Aadhaar Card Update; 10 ವರ್ಷದ ಹಿಂದೆ ಆಧಾರ್ ಕಾರ್ಡ್ ಮಾಡಿಸಿದ್ರೆ ತಕ್ಷಣ ಈ ಕೆಲಸ ಮಾಡಿ; ಕೇಂದ್ರ ಸರ್ಕಾರದ ಮಹತ್ವದ ಸೂಚನೆ!

Aadhaar Card Update; ಇಂದು ನಾವು ಯಾವುದೇ ಕಚೇರಿ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದರೆ ಆಧಾರ್ ಕಾರ್ಡ್ ನೀಡಲೇಬೇಕಾಗುತ್ತದೆ. ಭಾರತದಲ್ಲಿ ಆಧಾರ್ ಕಾರ್ಡ್ ಸರ್ಕಾರಿ ಅಥವಾ ಸರ್ಕಾರೇತರ ಕೆಲಸಗಳಿಗೆ ಪ್ರಮುಖ ದಾಖಲೆಯಾಗಿದೆ. ಹಾಗಾಗಿ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಮಾಡಿಸುವ ವೇಳೆ ನೀವು ನೀಡಿರುವ ಮಾಹಿತಿ ತಪ್ಪಿದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಅಲ್ಲದೆ ನೀವು ಆಧಾರ್ ಕಾರ್ಡ್ ಮಾಡಿಸಿ 1೦ ವರ್ಷಗಳು ಕಳೆದಿದ್ದರೆ ಅದನ್ನು ಅಪ್ಡೇಟ್ ಮಾಡಬೇಕಾಗುತ್ತದೆ.

ಆಧಾರ್ ಕಾರ್ಡ್ ಮಾಡಿಸಿಕೊಂಡು 1೦ ವರ್ಷಕ್ಕೂ ಮೇಲ್ಪಟ್ಟವರು ಕಡ್ಡಾಯವಾಗಿ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆಧಾರ್ ನವೀಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವು ಇದೀಗ ಹೊಸ ಮಾಹಿತಿ ಒಂದನ್ನು ನೀಡಿದೆ.

ಇನ್ನು ಯುಐಡಿಎಐ ಆಗಾಗ ತನ್ನ ಹೊಸ ಹೊಸ ವಿಚಾರಗಳನ್ನು ಸಾಮಾಜಿಕ ಜಾಲತಾಣದ ಮೂಲಕ, ಪತ್ರಿಕಾ ಪ್ರಕಟಣೆಗಳ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತದೆ. ಈಗಾಗಲೇ ಯುಐಡಿಎಐ ಆಧಾರ್ ನವೀಕರಣ ಮಾಡಲು ಸೂಚನೆ ನೀಡಿದೆ. ಉಚಿತವಾಗಿ ಆಧಾರ್ ನವೀಕರಣಕ್ಕೆ ಅವಕಾಶ ನೀಡಿರುವ ಯುಐಡಿಎಐ ಇದೀಗ ಜನ ಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ.

ಜೂನ್ 14 ರಿಂದ ಸಪ್ಟೆಂಬರ್ 14 ರ ತನಕ ಮಾತ್ರ ಯುಐಡಿಎಐ ಆಧಾರ್ ಉಚಿತವಾಗಿ ನವೀಕರಣ ಮಾಡಲು ಅವಕಾಶ ನೀಡಿತ್ತು. ಸಪ್ಟೆಂಬರ್ 14 ರ ನಂತರ ದಂಡ ಪಾವತಿಸಿ ನವೀಕರಣ ಮಾಡಿಸಿಕೊಳ್ಳಬೇಕಿತ್ತು. ಇದೀಗ ಯುಐಡಿಎಐ ಆಧಾರ್ ನವೀಕರಣ ದಿನಾಂಕವನ್ನು ವಿಸ್ತರಣೆ ಮಾಡಿದೆ. ಇದೀಗ ಡಿಸೆಂಬರ್ 14 ನೀವು ಯಾವುದೇ ಶುಲ್ಕ ನೀಡದೆ ಆಧಾರ್ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

ನೀವು ಕರ್ನಾಟಕ ಒನ್, ಗ್ರಾಮ ಒನ್, ತಾಲೂಕು ಅಂಚೆ ಕಚೇರಿ, ತಹಶೀಲ್ದಾರ್ ಕಚೇರಿಗಳಲ್ಲಿ ಆಧಾರ್ ನವೀಕರಣಕ್ಕೆ ಅವಕಾಶ ನೀಡಲಾಗಿದೆ. ಇಷ್ಟೇ ಅಲ್ಲದೆ ನೀವು ಮನೆಯಲ್ಲಿಯೇ ಕುಳಿತು ಆಧಾರ್ ಅಪ್ಡೇಟ್ ಮಾಡಿಕೊಳ್ಳಬಹುದು. ಮೈ ಆಧಾರ್ ವೆಬ್ ಸೈಟ್ಗೆ ಭೇಟಿ ನೀಡಿ ಅಲ್ಲಿ ಕೇಳಲಾಗುವ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕವೂ ನವೀಕರಣ ಮಾಡಿಕೊಳ್ಳಬಹುದು.

Comments are closed.