Viral Video: ಮೃತ್ಯುವಿನಿಂದ ಜಸ್ಟ್ ಮಿಸ್ ಆದ ರೈತ. ಸಕಲೇಶಪುರದಲ್ಲಿ ಕಾಡಾನೆ ದಾಳಿಯ ವಿಡಿಯೋ ವೈರಲ್.

Viral Video: ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿರುವಂತಹ ಒಂದು ಘಟನೆ ಈಗ ವಿಡಿಯೋ ರೂಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲಕ್ಷ ಲಕ್ಷಗಟ್ಟಲೆ ವೀವ್ಸ್ ಗಳನ್ನು ಪಡೆದುಕೊಳ್ಳುತ್ತದೆ. ಈ ಭಾಗದ ಜನರು ಈಗ ಮನೆಯಿಂದ ಹೊರಬರುವುದಕ್ಕೆ ಕೂಡ ಹೆದರಿಕೊಳ್ಳಬೇಕು ಅನ್ನೋ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಹೇಳಬಹುದು. ಹೌದು ಈ ಭಾಗದಲ್ಲಿ ಕಾಡಾನೆ ದಾಳಿಗಳು ವಿಪರೀತವಾಗಿ ಹೆಚ್ಚಾಗಿದೆ. ಅದಕ್ಕೆ ಉದಾಹರಣೆ ಅನ್ನೋ ರೀತಿಯಲ್ಲಿ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಕತ್ತಲಾಗುತ್ತಿದ್ದಂತೆ ಕಾಡಿನಿಂದ ಹೊರಗೆ ಬರುವಂತಹ ಈ ಕಾಡಾನೆಗಳು ಜನರಿಗೆ ಉಪದ್ರವವನ್ನು ನೀಡುತ್ತಿವೆ. ಕೆಲವೊಮ್ಮೆ ಹಾಡು ಹಗಲಿನಲ್ಲಿಯೇ ಜನರಿಗೆ ತೊಂದರೆ ನೀಡುವಂತಹ ಕೆಲಸಗಳನ್ನು ಕೂಡ ಕಾಡಾನೆಗಳು ಮಾಡುತ್ತಿವೆ. ಸಕಲೇಶಪುರದಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಂತಹ ಇಬ್ಬರ ಕಣ್ಣಿಗೆ ಕಾಡಾನೆ ಬೀಳುತ್ತದೆ.

ಕಾಡಾನೆಯನ್ನು ನೋಡುತ್ತಿದ್ದಂತೆ ಇಬ್ಬರೂ ಕೂಡ ಜೀವವೇ ಬಾಯಿಗೆ ಬಂದಂತೆ ಓಡಿದ್ದಾರೆ. ಅವರನ್ನು ಅಟ್ಟಿಸಿಕೊಂಡು ಕಾಡಾನೆ ಕೂಡ ವೇಗವಾಗಿ ಓಡಿ ಬಂದಿದೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಕಂಡುಬಂದಂತೆ ಸ್ವಲ್ಪದರಲ್ಲಿ ಆತ ಕಾಡಾನೆಯ ಸೊಂಡಲಿ ನಿಂದ ಮಿಸ್ ಆಗಿದ್ದಾನೆ. ಇನ್ನು ಹಿರಿಯರು ಹೇಳಿದಂತೆ ಕಾಡಾನೆ ಅಟ್ಟಿಸಿಕೊಂಡು ಬಂದಾಗ ಅಡ್ಡ ಅಡ್ಡವಾಗಿ ಓಡಬೇಕು ಹಾಗಿದ್ದಲ್ಲಿ ಮಾತ್ರ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಇಲ್ಲಿ ಈ ರೈತ ಕೂಡ ಅದೇ ಮಾರ್ಗವನ್ನು ಅನುಸರಿಸಿದ್ದಾನೆ.

ಆತ ಆ ರೀತಿ ಓಡಿದ್ದರಿಂದಲೇ ಆ ದೈತ್ಯ ಆನೆಯಿಂದ ರೈತ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ಕೇವಲ ಎಷ್ಟು ಮಾತ್ರವಲ್ಲದೆ ಅದೇ ಸಂದರ್ಭದಲ್ಲಿ ಆತ ಮನೆಯ ಒಳಗೆ ಓಡಿ ಹೋಗಿ ಅಲ್ಲಿ ಪಾರ್ಕ್ ಮಾಡಿದ್ದ ಕಾರಿನ ಕೆಳಗೆ ಹೋಗಿ ಅವಿದುಕೊಂಡಿದ್ದ. ಇದರಿಂದಲೇ ಆತ ಆನೆಯಿಂದ ಪ್ರಾಣವನ್ನು ಉಳಿಸಿಕೊಂಡಿದ್ದಾನೆ ಎಂದು ಹೇಳಬಹುದಾಗಿದೆ. ಅವರ ಹಿಂಬದಿಂದಲೇ ಮತ್ತೊಬ್ಬ ವ್ಯಕ್ತಿ ಬಂದು ಓಡಿ ಬಂದ ವ್ಯಕ್ತಿಯಲ್ಲಿ ಹೋದರು ಎಂಬುದಾಗಿ ಹುಡುಕಿ ನಂತರ ಕಾರಿನ ಅಡಿ ಅವರು ಇರುವುದನ್ನು ಗಮನಿಸಿ ಆನೆ ಹೋಯಿತು ಎನ್ನುವುದಾಗಿ ಸಂದೇಶವನ್ನು ನೀಡಿದ ನಂತರವೇ ಕಾರಿನ ಕೆಳಗೆ ಅವಿತಿದ್ದ ರೈತ ಹೊರಗೆ ಬರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಕೇರಳದಲ್ಲಿ ಕೂಡ ಆನೆಗಳ ಹಾವಳಿ ಹೆಚ್ಚಾಗಿದೆ ಎಂಬುದಾಗಿದ್ದು ಇತ್ತೀಚಿಗಷ್ಟೇ ಆನೆಗಳ ದಾಳಿಯಿಂದಾಗಿ ಕೇರಳದಲ್ಲಿ ಇಬ್ಬರು ಮರಣ ಹೊಂದಿದ್ದಾರೆ. ಕಾಡಿನಲ್ಲಿ ಕಡಿಮೆಯಾಗುತ್ತಿರುವಂತಹ ಆಹಾರ ಅಥವಾ ಬೇರೆ ಕೊರತೆಗಳಿಂದಾಗಿಯೇ ಆನೆಗಳು ನಾಡಿಗೆ ಧಾವಿಸುತ್ತಿದ್ದಾವೆ ಎಂಬುದು ಪರಿಣಿತರ ಅಭಿಪ್ರಾಯ. ಆದರೆ ಇದಕ್ಕೂ ಕೂಡ ಮನುಷ್ಯನ ಅತಿಯಾಸೆಯ ಕಾರಣ ಎಂಬುದನ್ನು ನಾವು ಅಲ್ಲಗೆಳೆಯುವ ಹಾಗಿಲ್ಲ. ಸರ್ಕಾರ ಹಾಗೂ ಅರಣ್ಯ ಇಲಾಖೆ ಸರಿಯಾದ ರೀತಿಯಲ್ಲಿ ಇದರ ಬಗ್ಗೆ ಕ್ರಮ ಕೈ ತೆಗೆದುಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಆಗುವುದನ್ನು ನಾವು ತಡೆಯಬಹುದಾಗಿದೆ.

Comments are closed.