Ration Card: ಇನ್ಮುಂದೆ ರೇಷನ್ ಕಾರ್ಡ್ ಅನ್ನು ಅಡ್ರೆಸ್ ಪ್ರೂಫ್ ಆಗಿ ಬಳಾಸುವ ಹಾಗಿಲ್ಲ; ಹೊಸ ಪಡಿತರ ಚೀಟಿ ಪಡೆದುಕೊಳ್ಳುವವರಿಗೆ ಸರ್ಕಾರದಿಂದ ಪಾಸ್ ಆಯ್ತು ಆರ್ಡರ್.

Ration Card: ಇತ್ತೀಚಿಗಷ್ಟೇ ದೆಹಲಿ ಹೈಕೋರ್ಟ್ ನೀಡಿರುವಂತಹ ಒಂದು ಆದೇಶ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇನ್ಮುಂದೆ ಯಾರು ಕೂಡ ಅಡ್ರೆಸ್ ಡಾಕ್ಯುಮೆಂಟನ್ನು ನೀಡುವ ಸಂದರ್ಭದಲ್ಲಿ ರೇಷನ್ ಕಾರ್ಡ್ (Ration Card) ಅನ್ನು ಪರಿಗಣಿಸಬಾರದು ಎಂಬುದಾಗಿ ಆದೇಶ ನೀಡಲಾಗಿದೆ. ರೇಷನ್ ಕಾರ್ಡ್ ಅನ್ನು ಕೇವಲ ರೇಷನ್ ಅನ್ನು ಒದಗಿಸುವಂತಹ ಕೆಲಸಕ್ಕಾಗಿ ಮಾತ್ರ ಬಳಸಲಾಗುತ್ತಿದ್ದು ಇದು ಅಡ್ರೆಸ್ ಪ್ರೂಫ್ ವಿಭಾಗದಲ್ಲಿ ಬರುವಂತಹ ಡಾಕ್ಯುಮೆಂಟ್ಗಳ ಪರಿಧಿಯಲ್ಲಿ ಕೆಲವೊಂದು ಕೊರತೆಗಳ ಕಾರಣದಿಂದಾಗಿ ಹೊರ ಹೋಗುತ್ತದೆ ಎಂಬುದಾಗಿ ಹೇಳಿದ್ದಾರೆ. ಇನ್ಮುಂದೆ ಯಾರೂ ಕೂಡ ರೇಷನ್ ಕಾರ್ಡ್ ಅನ್ನು ಅಡ್ರೆಸ್ ಪ್ರೂಫ್ ರೂಪದಲ್ಲಿ ಉಪಯೋಗಿಸುವ ಹಾಗಿಲ್ಲ ಅನ್ನುವುದಾಗಿ ಸ್ಪಷ್ಟವಾದ ಆಜ್ಞೆ ಹೊರ ಬಂದಿದೆ.

ಈ ವಿಚಾರದ ಬಗ್ಗೆ ದೆಹಲಿಯ ಒಂದು ನಿರ್ದಿಷ್ಟ ಸ್ಥಳದ ಕಾಲೋನಿಯವರು ತಮ್ಮನ್ನು ಆ ಕಾಲೋನಿಯಿಂದ ತೆಗೆದಿರುವುದಕ್ಕಾಗಿ ತಮಗೆ ಬೇರೆ ವಾಸ ಸ್ಥಳವನ್ನು ಒದಗಿಸಬೇಕು ಎನ್ನುವುದಾಗಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದರು. ಮೊದಲಿಗೆ ದೆಹಲಿ ಡೆವಲಪ್ಮೆಂಟ್ ಅಥಾರಿಟಿ ರೇಷನ್ ಕಾರ್ಡ್ ಅನ್ನು ಅಡ್ರೆಸ್ ಪ್ರೂಫ್ ರೀತಿಯಲ್ಲಿ ಬಳಸುವ ಬಗ್ಗೆ ಮಾತನಾಡಿದ್ದು ಆದರೆ ನಂತರ ಇದು ಸೆಂಟ್ರಲ್ ಗೌರ್ಮೆಂಟ್ ನಿಯಮಗಳ ಪ್ರಕಾರ ಅಸಿಂಧು ಎಂಬುದಾಗಿ ಪರಿಗಣಿಸಿದೆ.

2015ರಲ್ಲಿ ಯೂನಿಯನ್ ಮಿನಿಸ್ಟ್ರಿ ರೇಷನ್ ಕಾರ್ಡ್ ಅನ್ನು ಅಡ್ರೆಸ್ ಪ್ರೂಫ್ ರೀತಿಯಲ್ಲಿ ಬಳಸುವುದರ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನು ಮೊದಲಿಗೆ ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿ ರೇಷನ್ ಕಾರ್ಡ್ ಅನ್ನು ಅಡ್ರೆಸ್ ಪ್ರೂಫ್ ರೀತಿಯಲ್ಲಿ ಒಪ್ಪಿಕೊಂಡಿರುವ ಬಗ್ಗೆ ಕೂಡ ಹೈಕೋರ್ಟ್ ಚೀಮಾರಿ ಹಾಕಿದೆ ಎಂದು ಹೇಳಬಹುದು. ಇದೇ ಕಾರಣಕ್ಕಾಗಿ ಈ ಬಾರಿ ತೀರ್ಪು ನೀಡುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ದೆಹಲಿಯ ಕಟ್ಪುತ್ಲಿ ಕಾಲೋನಿಯಲ್ಲಿ ಅಂದರೆ ಈ ಅರ್ಜಿ ಸಲ್ಲಿಸಿರುವಂತಹ ಜನರಿಗೆ ರೇಷನ್ ಕಾರ್ಡ್ ಕೊರತೆಯ ಕಾರಣದಿಂದಾಗಿ ಅವರ ವಸತಿ ಪಡೆಯುವಂತಹ ಅರ್ಹತೆಯನ್ನು ಪ್ರಶ್ನೆಸಿರುವುದರ ಬಗ್ಗೆ ಸಮಸ್ಯೆ ಉಂಟಾಗಲಿದೆ ಎಂಬುದಾಗಿ ಹೇಳಿದೆ.

ಮುಂದಿನ ದಿನಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರು ತೀರ್ಪು ನೀಡಿರುವಂತೆ ಅಡ್ರೆಸ್ ಪ್ರೂಫ್ ರೂಪದಲ್ಲಿ ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಹಾಗೂ ಎಲೆಕ್ಟ್ರಿಸಿಟಿ ಬಿಲ್ ಗಳಂತಹ ಪರ್ಯಾಯ ದಾಖಲೆಗಳನ್ನು ಪರೀಕ್ಷಿಸ ಬೇಕಾಗಿರುತ್ತದೆ ಎಂಬುದಾಗಿ ಸಲಹೆಯನ್ನು ನೀಡಿದ್ದಾರೆ. ಈ ದಾಖಲೆಗಳನ್ನು ಪರೀಕ್ಷಿಸಿದ ನಂತರವಷ್ಟೇ ಕಾನೂನು ರೀತಿಯಾಗಿ ಅವರಿಗೆ ಪರ್ಯಾಯ ವಸತಿ ನೀಡುವ ಕುರಿತಂತೆ ಮುಂದಿನ ಕ್ರಮವನ್ನು ಕೈ ತೆಗೆದುಕೊಳ್ಳುವಂತೆ ಹೇಳಲಾಗಿದೆ. ದೆಹಲಿ ಡೆವಲಪ್ಮೆಂಟ್ ಅಥಾರಿಟಿ ಕೂಡ ಪಿಟಿಷನ್ ಸಲ್ಲಿಸಿರುವವರಿಗೆ ಬೇರೆ ಜಾಗವನ್ನು ವಸತಿಗಾಗಿ ನೀಡಬೇಕು ಎನ್ನುವಂತಹ ಬೇಡಿಕೆಯನ್ನು ಸಲ್ಲಿಸಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ಜಾರಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.