Gas agency business: ಗ್ಯಾಸ್ ಏಜೆನ್ಸಿ ವ್ಯಾಪಾರದಲ್ಲಿ ಎಷ್ಟು ಬಂಡವಾಳ ಹಾಕಬೇಕು ಲಾಭ ಎಷ್ಟು ಸಿಗುತ್ತೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Gas agency business: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ವ್ಯಾಪಾರ ಮಾಡುವಂತಹ ವಿಚಾರವನ್ನು ತಮ್ಮ ತಲೆಯಲ್ಲಿ ಹೊಂದಿರುತ್ತಾರೆ ಆದರೆ ಪ್ರಮುಖವಾಗಿ ಅವರು ನಿರ್ಧಾರ ಮಾಡಬೇಕಾಗಿರುವುದು ಯಾವ ರೀತಿಯ ವ್ಯಾಪಾರವನ್ನು ಮಾಡಿದರೆ ಹಣವನ್ನು ಲಾಭ ರೂಪದಲ್ಲಿ ಗಳಿಸಬಹುದು ಎನ್ನುವುದನ್ನು. ಸರಿಯಾದ ಲಾಭ ನೀಡುವಂತಹ ವ್ಯಾಪಾರವನ್ನು ಗುರುತಿಸಿ ಅದನ್ನು ಪ್ರಾರಂಭಿಸಿದರೆ ಮಾತ್ರ ಲಾಭವನ್ನು ಪಡೆದುಕೊಳ್ಳಲು ಸಾಧ್ಯ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿರೋದು ಗ್ಯಾಸ್ ಏಜೆನ್ಸಿಯ ವ್ಯಾಪಾರದ(Gas agency business) ಬಗ್ಗೆ. ಈ ವ್ಯಾಪಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಾಗೂ ವಿವರಗಳನ್ನು ಪಡೆದುಕೊಳ್ಳೋಣ ಬನ್ನಿ.

ಇದನ್ನು ಕೂಡ ಓದಿ: ರಾಜ್ಯದ ಎಲ್ಲಾ ನಿರುದ್ಯೋಗಿ ಯುವಕರೂ ಸುಲಭವಾಗಿ ಸ್ವಂತ ವಾಹನ ಖರೀದಿಸಬಹುದು; ಸರ್ಕಾರ ನೀಡುತ್ತೆ ವಾಹನದ ಅರ್ಧ ಹಣ; ಇಂದೇ ಅಪ್ಲೈ ಮಾಡಿ! Swavalambi Sarathi Scheme Karnataka

How to Start Gas agency business in India Explained in Kannada by Kannada news.

ಗ್ಯಾಸ್ ಡೀಲರ್ ಶಿಪ್(gas agency dealership) ನಲ್ಲಿ ವಿವಿಧ ರೀತಿಯ ವಿಭಾಗಗಳು ಕೂಡ ಇರುತ್ತವೆ ನೀವು ಅದರಲ್ಲಿ ಯಾವ ವಿಭಾಗಕ್ಕೆ ಬರುತ್ತೀರಿ ಎಂಬುದನ್ನು ನೋಡಿಕೊಂಡು ಅವುಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಪ್ರದೇಶದಲ್ಲಿ ಇರುವಂತಹ ಜನರು ಹೆಚ್ಚಿಗೆ ಬಳಕೆ ಮಾಡುತ್ತಿರುವಂತಹ ಗ್ಯಾಸ್ ಯಾವುದು ಹಾಗೂ ಅದಕ್ಕೆ ಬೇಕಾಗುವಂತಹ ಬಂಡವಾಳದ ಮೊತ್ತ ಎಷ್ಟಿರಬಹುದು ಎನ್ನುವಂತಹ ಪ್ರಮುಖ ಹಾಗೂ ಮೂಲಭೂತ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು.

ಗ್ಯಾಸ್ ಡೀಲರ್ಶಿಪ್ ಏಜೆನ್ಸಿಯನ್ನು ನೀವು ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಕೆಲವೊಂದು ಅರ್ಹತೆಗಳು ನಿಮ್ಮಲ್ಲಿರಬೇಕು. ಭಾರತೀಯ ನಾಗರಿಕರಾಗಿರಬೇಕು(Indian citizenship). ವಯೋ ಮಾನ್ಯತೆ 21 ರಿಂದ 60 ವರ್ಷದ ನಡುವೆ ಇರಬೇಕು. OMC ಉದ್ಯೋಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇನ್ನು ಅರ್ಜಿ ಸಲ್ಲಿಸುವ ಪ್ರಕ್ರಿಯೆಗಾಗಿ ನೀವು ಖ್ಯಾತ ಕಂಪನಿಗಳ LPG, Indian ಹಾಗೂ HP ಸಂಸ್ಥೆಗಳ ಅಧಿಕೃತ ವೆಬ್ಸೈಟ್ ಗಾಗಿ ಹೋಗಬೇಕಾಗುತ್ತದೆ ಹಾಗೂ ಅಲ್ಲಿ ಆಹ್ವಾನ ನೀಡಲಾಗಿರುತ್ತದೆ. ಮೊದಲಿಗೆ ವೆಬ್ ಸೈಟ್ ಗೆ ಹೋಗಿ ನಿಮ್ಮದೇ ಆದಂತಹ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿ ಬೇಕಾಗುವಂತಹ ವಿವರಗಳನ್ನು ನೀಡಿ ಓಟಿಪಿ ನೀಡಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ನಿಮಗೆ ಅರ್ಜಿ ಸಲ್ಲಿಸಲು ಸುಲಭವಾಗುತ್ತದೆ.

ನಗರ ವಿಭಾಗದಲ್ಲಿ ನೀವು ಏಜೆನ್ಸಿಯನ್ನು ಪ್ರಾರಂಭಿಸಲು 10,000 ಸಾಮಾನ್ಯ ವರ್ಗದ ಜನರು ಶುಲ್ಕವನ್ನು ಕಟ್ಟಬೇಕಾಗುತ್ತದೆ. OBC ವರ್ಗದ ಜನರಿಗೆ 5000 ಹಾಗೂ ಎಸ್ಸಿ ಎಸ್ಟಿ ವರ್ಗದ ಜನರಿಗೆ ಕೇವಲ 3000 ಶುಲ್ಕವನ್ನು ಕಟ್ಟಬೇಕಾಗಿರುವಂತಹ ನಿಯಮ ಇದೆ. ಗ್ರಾಮೀಣ ಭಾಗದ ಜನರ ವಿಚಾರದ ಬಗ್ಗೆ ಮಾತನಾಡುವುದಾದರೆ ಸಾಮಾನ್ಯವಾಗಿ ವರ್ಗದವರಿಗೆ 8000 ಹಾಗೂ ಒಬಿಸಿ ಅವರಿಗೆ 4,000 ಹಾಗೂ ಎಸ್ ಸಿ ಎಸ್ ಟಿ ಜನಾಂಗದ ಅಭ್ಯರ್ಥಿಗಳಿಗೆ ಕೇವಲ 2500 ಶುಲ್ಕವನ್ನು ನಿಗದಿಪಡಿಸಲಾಗಿದೆ. ಕೇಳದಾಗುವಂತಹ ಪ್ರತಿಯೊಂದು ಪತ್ರಗಳನ್ನು ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು ಹಾಗೂ ನೀವು ಯಾವ ಜಾಗದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಸ್ವೀಕರಿಸಿ ಇಡುತ್ತಿರೋ ಅಲ್ಲಿ ಬಂದು ಸಂಸ್ಥೆಯ ಅಧಿಕಾರಿಗಳು ನಿಮ್ಮ ಜಾಗದ ವೆರಿಫಿಕೇಶನ್ ಅನ್ನು ಕೂಡ ಮಾಡುತ್ತಾರೆ. ಇದಕ್ಕಿಂತ ಮುಂಚೇನೆ ನೀವು ಹತ್ತು ಪ್ರತಿಶತ ಹೂಡಿಕೆಯನ್ನು ಮಾಡಿರಬೇಕು.

ರದ್ದಾಗಲಿದೆ ಈ ಕಾರ್ಡ್; ಸರ್ಕಾರದ ಬಹುದೊಡ್ದ ನಿರ್ಧಾರ? ಯಾರಿಗೆ ಆಗಲಿದೆ ನಷ್ಟ? Kannada News

ಸಾಮಾನ್ಯವಾಗಿ ನಗರ ಭಾಗದಲ್ಲಿ 5 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬೇಕಾಗಿರುತ್ತದೆ ಅದೇ ರೀತಿಯಲ್ಲಿ ಒಬಿಸಿ ಅವರಿಗೆ ನಾಲ್ಕು ಲಕ್ಷ ರೂಪಾಯಿಗಳ ಹೂಡಿಕೆ ಹಾಗೂ ಎಸ್ ಎಸ್ ಟಿ ಅವರಿಗೆ 2 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸಾಮಾನ್ಯ ವರ್ಗದ ಜನರಿಗೆ 4 ಲಕ್ಷ ಹಾಗೂ ಒಬಿಸಿ ರವರಿಗೆ ಮೂರು ಲಕ್ಷ ಹಾಗೂ ಎಸ್ಸಿಎಸ್ಟಿ ಜನಾಂಗದವರಿಗೆ ಎರಡು ಲಕ್ಷ ರೂಪಾಯಿಗಳ ಹೂಡಿಕೆಯನ್ನು ಮಾಡಬೇಕಾಗಿದೆ. ಗ್ರಹ ಬಳಕೆಯ LPG CYLINDER ಗಳ ಮೇಲೆ ನೀವು 47 ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ commercial cylinder ಗಳ ಮೇಲೆ ನೀವು 132 ರಿಂದ 154ಗಳವರೆಗೂ ಕೂಡ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಖಂಡಿತವಾಗಿ ದೊಡ್ಡ ಪ್ರಮಾಣದಲ್ಲಿ ನಿಮಗೆ ಗ್ರಾಹಕರಿಸಿದರೆ ಇದರಲ್ಲಿ ಲಾಭವನ್ನು ಪಡೆದುಕೊಳ್ಳಬಹುದು.

Comments are closed.