ketu transit: ಕನ್ಯಾ ರಾಶಿಗೆ ಕೇತುವಿನ ಆಗಮನ ; ಈ ಮೂರು ರಾಶಿಯವರು ಎಚ್ಚರಿಕೆಯಿಂದ ಇರಲೇಬೇಕು; ಯಾವ ರಾಶಿಗಳು ಗೊತ್ತೇ?

ketu transit: ಭಾರತವು ಹಿಂದು ರಾಷ್ಟ್ರವಾಗಿದೆ. ಇಲ್ಲಿನ ಹೆಚ್ಚಿನ ಜನರು ಆಸ್ತಿಕರಾಗಿದ್ದು, ದೇವರು, ಜ್ಯೋತಿಷ್ಯವನ್ನು ನಂಬುತ್ತಾರೆ.  ಜ್ಯೋತಿಷ್ಯವು ವೈಜ್ಞಾನಿಕವಾಗಿ ಸಾಭೀತಾಗಿದೆ. ಹಾಗಾಗಿಯೇ ವಿಜ್ಞಾನಿಗಳು ಕೂಡ ಉಪಗ್ರಹ ಉಡಾವಣೆ ವೇಳೆ ಒಳ್ಳೆಯ ಮುಹೂರ್ತ ನಿಗದಿಪಡಿಸಿಕೊಂಡು ಉಡ್ಡಯನ ಮಾಡುತ್ತಾರೆ. ಹಾಗಾಗಿ ನಮ್ಮ ದೇಶದಲ್ಲಿ ಜ್ಯೋತಿಷ್ಯಕ್ಕೆ ಬಹಳ ಮಹತ್ವವಿದೆ. ಇದೀಗ ಕೇತುವು ತುಲಾ ರಾಶಿಯಲ್ಲಿದ್ದು, ಅಕ್ಟೋಬರ್ 3೦ ರಂದು ಕನ್ಯಾ ರಾಶಿ ಪ್ರವೇಶ ಮಾಡಲಿದೆ. ಕನ್ಯಾ ರಾಶಿಯಲ್ಲಿ 18 ತಿಂಗಳು ಇರಲಿದ್ದು, ಈ ವೇಳೆ ಈ ಮೂರು ರಾಶಿಯವರು ಬಹಳ ಜಾಗರೂಕರಾಗಿರಬೇಕಾಗುತ್ತದೆ.

ಕೇತು ಹಾಗೂ ರಾಹುವನ್ನು ಹಿಮ್ಮುಖವಾಗಿ ಚಲಿಸುವ ಗ್ರಹಗಳೆಂದು ಕಕರೆಯಲಾಗುತ್ತದೆ. ಕೇತುವನ್ನು ನೆರಳು ಗ್ರಹ ಎಂದೂ ಕರೆಯಲಾಗುತ್ತದೆ. ನಮ್ಮ ರಾಶಿಯಲ್ಲಿ ಗುರು ಮತ್ತು ಮಂಗಳ ಬಲವಾಗಿದ್ದರೆ ಕೇತುವಿನ ಪ್ರಭಾವ ಕಡಿಮೆ ಆಗಿರುತ್ತದೆ. ಕೇತುವಿನ ವಿಶೇಷತೆ ಎಂದರೆ ಇದು ಇದ್ದಲ್ಲಿ ಅಂತಹ ರಾಶಿಯವರಿಗೆ ಆಧ್ಯಾತ್ಮಿಕ ಜ್ಞಾನವನ್ನು ಒದಗಿಸುತ್ತದೆ.

ಮಿಥುನ ರಾಶಿ:

ಕೇತುವು ಅಕ್ಟೋಬರ್ 3೦ ರಂದು ಮಿಥುನ ರಾಶಿಯ ನಾಲ್ಕನೇ ಮನೆಗೆ ಬರಲಿದೆ. ಈ ಮನೆಯಲ್ಲಿ ಕೇತುವು ಆಗಮನವಾಗುವುದರಿಂದ ಮಿಥುನ ರಾಶಿಯವರಲ್ಲಿ ಚಂಚಲತೆ ಹೆಚ್ಚಾಗಲಿದೆ. ಮಿಥುನ ರಾಶಿಯವರು ತಮ್ಮ ತಾಯಿಯ ಆರೋಗ್ಯದ ಕುರಿತು ತುಂಬಾ ಜಾಗರೂಕರಾಗಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಅನೇಕ ಸವಾಲುಗಳು ನಿಮಗೆ ಎದುರಾಗಲಿದೆ. ಓಡಾಡುವ ಸಂದರ್ಭದಲ್ಲಿ ಅನೇಕ ತೊಂದರೆ ಎದುರಾಗುವ ಸಾಧ್ಯತೆ ಇದೆ. ನೀವು ನಿರೀಕ್ಷಿಸಿದಂತೆ ನೀವು ಮಾಡುವ ಕೆಲಸಗಳಿಗೆ ಕುಟುಂಬದವರ ಸಪೋರ್ಟ್ ಸಿಗುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು. ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಅಲ್ಲದೆ ಕಚೇರಿಯಲ್ಲಿಯೂ ಸಹ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ನೀವು ವಿನಾಕಾರಣ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲುವ ಸಾಧ್ಯತೆಗಳಿವೆ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಲಗ್ನದ ಮನೆಯಲ್ಲಿಯೇ ಕೇತುವು ಇರಲಿದೆ. ಮೊದಲ ಮನೆಯಲ್ಲಿರುವ ಕೇತು,  ಐದನೇ, ಏಳು ಹಾಗೂ ಒಂಬತ್ತನೇ ಮನೆಯತ್ತ ದೃಷ್ಟಿ ಬೀರುತ್ತಾನೆ. ಲಗ್ನದಲ್ಲಿ ಕೇತುವಿನ ಸಂಚಾರದಿಂದ ನಿಮ್ಮ ಆತ್ಮವಿಶ್ವಾಸ ಕುಗ್ಗಲಿದೆ. ಈ ಅವಧಿಯಲ್ಲಿ ಅನವಶ್ಯಕವಾಗಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಕೇತು ಸಂಕ್ರಮಣದಿಂದ ಬಹುದೊಡ್ಡ ಪ್ರಾಜೆಕ್ಟ್ ನಿಮ್ಮ ಕೈ ತಪ್ಪುವ ಸಾಧ್ಯತೆಗಳಿವೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮೋಸ ಹೋಗುವ ಸಾಧ್ಯತೆ ಜಾಸ್ತಿ ಎನ್ನಬಹುದು. ಆದ್ದರಿಂದ ಈ ಸಮಯದಲ್ಲಿ ಕನ್ಯಾ ರಾಶಿಯವರು ಬಹಳ ಜಾಗರೂಕರಾಗಿ ಇರಬೇಕಾಗುತ್ತದೆ.

ಕುಂಭ ರಾಶಿ:

ಕುಂಭ ರಾಶಿಯಲ್ಲಿ ಜನಿಸಿದವರಿಗೆ ಕೇತುವು ೮ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಕೇತುವು ಇರುವುದರಿಂದ ಅಪಘಾತ, ಅನಿರೀಕ್ಷಿತ ನಷ್ಟ ಆಗುವ ಸಾಧ್ಯತೆಗಳಿವೆ. ೮ನೇ ಮನೆಯಲ್ಲಿ ಇರುವ ಕೇತುವು 12, 2 ಮತ್ತು 4ನೇ ಮನೆಯ ಮೇಲೆ ತನ್ನ ದೃಷ್ಟಿ ಬೀರುತ್ತಾನೆ. ಇದರಿಂದಾಗಿ ನಿಮ್ಮ ಬುದ್ದಿವಂತಿಕೆಯನ್ನು ನಿಮ್ಮ ಸ್ನೇಹಿತರು ನಿಯಂತ್ರಿಸಲು ಪ್ರಾರಂಭಿಸುತ್ತಾರೆ. ಕೇತುವಿನ ಪ್ರಭಾವದಿಂದಾಗಿ ಕುಟುಂಬದಲ್ಲಿಯೂ ಹಲವಾರು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಹಾಗಾಗಿ ಕುಟುಂಬದವರ ಜೊತೆ ಆದಷ್ಟು ಹೊಂದಾಣಿಕೆಯಿಂದ ಇರುವುದು ಒಳಿತು. ಈ ಸಮಯದಲ್ಲಿ ನಿಮ್ಮ ಮಾತಿನ ಪ್ರಭಾವದಿಂದ ದೊಡ್ಡ ದೊಡ್ಡ ಕೆಲಸಗಳು ಸುಲಭವಾಗಿ ಆಗುವ ಸಾಧ್ಯತೆಗಳು ಇವೆ.

Comments are closed.