Property rules: ಪಿತ್ರಾರ್ಜಿತ ಆಸ್ತಿಯಲ್ಲಿ ವಿಚ್ಛೇದಿತ ಮಗಳಿಗೂ ಇದ್ಯಾ ಸಮಪಾಲು? ಏನನ್ನುತ್ತೆ ಕಾನೂನು?

Property rules: ಪ್ರತಿಯೊಬ್ಬ ವ್ಯಕ್ತಿಯೂ ಸಣ್ಣ ಪ್ರಮಾಣದ ಆಸ್ತಿಯನ್ನಾದರೂ ಹೊಂದಿರುತ್ತಾನೆ. ಆಸ್ತಿಯಲ್ಲಿ ಎರಡು ವಿಧಗಳಿದ್ದು, ಒಂದು ತಲಾ ತಲಾಂತರದಿಂದ ಬಂದಿರುವ ಆಸ್ತಿ. ಇದನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಇನ್ನೊಂದು ಸ್ವಯಾರ್ಜಿತ ಆಸ್ತಿ. ಅಂದರೆ ನಾವೇ ಸ್ವತಃ ಖರೀದಿಸಿರುವ ಆಸ್ತಿ. ನಾವು ಖರೀದಿಸಿರುವ ಆಸ್ತಿಯ ಮೇಲೆ ಯಾರ ಹಕ್ಕು ಇರುವುದಿಲ್ಲ. ಎಲ್ಲ ಹಕ್ಕುಗಳು ನಮ್ಮ ಬಳಿಯಲ್ಲಿಯೇ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕಿರುತ್ತದೆ. ಹಾಗಾಗಿ ತಂದೆ ಇರುವಾಗ ಇಲ್ಲವೇ ನಿಧನದ ನಂತರ ಮಕ್ಕಳು ಅದನ್ನು ಸಮನಾಗಿ ಹಂಚಿಕೊಳ್ಳಬೇಕಾಗುತ್ತದೆ. ಇದನ್ನೂ ಓದಿ: IND vs AUS ICC World Cup 2023: ಭಾರತ-ಆಸ್ಟ್ರೇಲಿಯಾ ನಡುವೆ ಐಸಿಸಿ ವಿಶ್ವಕಪ್ ರೋಚಕ ಮ್ಯಾಚ್ ವೀಕ್ಷಿಸಲು ಕಾದು ಕುಳಿತ ಅಭಿಮಾನಿಗಳು; ಇಲ್ಲಿದೆ ಪಂದ್ಯದ ಸಂಪೂರ್ಣ ಡಿಟೇಲ್ಸ್!  

ಮೊದಲೆಲ್ಲ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ಇರಲಿಲ್ಲ. ಆದರೆ 2೦೦5ರಲ್ಲಿ ಈ ಪಿತ್ರಾರ್ಜಿತ ಆಸ್ತಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಹೆಣ್ಣು ಮಕ್ಕಳಿಗೂ ಸಮಾನ ಹಕ್ಕನ್ನು ನೀಡಲಾಗಿದೆ. ಹಾಗಾಗಿ 2೦೦5ರ ನಂತರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಕೇಳುವ ಹಕ್ಕನ್ನು ಪಡೆದುಕೊಂಡಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಈ ಕಾಯ್ದೆಯಲ್ಲಿ ಬದಲಾವಣೆ ತರಲಾಗಿದೆ.

2೦೦5ರ ಪಿತ್ರಾರ್ಜಿತ ಕಾಯ್ದೆಯಲ್ಲಿ 2೦೦5 ಅಕ್ಟೋಬರ್ ಒಳಗಡೆ ತಂದೆ ಮೃತಪಡದೆ ಇದ್ದಲ್ಲಿ ಮಾತ್ರ ಹೆಣ್ಣು ಮಕ್ಕಳು ಆಸ್ತಿಯಲ್ಲಿ ಹಕ್ಕು ಪಡೆಯುತ್ತಾರೆ ಎಂದು ತಿಳಿಸಲಾಗಿದೆ. ಹಾಗಾಗಿ 2೦೦5 ರ ಅಕ್ಟೋಬರ್ ಒಳಗಡೆ ಪಿತ್ರಾರ್ಜಿತ ಆಸ್ತಿಯ ಮಾಲೀಕ ತೀರಿಕೊಂಡಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ಸಿಗುವುದಿಲ್ಲ. ಇನ್ನು ದೆಹಲಿಯ ಹೈಕೋರ್ಟ್ ತೀರ್ಪು ನೀಡಿದ್ದು, ಅದರ ಪ್ರಕಾರ ವಿಚ್ಛೇದಿತ ಹೆಣ್ಣುಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.

2೦೦5ರ ಪಿತ್ರಾರ್ಜಿತ ಕಾಯ್ದೆಯ ಬದಲಾವಣೆ ಮಾಡಿದ್ದು, ಅದರ ಪ್ರಕಾರ 2೦೦5 ಅಕ್ಟೋಬರ್ ಒಳಗೆ ಪಿತ್ರಾರ್ಜಿತ ಆಸ್ತಿಯ ಮಾಲೀಕ ಅಂದರೆ ತಂದೆಯು ಮೃತಪಟ್ಟಲ್ಲಿ ಆಸ್ತಿ ಸಿಗುವುದಿಲ್ಲ ಎಂದು ತಿಳಿಸಿದೆ.

ಒಂದು ವೇಳೆ ತಂದೆಯು ಸ್ವಯಾರ್ಜಿತ ಆಸ್ತಿ ಗಳಿಸಿದ್ದಲ್ಲಿ ಅದನ್ನು ತಮ್ಮ ಮಕ್ಕಳಿಗಾಗಲಿ, ಹೆಣ್ಣು ಮಕ್ಕಳಿಗಾಗಲಿ ಯಾರಿಗೆ ಬೇಕಾದರೂ ನೀಡಬಹುದಾಗಿದೆ. ಈ ಬಗ್ಗೆ ಮರಣ ಹೊಂದುವದರೊಳಗೆ ಉಯಿಲು ಬರೆದಿಡಬೇಕಾಗುತ್ತದೆ. ಇಲ್ಲವೇ ಮರಣದ ನಂತರ ಇಂತವರಿಗೆ ನನ್ನ ಆಸ್ತಿ ಹಕ್ಕು ಸಿಗಲಿದೆ ಎಂದು ಮೊದಲೆ ಒಪ್ಪಿಗೆ ನೀಡಿರಬೇಕಾಗುತ್ತದೆ. ಅಂದಾಗ ಮಾತ್ರ ಸ್ವಯಾರ್ಜಿತ ಆಸ್ತಿಯ ಹಕ್ಕು ಸಿಗುತ್ತದೆ. ಇದನ್ನು ಓದಿ: Labour Card: ರದ್ದಾಗಲಿದೆ ಈ ಕಾರ್ಡ್; ಸರ್ಕಾರದ ಬಹುದೊಡ್ದ ನಿರ್ಧಾರ? ಯಾರಿಗೆ ಆಗಲಿದೆ ನಷ್ಟ?

Comments are closed.