Business Idea: ನಿಮ್ಮ ಬಳಿ ಅಪ್ಪ ಪಾಕೆಟ್ ಮನೆ ಅಂತ ಕೊಟ್ಟ 1೦ ಸಾವಿರ ರೂ. ಇದ್ಯಾ? ಹಾಗಾದ್ರೆ ಉದ್ಯಮ ಆರಂಭಿಸಿ ಲಕ್ಷಾಂತರ ರೂ. ಲಾಭ ಗಳಿಸಿ!

Business Idea: ಈಗೇನಿದ್ದರೂ ಸ್ಟಾರ್ಟ್ ಅಪ್ ಯುಗ. ಹಾಗಾಗಿ ಯಾರೂ ಕೂಡ ಮನೆಯಲ್ಲಿ ಕೂರುವುದಿಲ್ಲ. ಒಂದಿಲ್ಲೊಂದು ಉದ್ಯೋಗ ಮಾಡುತ್ತಲೇ ಇರುತ್ತಾರೆ. ಹೊಸ ಉತ್ಪನ್ನ ಅಥವಾ ಸೇವೆಯ ಅನ್ವೇಷಣೆ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಶ್ರಮಿಸುತ್ತಿರುವರ ಸಹಾಯಕ್ಕೆ ಇದೀಗ ಕೇಂದ್ರ ಸರ್ಕಾರವವು ಮುಂದಾಗಿದೆ. ಸ್ಟಾರ್ಟ್ ಅಪ್ಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರಾಗಿರಲಿ, ಮಧ್ಯಮ ವರ್ಗದವರಾಗಿರಲಿ ಯಾರಿಗೆ ಆದರೂ ಉತ್ತಮ ಐಡಿಯಾ ಇದೆ ಎಂದರೆ ಅದನ್ನು ಬಳಸಿಕೊಂಡು ಉದ್ಯಮ ಶುರು ಮಾಡಬಹುದು. ಇದಕ್ಕೆ ಕೇಂದ್ರ ಸರ್ಕಾರವು ಆರ್ಥಿಕವಾಗಿ ಬೆಂಬಲ ನೀಡುತ್ತದೆ. ಇದೀಗ ನಾವು 1೦,೦೦೦ರೂ. ಒಳಗಡೆ ಬಂಡವಾಳ ತೊಡಗಿಸಿ ಲಾಭ ಗಳಿಸುವಂತಹ ಉದ್ಯಮಗಳ ಕುರಿತು ತಿಳಿದುಕೊಳ್ಳೊಣ. ಇದನ್ನೂ ಓದಿ: Labour Card: ರದ್ದಾಗಲಿದೆ ಈ ಕಾರ್ಡ್; ಸರ್ಕಾರದ ಬಹುದೊಡ್ದ ನಿರ್ಧಾರ? ಯಾರಿಗೆ ಆಗಲಿದೆ ನಷ್ಟ?

ಬ್ಲಾಗಿಂಗ್: (Blogging)

ಯಾವುದೇ ಒಂದು ವಿಚಾರದ ಕುರಿತು ಬ್ಲಾಗ್ ಆರಂಭಿಸಿ ಅದರಲ್ಲಿ ಬರಹಗಳನ್ನು ಅಥವಾ ಫೋಟೋಗಳನ್ನು ಅಪ್ಲೋಡ್ ಮಾಡುವುದಕ್ಕೆ ಬ್ಲಾಗಿಂಗ್ ಎನ್ನುತ್ತಾರೆ. ಡಿಜಿಟಲ್ ಯುಗದಲ್ಲಿ ಬ್ಲಾಗಿಂಗ್ಗೆ ಸಾಕಷ್ಟು ಬೇಡಿಕೆ ಇದೆ. ದೊಡ್ಡ ದೊಡ್ಡ ಕಂಪನಿಗಳು ಸಹ ಬ್ಲಾಗರ್ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ನಿಮ್ಮ ಬರವಣಿಗೆ ಆಕರ್ಷಣೀಯವಾಗಿರಬೇಕು..ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕು ಎನಿಸಬೇಕು ಅಷ್ಟೆ. ಜನರು ನೀಡುವ ಲೈಕ್ಸ್ ಹಾಗೂ ಫಾಲೋವರ್ಸ್ಗಳು ಹೆಚ್ಚಾದಂತೆ ನಿಮ್ಮ ಸಂಪಾದನೆಯೂ ಹೆಚ್ಚುತ್ತದೆ. ಇದನ್ನು ಶುರು ಮಾಡಲು ನಿಮಗೆ ದೊಡ್ಡ ಪ್ರಮಾಣದ ಬಂಡವಾಳ ಬೇಕಾಗಿಲ್ಲ.

ಉಪ್ಪಿನ ಕಾಯಿ ಉದ್ಯಮ: (Picke business)

ಉಪ್ಪಿನ ಕಾಯಿಯನ್ನು ಸರ್ವೇ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಮನೆಯಲ್ಲಿ, ಹೊಟೇಲ್ಗಳಲ್ಲಿ ಬಳಸಿಯೇ ಬಳಸುತ್ತಾರೆ. ಎಷ್ಟೋ ಜನರಿಗೆ ಊಟದ ವೇಳೆ ಉಪ್ಪಿನಕಾಯಿ ಇಲ್ಲವೆಂದರೆ ಊಟ ಸೇರುವುದೇ ಇಲ್ಲ. ಇದನ್ನೂ ಓದಿ: Hotel Business: ಹೊಟೆಲ್ ಆರಂಭಿಸುವುದು ಇನ್ನೂ ಸುಲಭ; ಸರ್ಕಾರದಿಂದ ಸಿಗುತ್ತೆ ಸಹಾಯಧನ; ಕೂಡಲೇ ಅರ್ಜಿ ಸಲ್ಲಿಸಿ!

ಇದಕ್ಕೆ ಒಂದಷ್ಟು ಕಚ್ಚಾ ವಸ್ತುಗಳು, ರುಚಿಯಾಗಿ ಉಪ್ಪಿನಕಾಯಿ ಮಾಡುವ ವಿಧಾನ, ಪ್ಯಾಕೇಜಿಂಗ್ ಹಾಗೂ ಒಂದಷ್ಟು ಮಾರಾಟದ ಕೌಶಲಗಳು ತಿಳಿದಿದ್ದರೆ ಸಾಕು. ಎಲ್ಲಕ್ಕಿಂತ ಮುಖ್ಯವಾಗಿ ರುಚಿ ಚೆನ್ನಾಗಿರಬೇಕು. ಹೀಗಿದ್ದರೆ ನೀವು ಹತ್ತು ಸಾವಿರ ರೂ. ಒಳಗಡೆ ನೀವು ಈ ಉದ್ಯಮ ಆರಂಭಿಸಬಹುದು. ಆರಂಭದಲ್ಲಿ ಸ್ವಲ್ಪ ಸಮಸ್ಯೆ ಎನಿಸಿದರೂ ನೀವು ಛಲ ಬಿಡದೆ ಮುಂದುರಿದಲ್ಲಿ ಲಾಭ ನೀಡುವ ಉದ್ಯಮವಾಗಿದೆ.

ಕ್ಯಾಟರಿಂಗ್ ಸೇವೆ:

ಎಷ್ಟೋ ಜನರು ಓದನ್ನು ಅರ್ಧಕ್ಕೆ ಬಿಟ್ಟಿರುತ್ತಾರೆ. ಆದರೆ ಅವರಿಗೆ ಅಡುಗೆಯಲ್ಲಿ ಆಸಕ್ತಿ ಇರುತ್ತದೆ. ಅಡುಗೆಯನ್ನು ಬಹಳ ಶಿಸ್ತುಬದ್ಧವಾಗಿ, ರುಚಿಕಟ್ಟಾಗಿ ಮಾಡುತ್ತಾರೆ. ಇಂತಹವರು ಕ್ಯಾಟರಿಂಗ್ ಸೇವೆ ಆರಂಭಿಸಬಹುದು. ಇದಕ್ಕೂ ದೊಡ್ಡ ಪ್ರಮಾಣದ ಬಂಡವಾಳ ಬೇಕಾಗುವುದಿಲ್ಲ.

ಈಗ ಎಷ್ಟೋ ಜನರು ಕಚೇರಿಗೆ ಊಟ ತೆಗೆದುಕೊಂಡು ಹೋಗಿರುವುದಿಲ್ಲ. ಆದರೆ ಮನೆ ಊಟ ಇದ್ದರೆ ಚೆನ್ನಾಗಿತ್ತು ಅಂದುಕೊಳ್ಳುತ್ತಾರೆ. ಅಂತಹವರನ್ನು ನೀವು ಭೇಟಿಯಾಗಿ ಊಟವನ್ನು ಕಚೇರಿಗೆ ತಲುಪಿಸುತ್ತೇನೆ ಎಂದರೆ ಬೇಡ ಎನ್ನುವುದಿಲ್ಲ. ಅಲ್ಲದೆ ಎಷ್ಟೋ ಮನೆಗಳಲ್ಲಿ ಎಲ್ಲರೂ ದುಡಿಯುವುದರಿಂದ ಅವರಿಗೆ ಅಡುಗೆ ಮಾಡಲು ಸಮಯ ಇರುವುದಿಲ್ಲ. ಇದನ್ನು ಸಹ ಬಳಸಿಕೊಂಡು ನೀವು ಅಡುಗೆ ಮಾಡಿ ಹಣ ಗಳಿಸಬಹುದು.

ಆನ್ಲೈನ್ ಫಿಟ್ನೆಸ್ ತರಬೇತಿ: (Fitness Class)

ಕರೋನಾ ನಂತರ ಜನರು ತಮ್ಮ ಫಿಟ್ನೆಸ್ಗೆ ತುಂಬಾನೇ ಮಹತ್ವ ನೀಡುತ್ತಿದ್ದಾರೆ. ಅದರಲ್ಲಿಯೂ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ನಿಮಗೆ ಯೋಗವನ್ನು ಅಧ್ಯಯನ ಮಾಡಿದ್ದಲ್ಲಿ ಆನ್ಲೈನ್ನಲ್ಲಿಯೇ ಯೋಗ ತರಬೇತಿ ನೀಡಬಹುದು. ನೀವು ಮನೆಯಲ್ಲಿಯೇ ಇದ್ದುಕೊಂಡು ಯೋಗವನ್ನು ಬೋಧನೆ  ಮಾಡಬಹುದು.

Comments are closed.