IND vs AUS ICC World Cup 2023: ಭಾರತ-ಆಸ್ಟ್ರೇಲಿಯಾ ನಡುವೆ ಐಸಿಸಿ ವಿಶ್ವಕಪ್ ರೋಚಕ ಮ್ಯಾಚ್ ವೀಕ್ಷಿಸಲು ಕಾದು ಕುಳಿತ ಅಭಿಮಾನಿಗಳು; ಇಲ್ಲಿದೆ ಪಂದ್ಯದ ಸಂಪೂರ್ಣ ಡಿಟೇಲ್ಸ್!  

IND vs AUS ICC World Cup 2023: ಅಕ್ಟೋಬರ್ 5 ರಿಂದ ಈ ಬಾರಿ ವಿಶ್ವಕಪ್ ಪಂದ್ಯಾವಳಿ ಆರಂಭಗೊಂಡಿದೆ. ಈ ಬಾರಿಯ ವಿಶೇಷತೆ ಏನೆಂದರೆ ಭಾರತವೇ ಆತಿಥ್ಯ ವಹಿಸಿರುವುದು. ಹಾಗಾಗಿ ಭಾರತದಲ್ಲಿಯೇ ಪಂದ್ಯಗಳು ನಡೆಯಲಿವೆ. ಇವತ್ತು ಅಂದರೆ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಡುವೆ ಈ ವಿಶ್ವಕಪ್ನ ಮೊದಲ ಪಂದ್ಯ ನಡೆಯಲಿದೆ. ಎರಡು ಬಲಿಷ್ಟ ತಂಡಗಳು ಆಟ ಆಡುತ್ತಿರುವುದರಿಂದ ಹೈವೋಲ್ಟೇಜ್ ಪಂದ್ಯ ಆಗುವುದಂತೂ ಖಚಿತ. ಹಾಗಾದರೆ ಪಿಚ್ ಯಾವ ರೀತಿ ಇದೆ, ಹವಾಮಾನ ವರದಿ ಏನನ್ನುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಭಾನುವಾರ ತಮಿಳುನಾಡಿನ ಎ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಹಾಗೂ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. 5೦ ಓವರ್ಗಳ ಪಂದ್ಯ ಇದಾಗಿದೆ.

ಪಿಚ್ ಹೇಗಿದೆ;

ಚೆನ್ನೈ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುತ್ತದೆ. ಆರಂಭದಲ್ಲಿ ಆಟ ಆಡುವ ಆಟಗಾರರಿಗೆ ರನ್ ಗಳಿಸಲು ಹೆಚ್ಚು ನೆರವಾಗಬಹುದು. ನಂತರ ಬರುವ ಆಟಗಾರರಿಗೆ ರನ್ ಗಳಿಕೆ ಸ್ವಲ್ಪ ಪ್ರಮಾಣದಲ್ಲಿ ಕಷ್ಟವಾಗಲಿದೆ. ಆದರೆ ಎರಡನೆ ದಿನದ ಇನ್ನಿಂಗ್ಸ್ನಲ್ಲಿ ಇಬ್ಬನಿಯಿಂದ ಕೂಡಿರಲಿದೆ. ಇದರಿಂದ ಬ್ಯಾಟಿಂಗ್ ಮಾಡುವವರಿಗೆ ಸವಾಲಾಗಿ ಪರಿಣಮಿಸಲಿದೆ. ಓವರ್ಗಳು ಕಳೆದಂತೆ ಪಿಚ್ ಒಂದು ಹದಕ್ಕೆ ಬರಲಿದ್ದು, ಆರಾಮಾಗಿ ಬ್ಯಾಟಿಂಗ್ ಮಾಡಬಹುದು ಎನ್ನಲಾಗಿದೆ.

ಭಾರತೀಯ ತಂಡದ ಆಟಗಾರರು:

ರೋಹಿತ್ ಶರ್ಮಾ( ನಾಯಕ) ಶುಬಮನ್ ಗಿಲ್, / ಇಶಾಂತ್ ಕಿಶನ್, ವಿರಾಟ್ ಕೋಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೇಟ್ ಕಿಪರ್), ಹಾರ್ಧಿಕ್  ಪಾಂಡ್ಯಾ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಕುಲ್ದಿಪ್ ಯಾದವ್, ಜಸ್ಪ್ರಿತ್ ಭೂಮ್ರಾ, ಮೊಹಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ ಆಟಗಾರರು:

ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಮಿವ್ ಸ್ಮಿತ್, ಮಾರ್ನಸ್ ಲ್ಯಾಜುಸ್ಟಾಗ್ನೆ, ಗ್ಲೇನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್, ಅಲೇಕ್ಸ್ ಕ್ಯಾರಿ (ವಿಕೇಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾಕ್, ಜೋಶ್ ಹ್ಯಾಡಲ್ವುಡ್, ಆಡಂ ಝಂಪಾ ಆಟ ಆಡಲಿದ್ದಾರೆ.

Comments are closed.