Nayanthara Divorce: ನಯನತಾರಾ ಹಾಗೂ ವಿಘ್ನೇಶ್ ಸಂಸ್ಕಾರದಲ್ಲಿ ಬಿರುಕು; ವಿಚ್ಚೇದನದ ವರೆಗೂ ಹೋಗಿದ್ಯಾಕ್ಕೆ ಲವ್ ಬರ್ಡ್ಸ್?

Nayanthara Divorce: ವರ್ಷದ ಹಿಂದೆ ಹೋದರೆ ನಿಮಗೆಲ್ಲರಿಗೂ ತಿಳಿದಿದೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಮದುವೆ ಅಂದರೆ ಅದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆ. ಇಬ್ಬರ ಮದುವೆ ಕೂಡ ತಮಿಳುನಾಡಿನಲ್ಲಿ ನಡೆದಿದ್ದು ದಕ್ಷಿಣ ಹಾಗೂ ಬಾಲಿವುಡ್ ಚಿತ್ರರಂಗದಿಂದ ಸಾಕಷ್ಟು ಲೆಜೆಂಡರಿ ಕಲಾವಿದರು ಕೂಡ ಈ ಮದುವೆಗೆ ಆಗಮಿಸಿದ್ದರು. ಆದರೆ ಈಗ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವಂತಹ ಸುದ್ದಿ ಕೇಳಿ ಬರುತ್ತಿದ್ದು ದಕ್ಷಿಣ ಭಾರತದ ಚಿತ್ರ ರಂಗದಲ್ಲಿ ಇದು ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಇನ್ನು ಈ ಗಾಳಿ ಸುದ್ದಿ ಅಥವಾ ನಿಜವಾದ ಸುದ್ದಿ ಪ್ರಾರಂಭ ಆಗುವುದಕ್ಕೆ ಕಾರಣ ಕೂಡ ಇದೆ ಸ್ನೇಹಿತರೆ. ಸೋಶಿಯಲ್ ಮೀಡಿಯಾದಲ್ಲಿ ನಯನತಾರಾ ಅವರು ವಿಘ್ನೇಶ್ ಶಿವನ್ ರವರನ್ನ ಅನ್ ಫಾಲೋ ಮಾಡಿರೋದೇ ಈ ಸುದ್ದಿ ಪ್ರಾರಂಭ ಆಗುವುದಕ್ಕೆ ಕಾರಣ ಆಗಿರೋದು. ಈ ಸುದ್ದಿಯನ್ನು ಕೇಳುತ್ತಿದ್ದಂತೆ ಅಭಿಮಾನಿಗಳಲ್ಲಿ ಕೂಡ ಆತಂಕ ಪ್ರಾರಂಭವಾಗಿದ್ದು ಇವರಿಬ್ರು ಯಾಕಾಗಿ ಬೇರೆ ಬೇರೆ ಆಗ್ತಿದ್ದಾರೆ ಅನ್ನೋದಾಗಿ ಚರ್ಚೆ ಹಾಗೂ ಪರ ವಿರೋಧ ಅಭಿಪ್ರಾಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೊರಬರುವುದಕ್ಕೆ ಪ್ರಾರಂಭವಾಗಿದೆ.

ಅಭಿಮಾನಿಗಳು ಕೂಡ ಇವರಿಬ್ಬರೂ ಯಾಕೆ ಈ ರೀತಿ ಮಾಡ್ಕೋತಿರ್ಬೋದು ಅನ್ನೋದಾಗಿ ಚರ್ಚೆ ಮಾಡೋದಕ್ಕೆ ಕೂಡ ಪ್ರಾರಂಭ ಮಾಡಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿಗಷ್ಟೇ ಗಂಡ ನಿರ್ದೇಶನ ಮಾಡುತ್ತಿದ್ದ ಸಿನಿಮಾದಿಂದಲೇ ಸಂಭಾವನೆಯ ವಿಚಾರವಾಗಿ ನಯನತಾರಾ ಸಿನಿಮಾದಿಂದ ಹೊರಬಂದಿದ್ರು ಅನ್ನುವುದಾಗಿ ಕೂಡ ಸುದ್ದಿ ಕೇಳಿ ಬಂದಿತ್ತು. ಹೀಗಾಗಿ ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಅನ್ನೋ ಮಾಹಿತಿ ಇಲ್ಲಿಂದಲೇ ಕೂಡ ಪ್ರಾರಂಭ ಆಗಿರಬಹುದು ಅನ್ನೋದಾಗಿ ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದಾರೆ.

ಇಲ್ಲಿ ನಡೆದಿರುವಂತಹ ಭಿನ್ನಾಭಿಪ್ರಾಯಗಳೆ ಇವರಿಬ್ಬರ ಸಂಸಾರದ ನಡುವೆ ಬಿರುಕು ಮೂಡಿಸುವಂತೆ ಮಾಡಿರಬಹುದು ಎಂಬುದಾಗಿ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ವಿಘ್ನೇಶ್ ಶಿವನ್ ರವರ ಇತ್ತೀಚಿನ ಪೋಸ್ಟ್ ನೋಡಿದ್ರೆ ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಅನ್ನೋ ರೀತಿಯಲ್ಲಿ ಕಾಣಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಜೋಡಿ ಮದುವೆಯಾಗಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಇವರನ್ನ ಇಷ್ಟಪಟ್ಟಿದ್ದರು ಅನ್ನೋದು ನಿಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ಈ ಚಿಕ್ಕ ಪುಟ್ಟ ವಿಚಾರಗಳಿಗಾಗಿ ಇವರಿಬ್ರು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ಅನ್ನೋದ್ರಲ್ಲಿ ಯಾರಿಗೂ ನಂಬಿಕೆ ಇಲ್ಲ ಅಂತ ಹೇಳಬಹುದು.

ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಕಾಲವೇ ಉತ್ತರ ನೀಡಬೇಕಾಗಿದೆ. ಸದ್ಯದ ಮಟ್ಟಿಗೆ ಈ ಬಗ್ಗೆ ಇಬ್ಬರಿಂದಲೂ ಕೂಡ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಂದಿಲ್ಲ ಹೀಗಾಗಿ ಈ ಸುದ್ದಿಯನ್ನು ನಾವು ಗಾಳಿ ಸುದ್ದಿ ಅನುದಾಗಿಯೆ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿರುತ್ತದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಾವುದೇ ಸ್ಟಾರ್ ನಟನಿಗೆ ನಾಯಕಿಯ ಆಯ್ಕೆ ಮಾಡಬೇಕಾದರೂ ಕೂಡ ಮೊದಲ ಆಯ್ಕೆಯ ರೂಪದಲ್ಲಿ ನಯನತಾರ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಜವಾನ್ ಸಿನಿಮಾದ ಮೂಲಕ ಶಾರುಖ್ ಖಾನ್ ಅವರ ಜೊತೆಗೆ ನಟಿಸುವ ಮೂಲಕ ಬಾಲಿವುಡ್ ನಲ್ಲಿ ಕೂಡ ಪಾದರ್ಪಣೆ ಮಾಡಿದ್ದಾರೆ ನಮ್ಮ ನಯನತಾರ.

Comments are closed.