PAN Card: ಯಾವುದೇ ಒಬ್ಬ ವ್ಯಕ್ತಿ ಸರ್ಕಾರಿ ಸೌಲಭ್ಯ ಇಲ್ಲವೇ ಯಾವುದೇ ಒಂದು ವೈಯಕ್ತಿಕ ಕೆಲಸವನ್ನು ಮಾಡಿಕೊಳ್ಳಲು ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ (Aadhaar Card) , ಪಡಿತರ ಚೀಟಿ (Ration Card), ಜನನ ಪ್ರಮಾಣ ಪತ್ರ, ಓಟರ್ ಐಡಿ ಹೀಗೆ ಹಲವು ದಾಖಲೆ ನೀಡಬೇಕಾಗುತ್ತದೆ. ಇದರಲ್ಲಿ ಪಾನ್ ಕಾರ್ಡ್ ಕೂಡ ಸೇರಿದೆ. ಬ್ಯಾಂಕ್ನಲ್ಲಿ ಖಾತೆ ತೆರೆಯುವ ವೇಳೆ ಪಾನ್ ಕಾರ್ಡ್ ಕೇಳಿಯೇ ಕೇಳುತ್ತಾರೆ. ಆದರೆ ಇನ್ಮುಂದೆ ಕೆಲವರು ಪಾನ್ ಕಾರ್ಡ್ ಇಲ್ಲದೆಯೂ ಬ್ಯಾಂಕ್ನಲ್ಲಿ ಖಾತೆ ತೆರೆಯಬಹುದಾಗಿದೆ.
ವೈಯಕ್ತಿಕ ಮಾಹಿತಿಗಳಲ್ಲಿ ಪಾನ್ ಕಾರ್ಡ್ (PAN Card) ಕೂಡ ಒಂದು. ಹಾಗಾಗಿ ಪಾನ್ ಕಾರ್ಡ್ ಸಾಮಾನ್ಯವಾಗಿ ಎಲ್ಲರೂ ಹೊಂದಿರುತ್ತಾರೆ. ಪಾನ್ ಕಾರ್ಡ್ ಮಾಹಿತಿ ಇಲ್ಲದೆ ನಿಮ್ಮ ಕೆಲಸ ಅಪೂರ್ಣವಾಗುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು. ಅಷ್ಟರ ಮಟ್ಟಿಗೆ ಪ್ರಾಮುಖ್ಯತೆ ಪಡೆದಿದೆ ಪಾನ್ ಕಾರ್ಡ್. ಪಾನ್ ಕಾರ್ಡ್ನ್ನು ಸಹಿತ ಆಧಾರ್ನೊಂದಿಗೆ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಕೆಲಸಕ್ಕೆ ಪಾನ್ ಕಾರ್ಡ್ ಬೇಡ:
ಸದ್ಯಕ್ಕೆ ಬ್ಯಾಂಕ್ನಲ್ಲಿ ಸೇವಿಂಗ್ಸ್ ಎಕೌಂಟ್ ಇರಲಿ, ಬೇರೆ ಯಾವುದೇ ರೀತಿಯ ಎಕೌಂಟ್ ಇರಲಿ ಅದನ್ನು ಆರಂಭಿಸುವ ಮುನ್ನ ಪಾನ್ ಕಾರ್ಡ್ ಪ್ರಮುಖ ದಾಖಲೆಯಾಗಿ ಪರಿಗಣಿಸುತ್ತಾರೆ. ಆದರೂ ಕೆಲವೊಂದು ಬ್ಯಾಂಕ್ಗಳಲ್ಲಿ ನೀವು ಪಾನ್ ಇಲ್ಲದೆ ಎಕೌಂಟ್ ತೆರೆಯಬಹುದು. ಅಂತಹ ಬ್ಯಾಂಕ್ಗಳು ಯಾವುದು ಎಂದು ನೋಡೋಣ.
ನೀವು ಬ್ಯಾಂಕ್ಗಳಲ್ಲಿ ಪಾನ್ ಕಾರ್ಡ್ ನೀಡದೆ ಎಕೌಂಟ್ ಓಪನ್ ಮಾಡಬಹುದು. ಆದರೆ ಅದಕ್ಕೆ ಕೆಲವೊಂದು ಕಂಡಿಶನ್ ಇದೆ. ಪಾನ್ ಕಾರ್ಡ್ ಇಲ್ಲದೆಯೂ ವಿದೇಶಿಯರು, ವಿದೇಶಿ ಕಂಪನಿಗಳು ಖಾತೆ ಆರಂಭಿಸಬಹುದು ಎನ್ನುವ ನಿಯಮ ಮಾಡಲಾಗಿದೆ. ಆದರೆ ಇದು ಕೆಲವೇ ಬ್ಯಾಂಕ್ಗಳಿಗೆ ಸೀಮಿತ.
ಸಾಗರೋತ್ತರ ಮತ್ತು ವಿದೇಶಿ ಕಂಪನಿಗಳಿಗೆ ಐಎಫ್ಎಸ್ಸಿ ಗಿಫ್ಟ್ ಸಿಟಿಯಲ್ಲಿ ಬ್ಯಾಂಕ್ ಎಕೌಂಟ್ ಓಪನ್ ಮಾಡಲು ಪಾನ್ ಕಾರ್ಡ್ ಅಗತ್ಯವಿಲ್ಲ. ಅದಕ್ಕಾಗಿ ಅವರು ಈಗ ಘೋಷಣೆಯನ್ನು ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.ಇನ್ನು ಐಎಫ್ಎಸ್ಸಿ ಬ್ಯಾಂಕ್ ಖಾತೆ ತೆರೆಯುವ ವಿದೇಶಿಗರು, ಅಥವಾ ವಿದೇಶಿ ಕಂಪನಿಗಳು ಫಾರ್ಮ್-೬೦ನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ. ಇದರ ಜೊತೆ ಭಾರತದಲ್ಲಿ ಯಾವುದೇ ರೀತಿಯ ತೆರಿಗೆ ಹೊಣೆಗಾರಿಕೆ ಹೊಂದಿರುವುದಿಲ್ಲ ಎನ್ನುವುದನ್ನು ದೃಢಿಕರಿಸಬೇಕು.
Comments are closed.