One Nation One ID: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ್ರು ಸಿಹಿ ಸುದ್ದಿ; ಇನ್ಮುಂದೆ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಒಂದೇ ಐಡಿ ಕಾರ್ಡ್!

One Nation One ID: ಸದ್ಯ ನಮ್ಮ ದೇಶದಲ್ಲಿ ಶಿಕ್ಷಣದ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ. ಆದರೆ ಇದಕ್ಕೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಅವುಗಳಲ್ಲಿ ಕರ್ನಾಟಕವು ಒಂದಾಗಿದೆ. 2023-24ನೇ ಸಾಲಿನಲ್ಲಿ ಶಿಕ್ಷಣ ಪಡೆಯುತ್ತಿರುವವರು ಹೊಸ ಶಿಕ್ಷಣ ನೀತಿಯಡಿ ಅಧ್ಯಯನ ಮಾಡುತ್ತಿದ್ದಾರೆ ಎನ್ನಬಹುದು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಶಿಕ್ಷಣ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಇದೀಗ ಹೊಸ ನಿಯಮ ಜಾರಿ ಮಾಡಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಹೊಸ ಐಡಿ ಕಾರ್ಡ್:

ಪಾಲಕರ ಹಾಗೂ ಪೋಷಕರ ಒಪ್ಪಿಗೆ ಮೇರೆಗೆ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಚೀಟಿ ನೀಡಲು ಕೇಂದ್ರ ಸರ್ಕಾರವು ಮುಂದಾಗಿದೆ.2020 ರ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪೂರ್ವ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಿಶಿಷ್ಟ ಗುರುತಿನ ಚೀಟಿ ನೀಡಲು ನಿರ್ಧರಿಸಿದೆ.ಇದಕ್ಕೆ ಒನ್ ನೇಶನ್ ಒನ್ ಕಾರ್ಡ್ ಎಂದು ಕರೆಯಲಾಗಿದೆ.

ಆಧಾರ್ ಸಂಖ್ಯೆ, ಎಜುಕೇಶನ್ ಇಕೋಸಿಸ್ಟಮ್ ರಿಜಿಸ್ಟ್ರೇಶನ್ ಅಥವಾ ಎಜುಲಾಕರ್ ಅನ್ನು ಜೀವಮಾನದ ಐಡಿ ಎಂದು ಪರಿಗಣಿಸಲಾಗುತ್ತದೆ. ಇದು ವಿದ್ಯಾರ್ಥಿಯ ಶೈಕ್ಷಣಿಕ ಪ್ರಯಾಣ, ಅವರ ಸಾಧನೆಗಳನ್ನು ಟ್ರ್ಯಾಕ್ ಮಾಡಲಿದೆ.ಕೇಂದ್ರ ಶಿಕ್ಷಣ ಸಚಿವಾಲಯವು ಈಗಾಗಲೇ ದೇಶದ ಎಲ್ಲ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳಿಗೆ ಆಧಾರ್ ಐಡಿ ರಚನೆ ಮಾಡಲು ಸೂಚನೆ ನೀಡಿದೆ.

ಆಧಾರ್ ಮತ್ತು ನ್ಯಾಶನಲ್ ಕ್ರೆಡಿಟ್ ಫ್ರೇಮ್ವರ್ಕ್ ದೇಶಾದ್ಯಂತ ಕ್ಲಿಯುವರೆಗೆ ಕ್ಯೂಆರ್ ಕೋಡ್ ಆಗಿರುತ್ತದೆ. ವಿದ್ಯಾರ್ಥಿಗಳು ತೆಗೆದುಕೊಳ್ಳುವ ಪ್ರತಿಯೊಂದು ಕೌಶಲ್ಯವನ್ನು ಇದರಲ್ಲಿ ಸೇರಿಸಲಾಗುತ್ತದೆ ಎಂದು ಎಐಸಿಟಿಇ ಅಧ್ಯಕ್ಷ ಟಿ.ಜಿ. ಸೀತಾರಾಮ್ ಅವರು ತಿಳಿಸಿದ್ದಾರೆ.

ಹಾಗಾಗಿ ಇನ್ಮುಂದೆ ವಿದ್ಯಾರ್ಥಿಗಳು ತಮ್ಮ ಪ್ರಮಾಣಪತ್ರ ಪಡೆಯಲು ಅಡ್ಡಾಡುವುದು ಬೇಕಾಗಿಲ್ಲ. ಅವರ ಐಡಿಯಲ್ಲಿಯೇ ಎಲ್ಲವು ಸೇವ್ ಆಗಿರುತ್ತದೆ. ಐಡಿಯನ್ನು ನೀಡಿದರೆ ವಿದ್ಯಾರ್ಥಿಯು ಎಲ್ಲಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. ಯಾವ ಯಾವ ಕೌಶಲ್ಯದ ತರಬೇತಿ ಪಡೆದಿದ್ದಾನೆ ಎನ್ನುವುದು ತಿಳಿಯಲಿದೆ.

Comments are closed.