Swavalambi Sarathi Scheme Karnataka: ರಾಜ್ಯದ ಎಲ್ಲಾ ನಿರುದ್ಯೋಗಿ ಯುವಕರೂ ಸುಲಭವಾಗಿ ಸ್ವಂತ ವಾಹನ ಖರೀದಿಸಬಹುದು; ಸರ್ಕಾರ ನೀಡುತ್ತೆ ವಾಹನದ ಅರ್ಧ ಹಣ; ಇಂದೇ ಅಪ್ಲೈ ಮಾಡಿ!

Swavalambi Sarathi Scheme Karnataka: ಎಷ್ಟೋ ಜನರು ಓದನ್ನು ಅರ್ಧಕ್ಕೆ ಬಿಟ್ಟಿರುತ್ತಾರೆ. ಅಥವಾ ಕೌಟುಂಬಿಕ ಸಮಸ್ಯೆಯಿಂದ ಓದಲು ಸಾಧ್ಯವಾಗಿರುವುದಿಲ್ಲ. ಇನ್ನೊಂದಿಷ್ಟು ಜನರು ಚಾಲಕರಾಗಿ ಯಾವುದೋ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತ ಇರುತ್ತಾರೆ. ಅಂತಹವರು ತಾವೇ ಸ್ವಂತ ವಾಹನ ಖರೀದಿ ಮಾಡಿ ಚಾಲಕರಾಗಿ ದುಡಿಯಬಹುದು. ಸ್ವಂತ ಉದ್ಯೋಗ ಮಾಡಬಹುದು.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಈ ವರ್ಷದ ಬಜೆಟ್ನಲ್ಲಿ ಸ್ವಂತ ವಾಹನ ಖರೀದಿಗೆ ಅದು ದುಡಿಮೆಗಾಗಿ ಖರೀದಿ ಮಾಡುವವರಿಗಾಗಿ ಸಹಾಯಧನ ನೀಡಲು ಮುಂದಾಗಿದೆ. ಅದಕ್ಕಾಗಿಯೇ ಸ್ವಾವಲಂಭಿ ಸಾರಥಿ ಯೋಜನೆ ಆರಂಭಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಹಲವು ಸಮಾಜದವರು ಅರ್ಜಿ ಸಲ್ಲಿಸಿ ಫಲಾನುಭವಿ ಆಗಬಹುದು. ತಮ್ಮ ಜೀವನ ಕಟ್ಟಿಕೊಳ್ಳಬಹುದು.

ಈ ಯೋಜನೆ ಅಡಿಯಲ್ಲಿ ಶೇ.5೦ ರಷ್ಟು ಅಂದರೆ 3 ಲಕ್ಷ ರೂ. ವರೆಗೆ ಸಹಾಯಧನ ಸಿಗಲಿದೆ. ಇನ್ನುಳಿದ ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ಯೋಜನೆಯನ್ನು ವಿವಿಧ ನಿಗಮಗಳ ಮೂಲಕ ಜಾರಿಗೆ ತರಲಾಗುತ್ತಿದೆ.

ಸದ್ಯದ ಮಟ್ಟಿಗೆ ಈ ಯೋಜನೆಯನ್ನು ರಾಜ್ಯದಲ್ಲಿ ಒಕ್ಕಲಿಗ ಸಮುದಾಯ, ಮರಾಠ ಸಮುದಾಯ, ವೀರಶೈವ ಲಿಂಗಾಯತ ಸಮುದಾಯ ಮತ್ತು ವಿಶ್ವಕರ್ಮ ಸಮುದಾಯದವರಿಗಾಗಿ ಜಾರಿಗೆ ತರಲಾಗಿದೆ. ಈ ಎಲ್ಲ ಸಮುದಾಯದ ನಿಗಮಗಳ ಮೂಲ ಸಾಲಸೌಲಭ್ಯ ನೀಡಲಾಗುತ್ತದೆ. ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮಗಳ ವ್ಯಾಪ್ತಿಗೆ ಬರುವ ಎಲ್ಲ ಸಮುದಾಯದವರು ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ ಮರಾಠ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಸಂಬಂಧಪಡುವ ಸಮುದಾಯದವರು ಅರ್ಜಿ ಸಲ್ಲಿಬಹುದು.

ಅರ್ಹತೆಗಳು:

ಈ ಮೇಲೆ ತಿಳಿಸಿದ ಸಮುದಾಯದವರು ಮಾತ್ರ ಸ್ವಾವಲಂಬಿ ಸಾರಥಿ ಯೋಜನೆ ಲಾಭ ಪಡೆಯಲು ಅರ್ಹರಾಗಿರುತ್ತಾರೆ. 18-45 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಬೇಕು. ಫಲಾನುಭವಿಯು ಚಾಲನಾ ಪ್ರಮಾಣ ಪತ್ರ ಹೊಂದಿರಬೇಕು. ಫಲಾನುಭವಿಯ ಕುಟುಂಭದ ಉತ್ಪನ್ನವು 4.5  ಲಕ್ಷ ರೂ. ಮೀರಿರಬಾರದು. ಫಲಾನುಭವಿಯ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.

ದಾಖಲೆಗಳು:

ಈ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಪ್ರಾಧಿಕಾರದಿಂದ ನೀಡಲಾಗುವ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರಬೇಕು) ಚಾಲನ ಪರವಾನಿಗೆ, ಬ್ಯಾಂಕ್ ಪಾಸ್ಬುಕ್, ವಾಹನ ಖರೀದಿಯ ಕೊಟೇಶನ್ಗಳು ಅಗತ್ಯವಾಗಿದೆ.

ನಾವು ಈ ಮೇಲೆ ತಿಳಿಸಿದ ಎಲ್ಲ ಅರ್ಹತೆಗಳು ಇದ್ದಲ್ಲಿ ನೀವು ಸೇವಾ ಸಿಂಧು ವೆಬ್ಸೈಟ್ಗೆ ಹೋಗಿ ಅಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಭರ್ತಿ ಮಾಡಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 3೦ ಕೊನೆಯದಿನವಾಗಿದೆ.

Comments are closed.