Mukesh Ambani: ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಇವರು ಹೇಳಿದ ಮಾತನ್ನು ಮೀರಲ್ವಂತೆ; ಯಾರಪ್ಪಾ ಆ ಮಹಾಗುರು?

Mukesh Ambani: ಸ್ನೇಹಿತರೆ ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರ ಬರದೇ ಇಡೀ ಏಷ್ಯಾ ಖಂಡದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂದಾಗ ಕೇಳಿ ಬರುವಂತಹ ಒಂದೇ ಉತ್ತರ ಅದು ನಮ್ಮ ಮುಖೇಶ್ ಅಂಬಾನಿ (Mukesh Ambani). ಈ ಹೆಗ್ಗಳಿಕೆಯನ್ನು ಮುಕೇಶ್ ಅಂಬಾನಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ತಮ್ಮ ಹೆಸರಿನಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಅವರು ಪಡುವಂತಹ ಶ್ರಮ ಹಾಗೂ ತೆಗೆದುಕೊಳ್ಳುವಂತಹ ನಿರ್ಧಾರಗಳು ಕೂಡ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು ಆದರೆ, ಮುಕೇಶ್ ಅಂಬಾನಿ ಅವರು ಕೂಡ ಇನ್ನೊಬ್ಬ ವ್ಯಕ್ತಿಯ ಮಾತನ್ನು ಮೀರೋದಿಲ್ಲ ಹಾಗೂ ಅವರನ್ನು ಕೇಳದೆ ಯಾವುದೇ ಕೆಲಸವನ್ನು ಕೂಡ ಪ್ರಾರಂಭಿಸುವುದಿಲ್ಲವಂತೆ. ಹಾಗಿದ್ರೆ ಬನ್ನಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಗುರುಗಳು ಯಾರು ಅನ್ನೋದನ್ನ ತಿಳಿದುಕೊಳ್ಳೋಣ.

ಹೌದು ನಾವ್ ಮಾತಾಡ್ತಿರೋದು ರಮೇಶ್ ಭಾಯ್ ಓಜಾ ಎನ್ನುವಂತಹ ಆಧ್ಯಾತ್ಮಿಕ ಗುರುಗಳ ಬಗ್ಗೆ. ಪ್ರತಿಯೊಂದು ವಿಚಾರದಲ್ಲಿ ಕೂಡ ಮುಖೇಶ್ ಅಂಬಾನಿ ಅವರ ಕುಟುಂಬಕ್ಕೆ ಸಲಹೆ ಹಾಗೂ ಸೂಚನೆಗಳನ್ನು ನೀಡುವಂತಹ ಕೆಲಸವನ್ನು ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ ಆದರೆ, ಇದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಇವರು ಕೂಡ ಮುಖೇಶ್ ಅಂಬಾನಿಯವರ ಮೂಲ ಆಗಿರುವಂತಹ ಗುಜರಾತಿನ ದೇವ್ಕ ಎನ್ನುವಂತಹ ಗ್ರಾಮದಲ್ಲಿ 1957ರಲ್ಲಿ ಜನಿಸುತ್ತಾರೆ.

ಮುಂಬೈನಲ್ಲಿ ಶಿಕ್ಷಣವನ್ನು ಮುಗಿಸಿದ ನಂತರ ಸಂಪೂರ್ಣವಾಗಿ ತಮ್ಮನ್ನು ತಾವು ಆಧ್ಯಾತ್ಮದ ಕಡೆಗೆ ತೊಡಗಿಸಿಕೊಳ್ಳುತ್ತಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮಹಾ ಭಗವದ್ಗೀತೆಯಂತಹ ಶಾಸ್ತ್ರ ಪುರಾಣಗಳನ್ನು ಕೂಡ ತಿಳಿದವರಾಗಿದ್ದರು. ಇವರಲ್ಲಿ ಚಿಕ್ಕವಯಸ್ಸಿನಲ್ಲಿ ಸಂಸ್ಕೃತಿ ಹಾಗೂ ಆಚರಣೆಗಳ ಬಗ್ಗೆ ಅಗಾಧವಾದ ಜ್ಞಾನ ಇತ್ತು. ಅಂಬಾನಿ ಅವರ ಮನೆಗೆ ರಾಮಕಥಾವನ್ನು ಹೇಳಲು ಹೋಗಿದ್ದ ಸಂದರ್ಭದಲ್ಲಿಯೇ ಕುಟುಂಬದ ಜೊತೆಗೆ ನಿಕಟವಾದ ಬಾಂಧವ್ಯವನ್ನು ಹೊಂದಿರುವ ಇವರು, ಮುಂದಿನ ದಿನಗಳಲ್ಲಿ ಅಂಬಾನಿ ಕುಟುಂಬಕ್ಕೆ ಮಾರ್ಗದರ್ಶಕರಾಗಿ ಕಾಣಿಸಿಕೊಳ್ಳುತ್ತಾರೆ.

ಅನಿಲ್ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಇಬ್ಬರೂ ಕೂಡ ಬೇರೆ ಆಗುವಂತಹ ಸಂದರ್ಭದಲ್ಲಿ ಇವರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡಿ ಕುಟುಂಬ ಒಡೆಯುವುದನ್ನ ತಡೆಯುತ್ತಾರೆ ಎಂಬುದಾಗಿ ಕೂಡ ಸುದ್ದಿ ಇದೆ. ಸಾಕಷ್ಟು ಸೋಶಿಯಲ್ ಪ್ರೊಫೈಲ್ ಇಲ್ಲದೆ ಇದ್ದರೂ ಕೂಡ ಅಂಬಾನಿ ಕುಟುಂಬದ ಅತ್ಯಂತ ಪ್ರಮುಖ ಭಾಗವಾಗಿ ಇವರು ಕಾಣಿಸಿಕೊಳ್ಳುತ್ತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಇನ್ನು ಇತ್ತೀಚಿಗೆ ಎಷ್ಟು ನಡೆದಿರುವಂತಹ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯವರ ಪುತ್ರ ಆಕಾಶ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ರವರ ನಿಶ್ಚಿತಾರ್ಥದ ಸಂದರ್ಭದಲ್ಲಿ ಕೂಡ ಇವರು ಉಪಸ್ಥಿತರಿದ್ದರು. ಇಷ್ಟೆಲ್ಲ ದೊಡ್ಡಮಟ್ಟದ ಕನೆಕ್ಷನ್ ಇದ್ರೂ ಕೂಡ ಸರಳವಾಗಿ ಜೀವನವನ್ನು ನಡೆಸುತ್ತಿದ್ದಾರೆ ಅನ್ನೋದೇ ಇವರ ಬಗ್ಗೆ ಪ್ರತಿಯೊಬ್ಬರು ಮೆಚ್ಚಿಕೊಳ್ಳುವ ವಿಚಾರ.

ಮುಕೇಶ್ ಅಂಬಾನಿಯವರ ವ್ಯಾಪಾರ ವ್ಯವಹಾರಗಳಲ್ಲಿ ತೆಗೆದುಕೊಳ್ಳುವಂತಹ ಕೆಲವೊಂದು ಪ್ರಮುಖ ನಿರ್ಧಾರಗಳಲ್ಲಿ ಕೂಡ ಇವರ ಆಶೀರ್ವಾದ ಇದ್ದೇ ಇರುತ್ತದೆ ಆದರೆ, ಅಂಬಾನಿ ಕುಟುಂಬಕ್ಕೆ ಪ್ರಮುಖವಾಗಿ ರಮೇಶ್ ಭಾಯ್ ಓಜಾ ಆಧ್ಯಾತ್ಮಿಕ ಗುರುಗಳಾಗಿ ಕೂಡ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನ ನಾವು ಇಲ್ಲಿ ನೆನಪಿಟ್ಟುಕೊಳ್ಳಬೇಕಾಗಿರುತ್ತದೆ. ಪ್ರತಿಯೊಂದು ರೀತಿಯಲ್ಲಿ ಮುಕೇಶ್ ಅಂಬಾನಿ ಅವರ ಗುರುಗಳಾಗಿ ಇವರು ಅಂಬಾನಿ ಕುಟುಂಬದ ಆಧ್ಯಾತ್ಮಿಕ ಆಧಾರ್ ಸ್ತಂಭ ವಾಗಿದ್ದಾರೆ ಅಂದ್ರು ಕೂಡ ತಪ್ಪಾಗಲ್ಲ.

Comments are closed.