Gruhalakshmi Scheme: ಗೃಹಲಕ್ಷ್ಮಿ ಬಾರದೆ ಇರಲು ಅಸಲಿ ಕಾರಣ ಇದು! ಸಚಿವರೇ ನೀಡಿದ ಸ್ಪಷ್ಟನೆ!

Gruhalakshmi Scheme ಪ್ರಸ್ತುತ ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮುಂಚೆ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅನ್ನಭಾಗ್ಯ, ಗೃಹ ಲಕ್ಷ್ಮಿ, ಶಕ್ತಿ, ನಿರುದ್ಯೋಗಿಗಳಿಗೆ ಭತ್ಯೆ ನೀಡುವುದಾಗಿ ಘೋಷಿಸಿತ್ತು. ಅದರಂತೆ ಅಧಿಕಾರಕ್ಕೆ ಬಂದ ತಕ್ಷಣ ಶಕ್ತಿ ಯೋಜನೆ ಜಾರಿಗೆ ತಂದಿತು. ಇದರ ಪ್ರಕಾರ ಮಹಿಳೆಯರು ರಾಜ್ಯದ ಒಳಗಡೆ ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಓಡಾಡಬಹುದು. ಇನ್ನು ರಕ್ಷಾಬಂಧನದ ದಿನ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಆದರೆ ಈ ಯೋಜನೆ ಜಾರಿಗೆ ಬಂದಾಗಿನಿಂದ ಗೊಂದಲದ ಗೂಡಾಗಿದೆ. ಇದೀಗ ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: Property rules: ಪಿತ್ರಾರ್ಜಿತ ಆಸ್ತಿಯಲ್ಲಿ ವಿಚ್ಛೇದಿತ ಮಗಳಿಗೂ ಇದ್ಯಾ ಸಮಪಾಲು? ಏನನ್ನುತ್ತೆ ಕಾನೂನು?

ಗೃಹಲಕ್ಷ್ಮಿ ಯೋಜನೆ ಕುರಿತಾಗಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ ಲಕ್ಷಾಂತರ ಜನ ಫಲಾನುಭವಿಗಳಿಗೆ ಹಣ ಜಮಾ ಆಗಿಲ್ಲ. ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.೦8 ಕೋಟಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು.1.೦8ಕೋಟಿ ಜನರಿಗೆ 2169 ಕೋಟಿ ರೂ. ಜಮಾ ಮಾಡಲಾಗಿದೆ.1.೦8 ಕೋಟಿ ಫಲಾನುಭವಿಗಳಲ್ಲಿ 93 ಲಕ್ಷ ಫಲಾನುಭವಿಗಳಿಗೆ ಮಾತ್ರ ಹಣ ಜಮಾ ಮಾಡಲಾಗಿತ್ತು. 5.5 ಲಕ್ಷ ಜನರಿಗೆ ಡಿಬಿಟಿ ಮೂಲಕ ಹಣ ಜಮಾ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಇವರೆಗೆ 9.44 ಲಕ್ಷ ಜನರಿಗೆ ಇದುವರೆಗೂ ಜಮಾ ಆಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಹಣ ಜಮಾ ಆಗದಿರುವುದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ.3083 ಜನರು ಮರಣ ಹೊಂದಿದ್ದಾರೆ.1.59 ಲಕ್ಷ ಜನರ ಡೆಮೊ ಅರ್ಜಿ ದೃಢಿಕರಣ ವಿಫಲವಾಗಿದೆ.5.96 ಲಕ್ಷ ಜನರ ಆಧಾರ್ ಬ್ಯಾಂಕ್ ಖಾತೆಗೆ ಜೋಡಣೆ ಆಗಿಲ್ಲ. 1.75 ಲಕ್ಷ ಜನರ ಹೆಸರು ಆಧಾರ್ ಹಾಗೂ ಪಡಿತರ ಚೀಟಿಯಲ್ಲಿ ವ್ಯತ್ಯಾಸವಿದೆ.9766 ಜನರ ವೆರಿಫಿಕೇಶನ್ ನಡೆಯುತ್ತಿದೆ. ಇನ್ನು 1.14 ಕೋಟಿ ಫಲಾನುಭವಿಗಳು ಸಪ್ಟೇಂಬರ್ನಲ್ಲಿ ಸೇರಿದ್ದಾರೆ. ಸಫ್ಟೆಂಬರ್ ತಿಂಗಳಿನಲ್ಲಿ 228೦ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಾಗಾಗಿ ಅರ್ಜಿ ಸಲ್ಲಿಸಿದ ಒಬ್ಬರೂ ಕೂಡ ಬೇಸರ ಪಡುವಂತಿಲ್ಲ. ಎಲ್ಲರ ಖಾತೆಗೂ ಹಣ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Labour Card: ರದ್ದಾಗಲಿದೆ ಈ ಕಾರ್ಡ್; ಸರ್ಕಾರದ ಬಹುದೊಡ್ದ ನಿರ್ಧಾರ? ಯಾರಿಗೆ ಆಗಲಿದೆ ನಷ್ಟ?

ಅರ್ಜಿ ಸಲ್ಲಿಸಿರುವವರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿದ್ದರೆ ಕೂಡಲೇ ಮಾಡಿಸಿಕೊಳ್ಳಿ. ನಿಮ್ಮ ಅರ್ಜಿ ತಾಂತ್ರಿಕವಾಗಿ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಆಧಾರ್ ಹಾಗೂ ಪಡಿತರ ಚೀಟಿಯಲ್ಲಿ ಒಂದೇ ಸಮನಾಗಿಯೇ ಎಂದು ಸಹ ಪರೀಕ್ಷಿಸಿ. ಏನೆ ಅನುಮಾನಗಳಿದ್ದರೂ ಪಡಿತರ ನೀಡುವ ಅಂಗಡಿಗೆ ತೆರಳಿ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ

Comments are closed.