Political News: ಲೋಕಸಭಾ ಚುನಾವಣೆಗೆ 40 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಕಾಂಗ್ರೆಸ್. ಎಲ್ಲೆಲ್ಲಿ ಯಾರ್ಯಾರು?

Political News: ಇನ್ನೇನು ಕೆಲವೇ ಸಮಯಗಳಲ್ಲಿ ದೇಶದ ಮುಂದಿನ ಚುಕ್ಕಾಣಿಯನ್ನು ಹಿಡಿಯುವಂತಹ ಪಕ್ಷ ಯಾವುದು ಹಾಗೂ ನಾಯಕ ಯಾರು ಎನ್ನುವುದನ್ನು ನಿರ್ಧರಿಸುವಂತ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಛತ್ತೀಸ್ಗಡ ಕೇರಳ ಹಾಗೂ ಇನ್ನಿತರ ರಾಜ್ಯಗಳ ಲೋಕಸಭಾ ಕ್ಷೇತ್ರದ 40 ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಣೆ ಮಾಡಿರುವಂತಹ ಸುದ್ದಿ ಕೇಳಿ ಬಂದಿದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದಲ್ಲಿ ಯಾರ್ಯಾರು ಯಾವ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

CEC ಸಭೆಯಲ್ಲಿ ಯಾವ್ಯಾವ ನಾಯಕರು ಯಾವ್ಯಾವ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ನಿಲ್ಲಬೇಕು ಎನ್ನುವಂತಹ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು ಎನ್ನುವಂತಹ ಮಾಹಿತಿಗಳು ಮೂಲಗಳು ನೀಡಿವೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಕಾಂಗ್ರೆಸ್ ಪಕ್ಷದ ನಾಯಕ ಆಗಿರುವಂತಹ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರವಾಗಿರುವಂತಹ ಕೇರಳದ ವೈನಾಡ್ ನಲ್ಲಿ ಈ ಬಾರಿ ಕೂಡ ಸ್ಪರ್ಧಿಸಲಿದ್ದಾರೆ ಅನ್ನುವಂತಹ ಮಾಹಿತಿಗಳು ಸಿಕ್ಕಿವೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಿರೋಧ ಪಕ್ಷ ನಾಯಕ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಈ ಸಭೆ ನಡೆದಿದೆ.

ಈ ಸಭೆಯಲ್ಲಿ ಕರ್ನಾಟಕ ತೆಲಂಗಾಣ ಸೇರಿದಂತೆ ಕೆಲವೊಂದು ಕೇಂದ್ರಾಡಳಿತ ಪ್ರದೇಶದ ಅಭ್ಯರ್ಥಿಗಳನ್ನು ಕೂಡ ಫೈನಲ್ ಮಾಡಲಾಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಇದರ ಘೋಷಣೆಯನ್ನು ಕೂಡ ಅತಿ ಶೀಘ್ರದಲ್ಲಿ ಅಧಿಕೃತವಾಗಿ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಗಳು ಸಿಕ್ಕಿವೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷವು 16 ಸ್ಥಾನಗಳಲ್ಲಿ ಸ್ಪರ್ಧೆಯನ್ನು ನಡೆಸಲಿದ್ದು ಉಳಿದ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಮಿತ್ರ ಪಕ್ಷಗಳು ಸ್ಪರ್ಧೆಯನ್ನು ನಡೆಸಲು ಎನ್ನುವಂತಹ ಮಾಹಿತಿಗಳನ್ನು ಅಧಿಕೃತವಾಗಿ ಹೊರಹಾಕಲಾಗಿದೆ.

ಮೂಲಗಳು ತಿಳಿಸುವ ಪ್ರಕಾರ ರಾಜನಂದಗಾವ್ ನಿಂದ ಭೂಪೇಶ್ ಬಘಲ್ ಹಾಗೂ ಮಹಾಸಮುಂಡ್ ನಿಂದ ತಾಮ್ರ ದ್ವಜ್ ಸಾಹು ರವರನ್ನು ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಮಾರ್ಚ್ 11ರಂದು ನಡೆಯಲಿರುವಂತಹ ಮತ್ತೊಂದು ಸಭೆಯಲ್ಲಿ ದೇಶದ ರಾಜಧಾನಿಯಾಗಿರುವಂತಹ ದೆಹಲಿಯಿಂದ ಸ್ಪರ್ಧೆ ಮಾಡಲಿರುವಂತಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎನ್ನುವಂತಹ ಮಾಹಿತಿ ಸಿಕ್ಕಿದೆ. ಛತ್ತಿಸ್ ಗಡ ದ ಉಸ್ತುವಾರಿಯನ್ನಾಗಿ ಸಚಿನ್ ಪೈಲೆಟ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಇದರ ಬಗ್ಗೆ ಮಾತನಾಡಿರುವಂತಹ ಸಚಿನ್ ಪೈಲೆಟ್ ಅವರು ಚುನಾವಣೆ ಗೆಲ್ಲುವಂತಹ ಭರವಸೆ ಇರುವಂತಹ ಯಾರೇ ಇದ್ದರೂ ಕೂಡ ಖಂಡಿತವಾಗಿ ಅವರೇ ಆಯಾಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತಾರೆ ಎಂಬುದಾಗಿ ಹೇಳಿದ್ದಾರೆ.

ಈ ಕಡೆ ಬಿಜೆಪಿಯಿಂದಲೂ ಕೂಡ ಅಭ್ಯರ್ಥಿಗಳ ಪಟ್ಟಿ ಹೊರಬಂದಿದ್ದು ಈ ಬಾರಿ ವಾರಣಾಸಿ ಕ್ಷೇತ್ರದಿಂದ ನರೇಂದ್ರ ಮೋದಿಯವರು ಸ್ಪರ್ಧಿಸಲಿದ್ದಾರೆ ಅನ್ನುವಂತಹ ಅಧಿಕೃತ ಪ್ರಕಟಣೆ ಹೊರ ಬಂದಿದೆ. 195 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಮುಂದಿನ ಪಟ್ಟಿಯನ್ನು ಭಾರತೀಯ ಜನತಾ ಪಾರ್ಟಿ ಅತೀ ಶೀಘ್ರದಲ್ಲಿ ಬಿಡುಗಡೆ ಮಾಡುವಂತಹ ನಿರೀಕ್ಷೆ ಕೂಡ ಜನರಲ್ಲಿ ಹೆಚ್ಚಿದೆ.

Comments are closed.