Property Rules: ನೀವು ಮನೆ ಬಾಡಿಗೆ  ನೀಡಿ ಈ ತಪ್ಪು ಮಾಡಿದ್ರೆ ಬಾಡಿಗೆದಾರನೇ ಮನೆ ಮಾಲಿಕನೂ ಆಗಬಹುದು; ತಿಳಿಯಿರಿ ಹೊಸ ಕಾನೂನು!

Property Rules: ನಗರ ಪ್ರದೇಶದಲ್ಲಿ ಹೆಚ್ಚಿನ ಜನರು ಬಾಡಿಗೆ ಮನೆಯಲ್ಲಿಯೇ ವಾಸ ಮಾಡುತ್ತಾರೆ. ನಗರ ಪ್ರದೇಶದಲ್ಲಿ ಸೈಟ್ ಖರೀದಿಸಿ ಮನೆ ನಿರ್ಮಾಣ ಮಾಡಿದವರು ಬಾಡಿಗೆ ನೀಡುವ ಸಲುವಾಗಿಯೇ ಮತ್ತೊಂದು ಮನೆ, ಅಥವಾ ಮನೆಯ ಮೇಲೆ ರೂಂಗಳನ್ನು ಮಾಡಿರುತ್ತಾರೆ. ಹೀಗೆ ನೀವು ಮನೆಯನ್ನು ಬಾಡಿಗೆಗೆ ನೀಡುವ ವೇಳೆ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಬಾಡಿಗೆದಾರರೇ ಆ ಮನೆಯ ಓನರ್ ಆಗುವ ಸಾಧ್ಯತೆಗಳಿವೆ. ಇದನ್ನೂ ಓದಿ: Jio Petrol bunk dealership: ಸ್ವಂತ ಉದ್ಯೋಗ ಶುರು ಮಾಡಬೇಕಾ? ಜಿಯೋದಿಂದ ಸಿಗುತ್ತೆ ಸಹಾಯ! ಇಂದೇ ಡೀಲರ್ ಶಿಪ್ ಬುಕ್ ಮಾಡಿಕೊಳ್ಳಿ! ಲಕ್ಷ ಲಕ್ಷ ಹಣ ಗಳಿಸಿ!  

ಸಾಮಾನ್ಯವಾಗಿ ಮನೆ, ಜಮೀನು, ಸೈಟ್ಗಳನ್ನು ಅಚಲ ಸಂಪತ್ತು ಎಂದು ಕಾನೂನಿನ ಪ್ರಕಾರ ಕರೆಯಲಾಗುತ್ತದೆ. ಇದನ್ನು ಯಾರೂ ಕೂಡ ಕಳವು ಮಾಡಲು ಸಾಧ್ಯವಿಲ್ಲ. ಆದರೆ ಮಾಲೀಕರ ನಿರ್ಲಕ್ಷ್ಯ ಅಥವಾ ಕೆಲವೊಂದು ತಪ್ಪಿನಿಂದ ಆ ಆಸ್ತಿಯು ಸುಲಭವಾಗಿ ಇನ್ನೊಬ್ಬರ ಪಾಲಾಗುವ ಸಾಧ್ಯತೆಗಳಿವೆ.

ಒಂದು ವೇಳೆ ನೀವು ಬಾಡಿಗೆ ನೀಡಿದ ಮನೆಯಲ್ಲಿ ಆ ವ್ಯಕ್ತಿಯು 12 ವರ್ಷಗಳಿಗಿಂತ ಹೆಚ್ಚಿನ ವರ್ಷ ವಾಸವಿದ್ದಲ್ಲಿ ಆ ಮನೆಯ ಮಾಲೀಕ ಆತನೇ ಆಗಿರುತ್ತಾನೆ. ಭಾರತದ ಕಾನೂನಿನ ಅಡ್ವೋರ್ಸ್ ಪೊಸೆಶನ್ ಕಾಯ್ದೆಯ ಪ್ರಕಾರ ಬಾಡಿಗೆಗೆ ಪಡೆದ ವ್ಯಕ್ತಿ ಆ ಮನೆಯನ್ನು ಕಬ್ಜಾ ಮಾಡುವ ಎಲ್ಲ ಅಧಿಕಾರ ಹೊಂದಿರುತ್ತಾನೆ. ಟ್ರಾನ್ಸಫರ್ ಆಫ್ ಪ್ರಾಪರ್ಟಿ ಕಾಯ್ದೆಯ ಪ್ರಕಾರ 12  ವರ್ಷಗಳಿಗಿಂತ ಹೆಚ್ಚಿನ ಕಾಲ ಒಬ್ಬ ವ್ಯಕ್ತಿಯು ಇದ್ದಲ್ಲಿ ಕಾನೂನಾತ್ಮಕವಾಗಿ ಆತನದ್ದೇ ಎಂದು ಘೋಷಣೆ ಮಾಡಬಹುದಾಗಿದೆ. ಇದನ್ನೂ ಓದಿ: Gas agency business: ಗ್ಯಾಸ್ ಏಜೆನ್ಸಿ ವ್ಯಾಪಾರದಲ್ಲಿ ಎಷ್ಟು ಬಂಡವಾಳ ಹಾಕಬೇಕು ಲಾಭ ಎಷ್ಟು ಸಿಗುತ್ತೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸಾಕಷ್ಟು ಸಂದರ್ಭದಲ್ಲಿ ಬಾಡಿಗೆಗೆ ಬರುವ ಜನರು ಇಂತಹ ಕಾಯ್ದೆಗಳನ್ನು ಉಪಯೋಗಿಸಿಕೊಂಡು ಬಾಡಿಗೆ ಮನೆಯನ್ನು ತಮ್ಮ ಸ್ವಂತ ಮನೆಯಾಗಿ ಮಾಡಿಕೊಂಡಿರುವ ಉದಾಹರಣೆಗಳು ಇವೆ. ಭಾರತದಲ್ಲಿ ಹಲವರಿಗೆ ಇದರ ಅರಿವು ಇರುವುದಿಲ್ಲ. ನಂತರ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಟ ಮಾಡುವ ಪರಿಸ್ಥಿತಿ ಬರಲಿದೆ.

ಈ ಎಲ್ಲ ಸಮಸ್ಯೆಯಿಂದ ಪಾರಾಗಬೇಕು ಎಂದರೆ ನೀವು ಬಾಡಿಗೆ ನೀಡುವ ಮನೆಗೆ ಬಾಡಿಗೆದಾರರ ಜೊತೆ 11 ತಿಂಗಳ ಕರಾರನ್ನು ಮಾಡಿಕೊಳ್ಳಬೇಕು. ಅದನ್ನು ವರ್ಷ ವರ್ಷ ರಿನಿವಲ್ ಮಾಡಬೇಕು. ಇದರಿಂದ ಮನೆಯನ್ನು ಅವರು ಕಬ್ಜಾ ಮಾಡಲು ಸಾಧ್ಯವಾಗುವುದಿಲ್ಲ. ಈ ಬಾಡಿಗೆ ಕರಾರು ಪತ್ರವನ್ನು ಮನೆಯ ಮಾಲೀಕರು ಹಾಗೂ ಬಾಡಿಗೆದಾರರು ಇಬ್ಬರು ಒಪ್ಪುವ ರೀತಿಯಲ್ಲಿ ಮಾಡಿಸಬೇಕು. ಹೀಗೆ ಮಾಡುವುದರಿಂದ ನೀವು ಹಾಗೂ ಬಾಡಿಗೆದಾರರ ಸಂಬಂಧವೂ ಚೆನ್ನಾಗಿರುತ್ತದೆ. ನಿಮಗೂ ಯಾವುದೇ ಕಿರಿಕಿರಿ ಇರುವುದಿಲ್ಲ.

Comments are closed.