Mahashivratri 2024: 300 ವರ್ಷಗಳ ನಂತರ ಈ ಶುಭ ಶಿವರಾತ್ರಿಯಂದೇ ಕಾಣಿಸಿಕೊಂಡಿದೆ ನೋಡಿ ಈ ವಿಶೇಷವಾದ ರಾಜಯೋಗ. ಯಾರಿಗೆ ಅದೃಷ್ಟ ಇದೆ ಗೊತ್ತಾ?

Mahashivratri 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 300 ವರ್ಷಗಳ ನಂತರ ಇದೇ ಮಾರ್ಚ್ 8ರಂದು ಅಂದರೆ ಇವತ್ತು ಬಂದಿರುವಂತಹ ಈ ಮಹಾಶಿವರಾತ್ರಿಯ ಸಂದರ್ಭದಲ್ಲಿ ತ್ರಿಕೋನ ಮಹಾರಾಜ ಯೋಗ ಪ್ರಾಪ್ತಿಯಾಗಲಿದೆ. ಇದರಿಂದಾಗಿ ಕೆಲವೊಂದು ವಿಶೇಷ ರಾಶಿಯವರಿಗೆ ವಿಶೇಷವಾದ ರಾಜಯೋಗ ಪ್ರಾಪ್ತಿಯಾಗಲಿದೆ. ವಿಶೇಷವಾಗಿ ಈ ಶಿವರಾತ್ರಿಯ ದಿನದಂದು ಮಹಾದೇವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಇಡೀ ದಿನ ದೇವರ ಸ್ಮರಣೆಯಲ್ಲಿ ದಿನ ಕಳೆದರೆ ದೇವರ ಕೃಪೆಗೆ ಪಾತ್ರರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಲಾಗಿದೆ.

ಇನ್ನು ಈ ವಿಶೇಷವಾದ ಮಹಾಶಿವರಾತ್ರಿಯಂದು ತ್ರಿಕೋನ ರಾಜಯೋಗದಿಂದಾಗಿ ಅದೃಷ್ಟವನ್ನು ಪಡೆಯಲಿರುವಂತಹ ರಾಶಿಗಳ ಬಗ್ಗೆ ಮಾತನಾಡುವುದಾದರೆ ಮೇಷ, ವೃಷಭ, ಧನು, ಕನ್ಯಾ, ಸಿಂಹ ರಾಶಿಯವರಿಗೆ ಈ ವಿಶೇಷವಾದ ಅದೃಷ್ಟದ ಫಲ ದೊರಕಲಿದೆ. ಈ ಬಾರಿಯ 300 ವರ್ಷಗಳ ನಂತರ ಕಾಣಿಸಿಕೊಂಡಿರುವಂತಹ ವಿಶೇಷ ತ್ರಿಕೋನ ರಾಜಯೋಗದ ಮಹಾಶಿವರಾತ್ರಿ ಈ ಮೇಲೆ ಹೇಳಿರುವಂತಹ ರಾಶಿಯವರಿಗೆ ವಿಶೇಷವಾದ ಅದೃಷ್ಟದ ಫಲವನ್ನು ತಂದು ಕೊಡಲಿದೆ.

ಹೀಗಾಗಿ ಭಗವಾನ್ ಮಹಾದೇವನನ್ನು ಸರಿಯಾದ ರೀತಿಯಲ್ಲಿ ಸರಿಯಾದ ಕ್ರಮದಲ್ಲಿ ಪೂಜೆ ಮಾಡುವುದು ಈ ರಾಶಿಯವರಿಗೆ ಅನಿವಾರ್ಯವಾಗಿರುತ್ತದೆ ಹಾಗೂ ಸರಿಯಾದ ರೀತಿಯಲ್ಲಿ ಈ ಕ್ರಮಗಳನ್ನು ಪೂರೈಸ ಬೇಕಾಗಿರುತ್ತದೆ. ಮಹಾಶಿವರಾತ್ರಿಯ ದಿನ ಬೆಳಿಗ್ಗೆ ಎಂಟು ಗಂಟೆಯವರೆಗೂ ಕೂಡ ನಿಮ್ಮ ಸರ್ವಾರ್ಥ ಇಷ್ಟಾರ್ಥಗಳು ಸಿದ್ಧಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಹಾಶಿವರಾತ್ರಿ ದಿನವನ್ನು ಆಚರಿಸುವುದಕ್ಕೆ ಒಂದು ಕಾರಣ ಕೂಡ ಇದ್ದು ಪುರಾಣಗಳ ಪ್ರಕಾರ ಇದೇ ದಿವಸ ಮಹಾಶಿವ ಪಾರ್ವತಿ ಮಾತೆಯನ್ನು ಮದುವೆಯಾಗಿರುತ್ತಾರೆ. ಇದೇ ಕಾರಣಕ್ಕಾಗಿ ಶಿವನ ಭಕ್ತ ಅಭಿಮಾನಿಗಳು ಪ್ರತಿ ವರ್ಷ ಈ ದಿನವನ್ನು ಶಿವರಾತ್ರಿ ಎಂಬುದಾಗಿ ಆಚರಿಸುತ್ತಾರೆ. ಈ ದಿನ ಸಾಕಷ್ಟು ಭಕ್ತಾಭಿಮಾನಿಗಳು ಉಪವಾಸ ಇರೋದು ಹಾಗೂ ಶಿವನನ್ನು ವಿಧವಿಧವಾಗಿ ಪೂಜೆ ಮಾಡುವಂತಹ ಕೆಲಸವನ್ನು ಮಾಡುತ್ತಾರೆ. ಇದರಿಂದ ಪ್ರಾಪ್ತಿಯಾಗುವಂತಹ ಪುಣ್ಯ ಬಾಲಗಳು ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುವಂತೆ ಮಾಡುತ್ತವೆ.

ಮಹಾಶಂಕರನನ್ನು ಈ ಸಂದರ್ಭದಲ್ಲಿ ಪೂಜೆ ಮಾಡುವುದರಿಂದಾಗಿ ನೀವು ಕೇವಲ ಈ ಜನುಮದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮಕ್ಕೆ ಕೂಡ ಪುಣ್ಯ ಫಲಗಳನ್ನು ಕೊಂಡೊಯ್ಯಬಹುದಾಗಿದೆ. ಈ ಸಂದರ್ಭದಲ್ಲಿ ಶುಕ್ರ ಶನಿ ಹಾಗೂ ಸೂರ್ಯರ ತ್ರಿಗ್ರಹಿ ಸಂಯೋಗ ಕೂಡ ಮೂಡಿಬರುವುದರಿಂದ ಇದರಿಂದ ಕೂಡ ಹೆಚ್ಚಿನ ಲಾಭವನ್ನು ಈ ಮೇಲಿನ ರಾಶಿಯವರು ಪಡೆದುಕೊಳ್ಳುತ್ತಾರೆ. ಹೀಗಾಗಿ ಈ ವಿಶೇಷವಾದ ಪುಣ್ಯ ಫಲಿತ ವಾದಂತಹ ಮಹಾಶಿವರಾತ್ರಿಯನ್ನು ಶಿವನ ಆರಾಧನೆಗಾಗಿ ಹಾಗೂ ಧಾರ್ಮಿಕ ಕಾರಣಗಳಿಗಾಗಿ ಪರ್ಯಾಯವಾಗಿ ಇರಿಸಿಕೊಳ್ಳಿ ಖಂಡಿತವಾಗಿ ನಿಮ್ಮ ಜೀವನ ಅಪೇಕ್ಷಿಸುವಂತಹ ಪ್ರತಿಯೊಂದು ಪುಣ್ಯ ಫಲಗಳನ್ನು ನೀವು ಪಡೆದುಕೊಳ್ಳುತ್ತೀರಿ. ಒಂದು ವೇಳೆ ನೀವು ಕೂಡ ಈ ಮೇಲಿನ ರಾಶಿಯಲ್ಲಿ ಕಾಣಿಸಿಕೊಂಡರು ತಪ್ಪದೆ ಕಾಮೆಂಟ್ ನಲ್ಲಿ ಓಂ ನಮಃ ಶಿವಾಯ್ ಎಂಬುದಾಗಿ ಕಾಮೆಂಟ್ ಮಾಡಿ.

Comments are closed.