Parineeti Chopra: ಇದೇನಿದು ಪರಿಣಿತಿ ಚೋಪ್ರಾ – ಇನ್ನು ಮದುವೆಯಾಗಿ ಆರು ತಿಂಗಳಷ್ಟೇ ಆದರೂ ಪ್ರೆಗ್ನೆಂಟಾ?

Parineeti Chopra: ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಹಾಗೂ ಪ್ರಿಯಾಂಕ ಚೋಪ್ರಾ ಅವರ ಸಹೋದರಿಯಾಗಿರುವಂತಹ ಪರಿಣಿತಿಚೋಪರ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳು ಹರಿದಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಅವರು ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿರುವ ರೀತಿ ನೋಡಿ ಪ್ರತಿಯೊಬ್ಬರೂ ಕೂಡ ಅವರು ಸುದ್ದಿಯನ್ನು ಹರಡಿಸುತ್ತಿದ್ದಾರೆ. ಯಾಕೆಂದ್ರೆ ಅವರು ಮದುವೆಯಾಗಿ ಕೇವಲ ಆರು ತಿಂಗಳಷ್ಟೇ ಕಳೆದಿದ್ದು ಅಷ್ಟು ಬೇಗ ಹೇಗೆ ಗರ್ಭಿಣಿಯಾಗಿದ್ದಾರೆ ಅನ್ನೋದಾಗಿ ಎಲ್ರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಂಡಿರುವ ರೀತಿ ನೋಡಿ ಎಲ್ಲರೂ ಕೂಡ ನಟಿ ಗರ್ಭಿಣಿಯಾಗಿದ್ದಾರೆ ಅನ್ನೋದಕ್ಕೆ ಕಾಮೆಂಟ್ ಮಾಡೋದಕ್ಕೆ ಪ್ರಾರಂಭ ಮಾಡಿದ್ದಾರೆ. ಅಭಿಮಾನಿಗಳು ಕೂಡ ಆನ್ಲೈನ್ ನಲ್ಲಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಪರಿಣಿತಿ ಚೋಪ್ರಾ ಆಮ್ ಆದ್ಮಿ ಪಾರ್ಟಿಯ ಖ್ಯಾತ ನಾಯಕ ಆಗಿರುವಂತಹ ರಾಘವ್ ಚಡ್ಡ ಅವರನ್ನ ಮದುವೆಯಾಗಿದ್ದರು. ಆನ್ಲೈನಲ್ಲಿ ಫೋಟೋಗಳನ್ನು ಗಮನಿಸಿದ ನಂತರ ಪ್ರತಿಯೊಬ್ಬರೂ ಕೂಡ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವಂತಹ ಅಭಿಪ್ರಾಯಗಳು ಹೇರಳವಾಗಿ ವ್ಯಕ್ತವಾಗುತ್ತಿವೆ.

ಏರ್ಪೊರ್ಟ್ ನಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ದೊಡ್ಡದಾದ ವೈಟ್ ಶರ್ಟ್ ಅನ್ನು ಅವರು ಧರಿಸಿದ್ದರು ಹಾಗೂ ಅವರ ಹೊಟ್ಟೆ ಕೂಡ ದೊಡ್ಡದಾಗಿರುವಂತೆ ಕಾಣಿಸಿಕೊಂಡಿತ್ತು ಇದೇ ಹಿನ್ನೆಲೆಯಲ್ಲಿ ಅವರು ಗರ್ಭಿಣಿಯಾಗಿದ್ದಾರೆ ಅನ್ನುವಂತಹ ಸುದ್ದಿ ಎಲ್ಲಾ ಕಡೆ ಹರಡುವಂತೆ ಕಾರಣವಾಗಿದೆ. ಸಾಮಾನ್ಯವಾಗಿ ಚಲನಚಿತ್ರ ನಟಿಯರು ಗರ್ಭಿಣಿಯಾದಾಗ ದೇಹಕ್ಕೆ ಆರಾಮ ಇರಲಿ ಎನ್ನುವ ಕಾರಣಕ್ಕಾಗಿ ಈ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ ಎನ್ನುವುದನ್ನು ಈ ಹಿಂದೆ ನಾವು ಸಾಕಷ್ಟು ಬಾರಿ ಗಮನಿಸಿದ್ದೇವೆ.

ಈ ಅವತಾರದಲ್ಲಿ ಪರಿಣಿತಿಯವರನ್ನು ನೋಡಿರುವಂತಹ ಅಭಿಮಾನಿಗಳು ಕೂಡ ಪರಿಣಿತಿಯವರ ಮುಖದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಕಳೆದ ಸಪ್ಟೆಂಬರ್ ತಿಂಗಳಿನ ಅಷ್ಟೇ, ಇಬ್ಬರೂ ಕೂಡ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಮದುವೆ ಅದ್ದೂರಿಯಾಗಿ ನಡೆದಿದ್ದು ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ರಾಜಕೀಯ ಗಣ್ಯರು ಕೂಡ ಆಗಮಿಸಿದ್ದರು.

ಸಾಕಷ್ಟು ವರ್ಷಗಳ ಹಿಂದೆ ವೈರಲ್ ಆಗಿರುವಂತಹ ವಿಡಿಯೋದಲ್ಲಿ ನೋಡಿದರೆ ಆ ಸಂದರ್ಭದಲ್ಲಿ ಪರಿಣಿತಿ ಚೋಪ್ರಾ ರವರಿಗೆ ಪೊಲಿಟಿಕಲ್ ಹಿನ್ನೆಲೆ ಹೊಂದಿರುವಂತಹ ವ್ಯಕ್ತಿಯನ್ನು ಮದುವೆಯಾಗುತ್ತೀರಾ ಅನ್ನೋದಾಗಿ ಕೇಳಿದಾಗ ಯಾವತ್ತೂ ಆಗೋದಿಲ್ಲ ಅನ್ನೋದಾಗಿ ಉತ್ತರ ನೀಡಿದರು ಆದರೆ ಈಗ ಒಬ್ಬ ರಾಜಕೀಯ ನಾಯಕನನ್ನೇ ಅವರು ಮದುವೆಯಾಗಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸ್ತೀರಾ ಅನ್ನೋದಾಗಿ ಕೇಳಿದಾಗ ಸದ್ಯಕ್ಕಂತೂ ಆ ರೀತಿಯ ಯಾವುದೇ ಯೋಜನೆಗಳು ಇಲ್ಲ ಎಂಬುದಾಗಿ ಪರಿಣಿತಿ ಚೋಪ್ರಾ ಹೇಳಿಕೊಂಡಿದ್ದಾರೆ. ಇಂದಿಗೂ ಕೂಡ ನಿಜವಾಗ್ಲೂ ಪರಿಣತಿ ಚೋಪ್ರಾ ತಾಯಿ ಆಗ್ತಾಯಿದಾರ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಣಿತಿ ಚೋಪ್ರಾ ಯಾವ ರೀತಿಯಲ್ಲಿ ಉತ್ತರ ನೀಡುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Comments are closed.