Horoscope Predictions: ಗ್ರಹಣದ ದಿನ ತ್ರಿಗ್ರಹ ಯೋಗ ನಿರ್ಮಾಣ; ಇದರಿಂದ ಈ ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

Horoscope Predictions; ಈ ವರ್ಷದ ಕೊನೆಯ ಸೂರ್ಯಗ್ರಹಣವು ಈ ಅಮಾವಾಸ್ಯೆಯಂದು ಅಂದರೆ ಅಕ್ಟೋಬರ್ ೧೪ರಂದು ಸಂಭವಿಸಲಿದೆ. ಸೂರ್ಯಗ್ರಹಣದ ದಿನ ಸೂರ್ಯ, ಬುಧ ಹಾಗೂ ಚಂದ್ರ ಕನ್ಯಾ ರಾಶಿಯಲ್ಲಿ ಇರಲಿವೆ. ಇದರಿಂದಾಗಿ ಗ್ರಹಣದ ದಿನ ತ್ರಿಗ್ರಹಿ ಯೋಗ ನಿರ್ಮಾಣವಾಗಲಿದೆ. ಇದು ಕೆಲವೊಂದು ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ.

ಆ ಅದೃಷ್ಟ ಪಡೆಯುವ ರಾಶಿಗಳು ಯಾವುದು ಎಂದು ಈಗ ನೋಡೋಣ. ವೈದಿಕ ಪಂಚಾಂಗದ ಪ್ರಕಾರ ಈ ಅಮವಾಸ್ಯೆಯಂದು ಕನ್ಯಾ ರಾಶಿಯಲ್ಲಿ ಸೂರ್ಯ ಗ್ರಹಣವು ಸಂಭವಿಸಲಿದೆ. ಕನ್ಯಾ ರಾಶಿಯ ಅಧಿದೇವತೆ ದುರ್ಗಾ ಪರಮೇಶ್ವರಿ ದೇವಿ.ಇಂತಹ ಪರಿಸ್ಥಿತಿಯಲ್ಲಿ ಭಾನುವಾರ ಸೂರ್ಯ ಗ್ರಹಣದಿಂದ ಮುಕ್ತಿ ಪಡೆದು ಆ ಶುಭ ಮುಹೂರ್ತದಲ್ಲಿ ನವರಾತ್ರಿ ಹಬ್ಬವು ಆರಂಭವಾಗಲಿದೆ. ಈ ಬಾರಿ ದುರ್ಗಾ ದೇವಿಯು ಆನೆಯ ಮೇಲೆ ಸವಾರಿ ಮಾಡುತ್ತ ಆಗಮಿಸಲಿದ್ದಾಳೆ.

ಇದನ್ನು ಕೂಡ ಓದಿ: ರಾಜ್ಯದ ಎಲ್ಲಾ ನಿರುದ್ಯೋಗಿ ಯುವಕರೂ ಸುಲಭವಾಗಿ ಸ್ವಂತ ವಾಹನ ಖರೀದಿಸಬಹುದು; ಸರ್ಕಾರ ನೀಡುತ್ತೆ ವಾಹನದ ಅರ್ಧ ಹಣ; ಇಂದೇ ಅಪ್ಲೈ ಮಾಡಿ! Swavalambi Sarathi Scheme Karnataka

Horoscope Predictions: These Zodiac signs will get benefits after Dasara festival.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಈ ಸೂರ್ಯಗ್ರಹಣದ ದಿನ ಉಂಟಾಗುವ ತ್ರಿಗ್ರಹಿ ಯೋಗದಿಂದ ಜೀವನದಲ್ಲಿ ಪ್ರಗತಿ ಕಾಣಲಿದ್ದಾರೆ. ನಿಮ್ಮ ಬಳಿಯಿಂದ ಹಣ ತೆಗೆದುಕೊಂಡು ವಾಪಸ್ ಕೊಡದೆ ಸತಾಯಿಸುತ್ತ ಇರುವವರು ಈ ಸಂದರ್ಭದಲ್ಲಿ ಹಣ ವಾಪಸ್ ಮಾಡುವ ಸಾಧ್ಯತೆಗಳಿವೆ. ಹಣದ ಹರಿವು ಹೆಚ್ಚಾಗುವುದರಿಂದ ಜೀವನದಲ್ಲಿ ಸುಖ ಹಾಗೂ ಸೌಕರ್ಯಗಳು ಹೆಚ್ಚಾಗಲಿದೆ. ಕಚೇರಿಯಲ್ಲಿಯೂ ಎಲ್ಲರೂ ನಿಮ್ಮ ಕೆಲಸವನ್ನು ಪ್ರಶಂಶಿಸಲಿದ್ದಾರೆ. ಇದರಿಂದಾಗಿ ನಿಮ್ಮ ಘನತೆ, ಗೌರವ ಹೆಚ್ಚಾಗಲಿದೆ.

ಸಿಂಹ ರಾಶಿ (Horoscope Predictions on Leo): ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಈ ಮಂಗಳಕರ ಯೋಗದಿಂದ ಜೀವನದಲ್ಲಿ ಉನ್ನತಿಯನ್ನು ಕಾಣಲಿದ್ದಾರೆ. ನಿಮ್ಮ ವೃತ್ತಿ ಜೀವನದಲ್ಲಿ ಅನಿರೀಕ್ಷಿತವಾಗಿ ಭಡ್ತಿಯನ್ನು ಕಾಣಲಿದ್ದೀರಿ. ಶತ್ರುಗಳ ವಿರುದ್ಧ ನಿಮಗೆ ಜಯವಾಗಲಿದೆ. ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಹೆಚ್ಚಲಿದೆ. ಜಗನ್ಮಾತೆ ದುರ್ಗಾ ದೇವಿಯ ಅನುಗ್ರಹದಿಂದ ನೀವು ಹೊಸ ಉದ್ಯಮ ಸ್ಥಾಪಿಸಲು ಯೋಚಿಸುತ್ತಿದ್ದರೆ ಇದುವೇ ಸುಸಂದರ್ಭ. ನಿಮ್ಮ ಮಕ್ಕಳಿಂದ ಸಿಹಿ ಸುದ್ದಿ ಕೇಳಿ ಸಂಭ್ರಮಿಸಲಿದ್ದೀರಿ.

ತುಲಾ ರಾಶಿ (Horoscope Predictions on Libra): ತುಲಾ ರಾಶಿಯಲ್ಲಿ ಜನಿಸಿದವರಿಗೂ ತ್ರಿಗ್ರಹಿ ಯೋಗದಿಂದ ಅದೃಷ್ಟವು ಹುಡುಕಿಕೊಂಡು ಬರಲಿದೆ.ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಾಣಲಿದ್ದೀರಿ. ನಿಮ್ಮ ವೃತ್ತಿ ಮತ್ತು ಕುಟುಂಬದಲ್ಲಿ ಹಲವಾರು ವರ್ಷಗಳಿಂದ ನೀವು ಬದಲಾವಣೆ ಕಾಣಬೇಕು ಎಂದು ಇಚ್ಚಿಸುತ್ತಿದ್ದರೆ ಅದು ಈ ಸಮಯದಲ್ಲಿ ಈಡೇರಲಿದೆ. ಸಮಾಜದಲ್ಲಿಯೂ ನಿಮ್ಮ ಗೌರವ, ಸ್ಥಾನಮಾನಗಳು ಹೆಚ್ಚಾಗಲಿದೆ. ನಿಮ್ಮ ಸಂಪತ್ತು ವೃದ್ಧಿಸಲಿದೆ. ಕುಟುಂಬದಲ್ಲಿ ಸುಖ-ಸಂತೋಷ ನೆಲೆಸಲಿದೆ.

ರದ್ದಾಗಲಿದೆ ಈ ಕಾರ್ಡ್; ಸರ್ಕಾರದ ಬಹುದೊಡ್ದ ನಿರ್ಧಾರ? ಯಾರಿಗೆ ಆಗಲಿದೆ ನಷ್ಟ? Kannada News

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಮೊದಲಿನಿಂದಲೂ ಅದೃಷ್ಟವಂತರು. ಈ ಸೂರ್ಯಗ್ರಹಣ ದಿನ ಉಂಟಾಗುವ ತ್ರಿಗ್ರಹಿ ಯೋಗದಿಂದ ಇನ್ನಷ್ಟು ಸುಖ -ಸಂತೋಷ ನಿಮ್ಮದಾಗಲಿದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗಲಿದೆ. ಇಷ್ಟು ವರ್ಷ ನೀವು ಪಟ್ಟ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಕಾಲ ಬಂದಿದೆ. ನೀವು ಮಾಡುವ ಎಲ್ಲ ಉತ್ತಮ ಕೆಲಸಗಳಿಗೆ ಕುಟುಂಬದವರ ಬೆಂಬಲ ನಿಮಗೆ ಸಿಗಲಿದೆ.

ಮಕರ ರಾಶಿ: ಮಕರ ರಾಶಿಯಲ್ಲಿ ಜನಿಸಿದವರಿಗೆ ಮಂಗಳಕರ ಯೋಗದಿಂದ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ. ವೃತ್ತಿ ಜೀವನದಕ್ಕೆ ಸಂಬಂಧಿಸಿದಂತೆ ದೊಡ್ಡ ಖುಷಿ ಸುದ್ದಿ ತರಬಹುದು. ನಿಮ್ಮ ಆದಾಯ ಹೆಚ್ಚಾದಂತೆ ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ. ನೀವು ನಿಮ್ಮ ವೃತ್ತಿ ಜೀವನದಲ್ಲಿ ಖುಷಿಯನ್ನು ಅನುಭವಿಸಲಿದ್ದಿರಿ. ಭೂಮಿ, ವಾಹನ ಖರೀದಿಗೆ ಇದು ಸುಸಮಯ. ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಸಹ ದೊಡ್ಡ ಮಟ್ಟದ ಲಾಭ ಗಳಿಸಲಿದ್ದಾರೆ.

Comments are closed.