K. Shivaram: ಪ್ರಿಯಾಂಕ್ ಖರ್ಗೆ ಶಿವರಾಮ್ ಅವರ ಅಂತಿಮ ದರ್ಶನಕ್ಕೆ ಬಂದಾಗ ಶಿವರಾಂ ಅವರ ಪತ್ನಿ ವಿರೋಧ ಮಾಡಿದ್ಯಾಕೆ ಗೊತ್ತಾ?

K. Shivaram: ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ನಟರಲ್ಲಿ ಒಬ್ಬರಾಗಿರುವಂತಹ ಕೆ ಶಿವರಾಂ ಅವರು ಅನಿರೀಕ್ಷಿತವಾಗಿ ಮರಣ ಹೊಂದಿದ್ದರು. ಕೇವಲ ನಾಯಕನಟ ಮಾತ್ರವಲ್ಲದೆ ಐಎಎಸ್ ಅಧಿಕಾರಿ ಹಾಗೂ ಖ್ಯಾತ ರಾಜಕಾರಣಿ ಕೂಡ ಆಗಿದ್ದ ಕೆ ಶಿವರಾಂ ಅವರು ಮರಣ ಹೊಂದಿರುವುದು ನಿಜಕ್ಕೂ ಕೂಡ ತುಂಬಲಾರದ ನಷ್ಟವನ್ನು ತಂದಿದೆ ಎಂದು ಹೇಳಬಹುದಾಗಿದೆ. ಇನ್ನು ಅವರ ಅಂತಿಮ ದರ್ಶನದ ಸಂದರ್ಭದಲ್ಲಿ ಸಚಿವರಾಗಿರುವಂತಹ ಪ್ರಿಯಾಂಕ್ ಖರ್ಗೆ ಅವರು ಆಗಮಿಸಿದ್ರು ಆ ಸಂದರ್ಭದಲ್ಲಿ ಶಿವರಾಂ ಅವರ ಪತ್ನಿ ಆಗಿರುವಂತಹ ವಾಣಿ ಶಿವರಾಮ ಅವರು ಅವರಿಗೆ ನೋಡೋ ರೈಟ್ಸ್ ಇಲ್ಲ ಅನ್ನೋದಾಗಿ ಹೇಳಿಕೊಂಡಿದ್ದರು ಇದರ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇದರ ಬಗ್ಗೆ ಮಾತನಾಡಿರೋದು ಅವರ ಅಳಿಯ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾಗಿರುವಂತಹ ಪ್ರದೀಪ್ ಬೋಗಾಡಿ. ನಮ್ಮ ಮಾವನವರು ಯಾವತ್ತೂ ಕೂಡ ಯಾರ ಬಗ್ಗೆನೂ ಕೆಟ್ಟದಾಗಿ ದ್ವೇಷ ಕಾರಿದವರಲ್ಲ. ಈಗ ಅವರೇ ಇಲ್ಲದಿದ್ದ ಮೇಲೆ ಇದರ ಬಗ್ಗೆ ಮಾತನಾಡುವುದು ಸರಿಯಾಗುವುದಿಲ್ಲ ಅನ್ನುವುದಾಗಿ ಪ್ರದೀಪ್ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ನಮ್ಮ ಅತ್ತೆ ಮಾತನಾಡಿರುವ ಹಿಂದೆ ಕೂಡ ಒಂದು ಕಾರಣವಿದೆ ಆದರೆ ಅದರ ಬಗ್ಗೆ ಮಾತನಾಡಬೇಕಾದಂತಹ ವ್ಯಕ್ತಿಯೇ ಇಲ್ಲ ಅಂದಮೇಲೆ ಅದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾತುಕತೆ ನಡೆಸೋದು ಸರಿಯಲ್ಲ ಅನ್ನೋದಾಗಿ ಅವರು ಹೇಳಿಕೊಂಡಿದ್ದಾರೆ.

ಅದು ನಾವು ನಮ್ಮ ಮಾವನಿಗೆ ನೀಡುವಂತಹ ಗೌರವೂ ಕೂಡ ಅಲ್ಲ ಹೀಗಾಗಿ ಅದರ ಬಗ್ಗೆ ಮಾತನಾಡುವುದು ಬೇಡ ಎಂಬುದಾಗಿ ಈ ಸಂದರ್ಭದಲ್ಲಿ ಪತ್ರಿಕಾ ಮಿತ್ರರ ಮುಂದೆ ಪ್ರದೀಪ್ ಹೇಳಿಕೊಂಡಿದ್ದಾರೆ. ನಮ್ಮ ಮಾವ ಯಾರ ಬಗ್ಗೆ ಕೂಡ ಹಿಂದಿನಿಂದ ಮಾತನಾಡಿದವರಲ್ಲ ಏನೇ ಇದ್ದರೂ ನೇರವಾಗಿ ಮಾತನಾಡಿದರು ಹಾಗೂ ಪ್ರತಿಯೊಬ್ಬ ಅಧಿಕಾರಿಗಳಿಗೂ ನೇರವಾಗಿ ಕರೆ ಮಾಡಿ ಪ್ರತಿಯೊಂದು ಸಮಸ್ಯೆಗಳನ್ನು ನಿರ್ವಹಿಸುತ್ತಿದ್ದರು ಅನ್ನೋದಾಗಿ ಹೇಳಿಕೊಂಡಿದ್ದಾರೆ.

ಮಾರ್ಚ್ 1ನೇ ತಾರೀಖಿನಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೆ ಶಿವರಾಮ್ ಅವರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಟ್ಟ ಸಂದರ್ಭದಲ್ಲಿ ಸಚಿವರಾಗಿರುವಂತಹ ಪ್ರಿಯಾಂಕ್ ಖರ್ಗೆ ಅವರ ಅಂತಿಮ ದರ್ಶನವನ್ನು ಮಾಡುವುದಕ್ಕೆ ಬಂದಿದ್ದರು ಆ ಸಂದರ್ಭದಲ್ಲಿ ಕೆ ಶಿವರಾಂ ಅವರ ಪತ್ನಿ ಆಗಿರುವಂತಹ ವಾಣಿ ಶಿವರಾಮ ಅವರು ಅವರು ಯಾಕೆ ಇಲ್ಲಿಗೆ ಬಂದರು, ಅವರಿಗೆ ನೋಡೋದಕ್ಕೆ ರೈಟ್ಸ್ ಏನಿದೆ ಅವರನ್ನು ಬೇಗ ಕಳುಹಿಸಿ ಅನ್ನೋದಾಗಿ ಅಸಮಾಧಾನವನ್ನು ಹೊರ ಹಾಕಿದ್ರು. ಈ ದೃಶ್ಯ ಮಾಧ್ಯಮದ ಕ್ಯಾಮೆರಾ ಗಳಲ್ಲಿ ಸೆರೆ ಆಗಿತ್ತು.

ಇದು ದೊಡ್ಡ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು ಮಾತ್ರವಲ್ಲದೆ ಯಾತಕ್ಕಾಗಿ ಈ ರೀತಿ ಅವರು ಮಾತನಾಡಿದರು ಅನ್ನೋದು ನಿಗೂಢವಾಗಿ ಉಳಿದುಕೊಂಡಿತ್ತು. ಕೊನೆದಾಗಿ ಪ್ರದೀಪ್ ರವರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದರು ಕೂಡ ಇದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ಸಿಕ್ಕಿತೆ ವಿನಹ ನಿಜವಾಗಿ ಯಾತಕ್ಕಾಗಿ ಈ ರೀತಿ ನಡೆದಿದೆ ಅನ್ನೋದು ಈಗ ಯಕ್ಷಪ್ರಶ್ನೆಯಾಗಿಯೇ ಉಳಿದುಕೊಂಡಿದೆ ಎಂದು ಹೇಳಬಹುದಾಗಿದೆ.

Comments are closed.