಾರ ನೀಡಬೇಕು ಅಷ್ಟೆ. ಇದನ್ನು ನೀವು 1೦,೦೦೦ರೂ. ಒಳಗಡೆಯೇ ಪ್ರಾರಂಭಿಸಬಹುದು.

ಟಿಫಿನ್ ಸರ್ವೀಸ್:

ಇಗಂತೂ ಪ್ರತಿಯೊಬ್ಬರು ಬ್ಯೂಸಿ ಆಗಿರುತ್ತಾರೆ. ಯಾರಿಗೂ ಮಧ್ಯಾಹ್ನದ ಊಟವನ್ನೂ ಕಚೇರಿಗೆ ತೆಗೆದುಕೊಂಡು ಹೋಗುವಷ್ಟು ಅವಕಾಶ ಇರುವುದಿಲ್ಲ. ಇ ಅವಕಾಶ ಬಳಸಿಕೊಂಡು ನೀವು ಅವರಿಗೆ ಮಧ್ಯಾಹ್ನ ಅಥವಾ ಅವರು ಹೇಳಿದ ಸಮಯದಲ್ಲಿ ಟಿಫಿನ್ ಪೂರೈಸುವ ಉದ್ಯಮ ಶುರು ಮಾಡಬಹುದು. ಇವತ್ತು ದೊಡ್ಡ ದೊಡ್ಡ ನಗರದಲ್ಲಿ ಇದಕ್ಕೆ ಬಹಳ ಬೇಡಿಕೆಯಿದೆ. ಅಲ್ಲದೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಶುರು ಮಾಡಬಹುದು.

ಆನ್ಲೈನ್ ಫಿಟ್ನೆಸ್ ತರಬೇತುದಾರರಾಗಿ:

ಕರೋನಾ ಲಾಕ್ಡೌನ್ ನಂತರ ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಗ್ರಾಮೀಣ ಪ್ರದೇಶದ ವರೆಗೆ ಹೆಚ್ಚಿನ ಜನರು ಫಿಟ್ನೆಸ್ಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ನೀವು ಆನ್ಲೈನ್ ಮೂಲಕವೂ ಫಿಟ್ ನೆಸ್ ತರಬೇತಿ ನೀಡಬಹುದು. ಇದಕ್ಕಾಗಿ ನೀವು ಒಂದು ಯುಟ್ಯೂಬ್ ಚಾನೆಲ್ ಆರಂಭಿಸಬೇಕು ಅಷ್ಟೆ. ಇದಕ್ಕೂ ದೊಡ್ಡ ಮೊತ್ತದ ಅವಶ್ಯಕತೆ ಇರುವುದಿಲ್ಲ. ಹೀಗೆ ಯೂಟ್ಯೂಬ್ ಚಾನೆಲ್ ಮೂಲಕ ನೀವು ಯಾವ ರೀತಿ ವ್ಯಾಯಾಮ ಮಾಡಬೇಕು, ಯಾವ ರೀತಿ ಫಿಟ್ನೆಸ್ ಕಾಯ್ದುಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡಬಹದು.

ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್;

ಇದೀಗ ಹೆಚ್ಚಿನ ಜನರು ಯೂಟ್ಯೂಬ್ ಚಾನೆಲ್ ಹೊಂದಿರುತ್ತಾರೆ. ಆದರೆ ಅವರು ನೀಡುವ ವಿಡಿಯೋ ಜನರಿಗೆ ಇಷ್ಟವಾಗದೆ ಹೆಚ್ಚಿನ ಲೈಕ್, ಫಾಲೋವರ್ಸ್ ಇರುವುದಿಲ್ಲ. ಇದನ್ನು ನೀವು ಬಳಸಿಕೊಂಡು ಒಳ್ಳೆಯ ಒಳ್ಳೆಯ ಕಂಟೆಂಟ್ ಬರೆದು ಕೊಡುವುದಿರಿಂದ ಅವರು ನಿಮಗೆ ಹಣ ನೀಡುತ್ತಾರೆ. ಅವರಿಗೆ ಯಾವ ರೀತಿ ವೀವ್ಸ್, ಛಂದಾದಾರರು ಹೆಚ್ಚಾಗುತ್ತಾರೋ ಅದೇ ರೀತಿ ನಿಮಗೆ ಸಿಗುವ ಹಣವೂ ಹೆಚ್ಚಾಗುತ್ತದೆ.

Comments are closed.