Jio Petrol bunk dealership: ಸ್ವಂತ ಉದ್ಯೋಗ ಶುರು ಮಾಡಬೇಕಾ? ಜಿಯೋದಿಂದ ಸಿಗುತ್ತೆ ಸಹಾಯ! ಇಂದೇ ಡೀಲರ್ ಶಿಪ್ ಬುಕ್ ಮಾಡಿಕೊಳ್ಳಿ! ಲಕ್ಷ ಲಕ್ಷ ಹಣ ಗಳಿಸಿ!  

Jio Petrol bunk dealership: ಪ್ರತಿಯೊಬ್ಬರಿಗೂ ಸ್ವಂತ ಉದ್ಯೋಗ ಮಾಡಬೇಕು. ಆ ಮೂಲಕ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕು. ಸ್ವಾಭೀಮಾನಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ. ಸ್ವಂತ ಉದ್ಯಮ ಪ್ರಾರಂಭಿಸಲು ಬಂಡವಾಳದ ಅವಶ್ಯಕತೆ ಇರುತ್ತದೆ. ಉದ್ಯಮ ಪ್ರಾರಂಭಿಸುವ ವೇಳೆ ಯಾವುದು ಲಾಭದಾಯಕ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದೀಗ ದೇಶದಲ್ಲಿ ವಾಹನ ಮಾರಾಟ ಜೋರಾಗಿದೆ. ಪ್ರತಿಯೊಬ್ಬರೂ ವಾಹನ ಹೊಂದಿರುತ್ತಾರೆ. ಹಾಗಾಗಿ ಪೆಟ್ರೋಲ್ ಪಂಪ್ (Petrol Pump) ಆರಂಭಿಸುವುದು ಸದ್ಯದ ಮಟ್ಟಿಗೆ ಲಾಭದ ಉದ್ಯಮ ಎಂದು ಹೇಳಬಹುದು. ಇದನ್ನೂ ಓದಿ: Labour Card: ರದ್ದಾಗಲಿದೆ ಈ ಕಾರ್ಡ್; ಸರ್ಕಾರದ ಬಹುದೊಡ್ದ ನಿರ್ಧಾರ? ಯಾರಿಗೆ ಆಗಲಿದೆ ನಷ್ಟ?

ನಮ್ಮ ದೇಶದಲ್ಲಿ ಪೆಟ್ರೋಲ್ ಪಂಪ್ ಆರಂಭಿಸಲು ಡೀಲರ್ ಶಿಪ್ ನೀಡುವ ಹಲವು ಕಂಪನಿಗಳಿವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ ಪೆಟ್ರೋಲಿಯಂ ಕಂಪನಿಗಳು ತಮ್ಮ ಡಿಲರ್ ಶಿಪ್ ನೀಡುತ್ತಿವೆ. ಇದೀಗ ಜಿಯೋ ಬಿಪಿ ಪೆಟ್ರೋಲಿಯಂ ಡಿಲರ್ ಶಿಪ್ ನೀಡಲು ಮುಂದಾಗಿದೆ.

ರಿಲಯನ್ಸ್ ಕಂಪನಿಯು ತನ್ನ ವ್ಯವಹಾರ ವಿಸ್ತರಿಸುವ ಸಲುವಾಗಿ ಈ ಪೆಟ್ರೋಲ್ ಪಂಪ್ ಡಿಲರ್ ಶಿಪ್ ನೀಡುತ್ತಿದೆ. ಆಸಕ್ತರು ಜಿಯೋ ವೆಬ್ ಸೈಟ್ಗೆ ಭೇಟಿ ನೀಡಿ ಅಲ್ಲಿ ಕೇಳಲಾಗುವ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಬಂಡವಾಳ ಎಷ್ಟು ಬೇಕು?:

ಪೆಟ್ರೋಲ್ ಪಂಪ್ ಆರಂಭಿಸುವವರು ರಸ್ತೆ ಬದಿಯಲ್ಲಿ ಕನಿಷ್ಟ ೮೦೦ ಚದರ್ ಅಡಿ ಎನ್ಎ ಆದ ಜಮೀನು ಮೂವರು ಪಂಪ್ ಮ್ಯಾನೇಜರ್ಗಳು, ಶೌಚಾಲಯವನ್ನು ಹೊಂದಿರಬೇಕು. ಇನ್ನು ಅರ್ಜಿ ಸಲ್ಲಿಸುವ ವೇಳೆ ೭೦ ಲಕ್ಷ ರೂ. ಡಿಫೋಸಿಟ್ ಇಡಬೇಕಾಗುತ್ತದೆ. ಪೆಟ್ರೋಲ್ ಪಂಪ್ ಪಾರ್ನಲ್ ಮಾಡಲು ಜಿಯೋ ಕಂಪನಿಯು ಯಾವುದೇ ಎಜೆಂಟ್ ನೇಮಕ ಮಾಡಿಲ್ಲ ಎಂದು ತಿಳಿಸಿದೆ.

ಸಿಗುವ ಲಾಭ ಎಷ್ಟು?:

ಪೆಟ್ರೋಲ್ ಪಂಪ್ ಡಿಲರ್ ಶಿಪ್ ತೆಗೆದುಕೊಂಡ ನಂತರ ನಿಮ್ಮ ಬಂಕ್ನಲ್ಲಿ ಎಷ್ಟು ಪೆಟ್ರೋಲ್ ಮಾರಾಟ ಮಾಡಲಾಗುತ್ತದೆ ಎನ್ನುವದರ ಮೇಲೆ ಲಾಭ ನಿರ್ಧರಿತವಾಗುತ್ತದೆ. ಪ್ರತಿ ಲೀಟರ್ ಪೆಟ್ರೋಲ್ ಮಾರಾಟದ ಮೇಲೆ 2 ರಿಂದ 5 ರೂ. ಕಮಿಷನ್ ನೀಡಲಾಗುತ್ತದೆ. ಈ ಮೂಲಕ ಹೆಚ್ಚಿನ ಪೆಟ್ರೋಲ್ ಮಾರಾಟವಾದಲ್ಲಿ ತಿಂಗಳಿಗೆ ನೀವು 1 ಲಕ್ಷ ರೂ.ಗೂ ಅಧಿಕ ಲಾಭ ಗಳಿಸಬಹುದು. ಇದನ್ನೂ ಓದಿ: Hotel Business: ಹೊಟೆಲ್ ಆರಂಭಿಸುವುದು ಇನ್ನೂ ಸುಲಭ; ಸರ್ಕಾರದಿಂದ ಸಿಗುತ್ತೆ ಸಹಾಯಧನ; ಕೂಡಲೇ ಅರ್ಜಿ ಸಲ್ಲಿಸಿ!

ಈ ರೀತಿ ಸದ್ಯ ಇರುವ ಅವಕಾಶವನ್ನು ಉಪಯೋಗಿಸಿಕೊಂಡು ನೀವು ಪೆಟ್ರೋಲ್ ಬಂಕ್ ಆರಂಭಿಸಿದರೆ ಲಾಭಗಳಿಸಬಹುದು.

Comments are closed.