Government subsidy: ಕೊಳವೆಬಾವಿಗೆ ಸರ್ಕಾರದ ಸಬ್ಸಿಡಿ; ಒಂದು ಅರ್ಜಿ ಸಲ್ಲಿಸಿ ಪಡೆಯಿರಿ 4.75 ಲಕ್ಷ; ಕೆಲವೇ ದಿನಗಳ ಅವಕಾಶ!

Government subsidy: ರೈತರು ನಮ್ಮ ದೇಶದ ಬೆನ್ನೆಲುಬು. ರೈತರ ಅಭಿವೃದ್ಧಿಗಾಗಿ ಸರ್ಕಾರಗಳು ಹಲವು ರೀತಿಯಲ್ಲಿ ಸಹಾಯ ಮಾಡುತ್ತಿವೆ. ರೈತರು ಬೆಳೆ ಬೆಳೆಯಲು ಮುಖ್ಯವಾಗಿ ನೀರು ಬೇಕಾಗುತ್ತದೆ. ರೈತರ ನೀರಾವರಿಗಾಗಿ ಹಲವು ಯೋಜನೆಗಳು ಜಾರಿಯಲ್ಲಿದೆ. ಅದರಲ್ಲಿ ಕೊಳವೆ ಬಾವಿ ತೋಡಲು ಸಿಗುವ ಸಹಾಯಧನವು ಒಂದಾಗಿದೆ. ಕರ್ನಾಟಕ ಸರ್ಕಾರವು ರೈತರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ಬಂದಿದೆ. ಈ ಪ್ರಮುಖ ಉಪಕ್ರಮದಲ್ಲಿ ಕೊಳವೆ ಬಾವಿ ತೋಡಿಸುವ ಗಂಗಾ ಕಲ್ಯಾಣ ಯೋಜನೆಯೂ ಒಂದಾಗಿದೆ. ಇದನ್ನೂ ಓದಿ: Swavalambi Sarathi Scheme Karnataka: ರಾಜ್ಯದ ಎಲ್ಲಾ ನಿರುದ್ಯೋಗಿ ಯುವಕರೂ ಸುಲಭವಾಗಿ ಸ್ವಂತ ವಾಹನ ಖರೀದಿಸಬಹುದು; ಸರ್ಕಾರ ನೀಡುತ್ತೆ ವಾಹನದ ಅರ್ಧ ಹಣ; ಇಂದೇ ಅಪ್ಲೈ ಮಾಡಿ!

ಯಾರ್ಯಾರು ಅರ್ಜಿ ಸಲ್ಲಿಸಬಹುದು?

ವಿವಿಧ ಸಮುದಾಯದ ಜನರು ಈ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇವುಗಳಲ್ಲಿ ಹಿಂದುಳಿದ ವರ್ಗಗಳ 1, 2ಎ, 2ಬಿ, 3ಎ, 3ಬಿ, ವೀರಶೈವ ಲಿಂಗಾಯಿತ ಜಾತಿ, ಉಪ ಜಾತಿಗಳು, ಒಕ್ಕಲಿಗ, ಸರ್ಪ ಒಕ್ಕಲಿಗ, ಇತರ ಸಮುದಾಯಗಳು ಸೇರಿವೆ. ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ 41 ವರ್ಗಗಳ ಜನರು ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು:

ಅರ್ಜಿದಾರರು ಈ ಮೇಲೆ ಸೇರಿದ ಜಾತಿ ಅಥವಾ ಸಮುದಾಯಕ್ಕೆ ಸೇರಿದವರಾಗಿರಬೇಕು. ಇದಕ್ಕೆ ಸಂಬಂಧಪಟ್ಟಂತೆ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.ಅವರ ಒಡೆತನದ ಭೂಮಿ ಮಳೆಯಾಶ್ರಿತವಾಗಿರಬೇಕು. ನೀರಾವರಿ ಸೌಲಭ್ಯದ ಕೊರತೆ ಇರಬೇಕು. ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಭಾಗದಲ್ಲಿ 98,೦೦೦ ರೂ. ನಗರ ಭಾಗದಲ್ಲಿ 1.2೦ ಲಕ್ಷ ರೂ. ಮೀರಿರಬಾರದು. ಅರ್ಜಿದಾರರು ಫ್ರುಟ್ ಐಡಿ, ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು.

ಸಬ್ಸಿಡಿ ವಿವರ:

ಸಬ್ಸಿಡಿ ಮೊತ್ತವು ಪ್ರದೇಶ ಹಾಗೂ ಜಮೀನಿಗೆ ತಕ್ಕಂತೆ ಬದಲಾಗುತ್ತದೆ. ಕೆಲವು ಜಿಲ್ಲೆಯಲ್ಲಿ ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ 4.25 ಲಕ್ಷ ರೂ. ಸಹಾಯಧನ ನೀಡಿದರೆ ಇನ್ನು ಕೆಲವು ಜಿಲ್ಲೆಗಳಲ್ಲಿ 3.25 ಲಕ್ಷ ರೂ. ನೀಡಲಾಗುತ್ತದೆ.ವೆಚ್ಚವು ಈ ಮೊತ್ತವನ್ನು ಮೀರಿದರೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ 5೦,೦೦೦ ರೂ. ಸಾಲ ನೀಡಲಾಗುತ್ತದೆ. ಇದನ್ನೂ ಓದಿ: Property rules: ಪಿತ್ರಾರ್ಜಿತ ಆಸ್ತಿಯಲ್ಲಿ ವಿಚ್ಛೇದಿತ ಮಗಳಿಗೂ ಇದ್ಯಾ ಸಮಪಾಲು? ಏನನ್ನುತ್ತೆ ಕಾನೂನು?

ಅಗತ್ಯ ದಾಖಲೆಗಳು:

ಅರ್ಜಿದಾರರು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ನಿವಾಸದ ಪುರಾವೆ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ,  ಭೂ ಕಂದಾಯ ದಾಖಲೆಗಳು ಸೇರಿದಂತೆ ಎಲ್ಲ ಅಗತ್ಯ ದಾಖಲೆ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?:

ರೈತರು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಮೊದಲು ಸರ್ಕಾರದ ಸೇವಾ ಸಿಂದು ಪೋರ್ಟ್ಲ್ಗೆ ಭೇಟಿ ನೀಡಬೇಕು. ಅಥವಾ ಸೇವಾ ಕೇಂದ್ರಗಳಾದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Comments are closed.