Gruhalakashmi Scheme: ಕಡೆಗೂ ಎರಡನೇ ಕಂತಿನ ಗೃಹ ಲಕ್ಷ್ಮಿ ಹಣ ಬಿಡುಗಡೆಗೆ ಮುಹೂರ್ತ ಫಿಕ್ಸ್; ಇಂಥವರಿಗೆ ಸಿಗಲ್ದ್ 4,000ರೂ. !

Gruhalakashmi Scheme ಪ್ರಸ್ತುತ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನ್ನು ಜಾರಿಗೆ ತಂದಿದೆ. ಬಸ್ನಲ್ಲಿ ಮಹಿಳೆಯರಿಗೆ ಉಚಿತವಾಗಿ ಓಡಾಡುವ ಶಕ್ತಿ ಯೋಜನೆ, 2೦೦ ಯುನಿಟ್ ಒಳಗಡೆ ಉಪಯೋಗಿಸಿದ ಎಲ್ಲ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, 1೦ ಕೆ.ಜಿ. ಪಡಿತರ ನೀಡುವ ಅನ್ನ ಭಾಗ್ಯ ಹಾಗೂ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2೦೦೦ ರೂ. ಜಮಾ ಮಾಡುವ ಗೃಹ ಲಕ್ಷ್ಮಿ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ. ಇದನ್ನೂ ಓದಿ: Business Idea: 10 ಸಾವಿರ ನಿಮ್ಮ ಬಳಿ ಇದ್ರೆ ಸಾಕು, ಲಕ್ಷ ಲಕ್ಷ ಹಣ ಗಳಿಸಬಹುದು; ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್!  

ಗೃಹ ಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ರಕ್ಷಾ ಬಂಧನ ಹಬ್ಬದ ದಿನ ಚಾಲನೆ ನೀಡಿದರು. ಈ ಯೋಜನೆ ಆರಂಭದಿಂದಲೂ ಗೊಂದಲದ ಗೂಡಾಗಿದೆ. ಇದುವರೆಗೆ ಹಲವು ಫಲಾನುಭವಿಗೆ ಈ ಯೋಜನೆ ತಲುಪಿಲ್ಲ. ಸರ್ಕಾರವು ಸಹ ಎಲ್ಲ ಅರ್ಹರಿಗೆ ತಲುಪಿಸುವ ಸಲುವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೂ ಕೆಲ ತಾಂತ್ರಿಕ ತೊಂದರೆಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಇದುವರೆಗೆ ಹಲವು ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ. ಈ ನಡುವೆ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಭರವಸೆಯನ್ನು ಸ್ವತಃ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ. ಇದರಿಂದ ಫಲಾನುಭವಿಗಳು ಸ್ವಲ್ಪ ನಿರಾಳರಾಗಿದ್ದಾರೆ.

ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ? ಪಡಿತರ ಚೀಟಿಯಲ್ಲಿ ಹಾಗೂ ಆಧಾರ್ನಲ್ಲಿ ಹೆಸರು ಒಂದೇ ರೀತಿ ಇದೆಯೇ? ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯ ಹೆಸರು ಮೊದಲು ಇದೆಯೇ? ಸೇರಿದಂತೆ ಎಲ್ಲ ರೀತಿಯಲ್ಲಿಯೂ ಅರ್ಜಿ ಸಮರ್ಪಕವಾಗಿ ಸಲ್ಲಿಕೆಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಎಲ್ಲ ರೀತಿಯಲ್ಲಿಯೂ ಸರಿಯಾಗಿದ್ದೂ, ಹಣ ಜಮಾ ಆಗದಿದ್ದರೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಅಟಲ್ ಜನಸ್ನೇಹಿ ಕೇಂದ್ರ ಅಥವಾ ಪಡಿತರ ಅಂಗಡಿ ಅಧಿಕಾರಿಗಳ ಭೇಟಿ ಮಾಡಿ ಮನವಿ ಸಲ್ಲಿಸಬಹುದು.

ಗೃಹ ಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಜಮಾ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಅರ್ಹ ಫಲಾನುಭವಿಗಳ ಖಾತೆ ಹಣ ಜಮಾ ಆಗಲಿದೆ ಎಂದು ಸರ್ಕಾರ ತಿಳಿಸಿದೆ. ಅಕ್ಟೋಬರ್ 15ರ ಬಳಿಕ ಹಣ ಜಮಾ ಆಗುವುದು ಖಚಿತವಾಗಿದೆ. ಇದನ್ನೂ ಓದಿ: Ration Card Changes: ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ; ನಿಮ್ಮ ಜಿಲ್ಲೆಗೆ ಯಾವ ದಿನ ಫಿಕ್ಸ್ ಆಗಿದೆ ತಿಳಿದುಕೊಳ್ಳಿ; ಕೇವಲ 3 ದಿನಗಳ ಅವಕಾಶ!

ನಿಮಗೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ಏನಾದರೂ ಗೊಂದಲಗಳಿದ್ದರೆ ನೀವು ಸೇವಾ ಸಿಂಧು ಕೇಂದ್ರಕ್ಕೆ ತೆರಳಿ ಗೊಂದಲ ಬಗೆಹರಿಸಿಕೊಳ್ಳಬಹುದು. ಇಲ್ಲವೇ ಸರ್ಕಾರ ನೀಡಿರುವ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಗೊಂದಲ ಬಗೆಹರಿಸಿಕೊಳ್ಳಬಹುದಾಗಿದೆ. ಫಲಾನುಭವಿಗಳು 81475೦೦5೦೦ ಅಥವಾ 1902 ನಂಬರ್ಗೆ ಕರೆ ಮಾಡಿ ತಮ್ಮ ಡೌಟ್ ಕ್ಲೀಯರ್ ಮಾಡಿಕೊಳ್ಳಬಹುದು.

Comments are closed.