BSNL Recharge Plan: 100ರೂ. ಒಳಗಿನ ರಿಚಾರ್ಜ್ ಪ್ಲಾನ್, ಉಚಿತ ಡಾಟಾ, ಅನ್ಯಮಿತ ಕರೆರ್ ಮತ್ತಿತರ ಸೌಲಭ್ಯ; ಜಿಯೋ, ಎರ್ಟೆಲ್ ಗೆ ಸಡ್ದು ಹೊಡೆದ BSNL!  

BSNL Recharge Plan: ಈಗ ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಕಾಂಪಿಟಿಶನ್ ಸಾಮಾನ್ಯ. ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ಸ್ಪರ್ಧೆ ಎದುರಿಸಲೇಬೇಕು. ದೂರಸಂಪರ್ಕ ಕ್ಷೇತ್ರಕ್ಕೂ ಇದು ಹೊರತಾಗಿಲ್ಲ. ಜಿಯೋ (Jio), ಏರ್ಟೆಲ್ (Airtel) ಸೇರಿದಂತೆ ಹಲವು ಕಂಪನಿಗಳು ದೂರ ಸಂಪರ್ಕ ಕ್ಷೇತ್ರದಲ್ಲಿ ಇವೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಕೂಡ ದೂರ ಸಂಪರ್ಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಕಂಪನಿಗಳ ಕಾಂಪಿಟಿಶನ್ನಲ್ಲಿ ಬಿಎಸ್ಎನ್ಎಲ್ಗೆ ಹೊಡೆತ ಬಿದ್ದಿತ್ತು. ಆದರೆ ಇದೀಗ ಬಿಎಸ್ಎನ್ಎಲ್ ಕೂಡ ಪ್ರಭಲ ಸ್ಪರ್ಧೆ ಒಡ್ಡಲು ನಿರ್ಧರಿಸಿದಂತಿದೆ. ಇದನ್ನೂ ಓದಿ: Business Idea: ನಿಮ್ಮ ಬಳಿ ಅಪ್ಪ ಪಾಕೆಟ್ ಮನೆ ಅಂತ ಕೊಟ್ಟ 1೦ ಸಾವಿರ ರೂ. ಇದ್ಯಾ? ಹಾಗಾದ್ರೆ ಉದ್ಯಮ ಆರಂಭಿಸಿ ಲಕ್ಷಾಂತರ ರೂ. ಲಾಭ ಗಳಿಸಿ!

ಹೌದು, ಬಿಎಸ್ಎನ್ಎಲ್ ಎಲ್ಲ ಹಳ್ಳಿಗಳಲ್ಲೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ಆದರೆ ಬಿಎಸ್ಎನ್ಎಲ್ ತಂತ್ರಜ್ಞಾನದಲ್ಲಿ ಸ್ವಲ್ಪ ಹಿಂದಿರುವುದರಿಂದ ಅಂದರೆ ಬಿಎಸ್ಎನ್ಎಲ್ನ ನೆಟ್ ಇನ್ನು 3ಜಿಯಲ್ಲಿದ್ದು, ಕೆಲವು ಕಡೆ ಮಾತ್ರ 4ಜಿ ಬರುತ್ತದೆ. ಅಲ್ಲದೆ ನೆಟ್ ಸ್ಲೋ ಆಗುವುದು, ವಿದ್ಯುತ್ ಕೈ ಕೊಟ್ಟರೆ ನೆಟ್ ನಿಂತು ಹೋಗುವುದು ಇವೇ ಮುಂತಾದ ಸಮಸ್ಯೆಗಳು ಇದ್ದವು. ಆದರೆ ಬಿಎಸ್ಎನ್ಎಲ್ ಅಧಿಕಾರಿಗಳು ಬಹುತೇಕ ಸಮಸ್ಯೆಗಳಿಗೆ ಮುಕ್ತಿ ನೀಡಿದ್ದಾರೆ. ಆದ್ದರಿಂದ ಬಿಎಸ್ಎನ್ಎಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಬಿಎಸ್ಎನ್ ಹೊಸ ಆಫರ್ ಘೋಷಣೆ ಮಾಡಿದ್ದು, ಅದು ಅತ್ಯಂತ ಕಡಿಮೆ ಬೆಲೆಗೆ.

87 ರೂ.ಪ್ಲಾನ್:

ಬಿಎಸ್ಎನ್ಎಲ್ ನ ಅತಿ ಕಡಿಮೆ ದರದ ರಿಚಾರ್ಜ್ ಪ್ಲಾನ್ ಇದಾಗಿದೆ. ಇದನ್ನು ಪಡೆಯುವುದರಿಂದ ನೀವು ಅನಿಯಮಿತ ಕರೆ ಮಾಡಬಹುದಾಗಿದೆ. ಅಲ್ಲದೆ ಈ ಯೋಜನೆ ಅಡಿಯಲ್ಲಿ ೧ಜಿಬಿ ಇಂಟರ್ನೆಟ್ ಸೌಲಭ್ಯ ಸಹ ಸಿಗಲಿದೆ. ಯಾವುದಾದರೂ ಅರ್ಜೆಂಟ್ ಇರುವ ವೇಳೆ ನಿಮ್ಮ ಮೊಬೈಲ್ನಲ್ಲಿ ನೆಟ್ ಇರದಿದ್ದರೆ ಕೂಡಲೇ ೮೭ ರೂ. ರಿಚಾರ್ಜ್ ಮಾಡುವ ಮೂಲಕ ನಿಮ್ಮ ಆನ್ಲೈನ್ ಕಚೇರಿ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: Swavalambi Sarathi Scheme Karnataka: ರಾಜ್ಯದ ಎಲ್ಲಾ ನಿರುದ್ಯೋಗಿ ಯುವಕರೂ ಸುಲಭವಾಗಿ ಸ್ವಂತ ವಾಹನ ಖರೀದಿಸಬಹುದು; ಸರ್ಕಾರ ನೀಡುತ್ತೆ ವಾಹನದ ಅರ್ಧ ಹಣ; ಇಂದೇ ಅಪ್ಲೈ ಮಾಡಿ!

99 ರೂ. ಪ್ಲಾನ್:

ಇದು ಕೂಡ ಉಳಿದ ಖಾಸಗಿ ಕಂಪನಿಗಳ ರಿಚಾರ್ಜ್ಗೆ ಹೋಲಿಸಿದ್ದಲ್ಲಿ ಇದು ಅತ್ಯಂತ ಕಡಿಮೆ ದರದ ಪ್ಲಾನ್ ಆಗಿದೆ. ಇದು 18 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಈ ಪ್ಲಾನ್ ನ್ನು ಎಸ್ಟಿವಿ-99  ಪ್ಲಾನ್ ಎಂದು ಹೆಸರಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ನೀವು ಮೂರು ಜಿಬಿ ಡಾಟಾ ನಿಮಗೆ ಸಿಗಲಿದೆ. ಅನಿಯಮಿತ ಕರೆ ಹಾಗೂ ಎಸ್ಎಂಎಸ್ ಸೌಲಭ್ಯವನ್ನು ಹೊಂದಿದೆ. ತುರ್ತಾಗಿ ಡಾಟಾ ಅವಶ್ಯಕತೆ ಇದ್ದವರು ಈ ಪ್ಲಾನ್ ಹಾಕಿಸಿಕೊಳ್ಳಬಹುದು.

Comments are closed.