Dharmasthala: ಶಿವರಾತ್ರಿಯ ದಿನದಂದೇ ಪರಶಿವನಲ್ಲಿ ಐಕ್ಯಳಾದ ಧರ್ಮಸ್ಥಳದ ಆನೆ ಲತಾ; ಅಪರೂಪದ ಮರಣ ಇದು!

Dharmasthala: ಪುಣ್ಯ ಸ್ಥಳ ಆಗಿರುವಂತಹ ಧರ್ಮಸ್ಥಳದಲ್ಲಿ ಕಳೆದ ಐವತ್ತು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವಂತಹ ಲತಾ ಎನ್ನುವಂತಹ ಆನೆ ಶಿವರಾತ್ರಿಯ ದಿನದಂದು ಹೃದಯ-ಘಾತದಿಂದ ಮರಣ ಹೊಂದಿದೆ. ಧರ್ಮಸ್ಥಳದ ಭಕ್ತಾಭಿಮಾನಿಗಳಿಗೆ ಹಾಗೂ ಪ್ರತಿಯೊಬ್ಬರಿಗೂ ಕೂಡ ಈ ಸುದ್ದಿ ಬೇಸರವನ್ನು ತರಿಸಿದೆ ಎಂದು ಹೇಳಬಹುದಾಗಿದೆ. ಅದು ಕೂಡ ಶಿವರಾತ್ರಿಯ ದಿನದಂದೆ ಶಿವೈಕ್ಯ ಆಗಿರೋದು ಒಂದು ರೀತಿಯಲ್ಲಿ ಆನೆಯ ಪುಣ್ಯ ಫಲ ಅಂತ ಅಂದ್ರು ಕೂಡ ತಪ್ಪಾಗಲ್ಲ ಅಂತ ಅನ್ಸುತ್ತೆ. ಪವಿತ್ರವಾದ ದಿನದಂದು ಶಿವನ ಬಳಿಗೆ ಲತಾ ಹೋಗಿದ್ದಾಳೆ ಎಂಬುದಾಗಿ ಹೇಳಬಹುದಾಗಿದೆ.

ಧರ್ಮಸ್ಥಳದ ಪುಣ್ಯ ಸ್ಥಳದಲ್ಲಿ ರಥೋತ್ಸವ ದೀಪೋತ್ಸವ ಹಾಗೂ ಶಿವರಾತ್ರಿ ಉತ್ಸವಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಹ ಕೆಲಸವನ್ನು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಲತಾ ಮಾಡಿಕೊಂಡು ಬರುತ್ತಿದ್ದಳು. ಇದಕ್ಕಾಗಿಯೇ ಆಕೆ ಪ್ರತಿಯೊಬ್ಬರ ನೆಚ್ಚಿನ ಆನೆಯಾಗಿ ಕಾಣಿಸಿಕೊಂಡಿದ್ಲು. ಯಾವತ್ತು ಕೂಡ ಪುಣ್ಯಸ್ಥಳಕ್ಕೆ ಬರುವಂತಹ ಭಕ್ತಾಭಿಮಾನಿಗಳಿಗೆ ಲತಾ ತೊಂದರೆ ಕೊಟ್ಟ ಉದಾಹರಣೆನೇ ಕಾಣಿಸಿಕೊಳ್ಳುವುದಿಲ್ಲ.

ನಿಜಕ್ಕೂ ಕೂಡ ಆಕೆ ಧರ್ಮಸ್ಥಳಕ್ಕೆ ಬರುವಂತಹ ಪ್ರತಿಯೊಬ್ಬ ಭಕ್ತಾಭಿಮಾನಿಯ ಫೇವರೆಟ್ ಅಂದ್ರು ಕೂಡ ತಪ್ಪಾಗಲ್ಲ. ಇನ್ನು ಕೇವಲ ಭಕ್ತರಿಗೆ ಮಾತ್ರವಲ್ಲದೆ ದೇವಸ್ಥಾನದ ಧರ್ಮಾಧಿಕಾರಿಗಳಾಗಿರುವಂತಹ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೂ ಕೂಡ ಲತಾ ಎಂದರೆ ಅಚ್ಚುಮೆಚ್ಚು. ಅಷ್ಟರ ಮಟ್ಟಿಗೆ ಲತಾ ತನ್ನ ಜೀವಿತಾವಧಿಯಲ್ಲಿ ಎಲ್ಲರ ಮೆಚ್ಚುಗೆಯನ್ನು ಸಂಪಾದನೆ ಮಾಡಿದ್ದಾಳೆ.

ಇನ್ನು ಧರ್ಮಸ್ಥಳದಲ್ಲಿ ತನ್ನ ಮಗಳಾಗಿರುವಂತಹ ಲಕ್ಷ್ಮಿ ಆನೆ ಹಾಗೂ ಶಿವಾನಿ ಆನೆಯ ಜೊತೆಗೆ ಇಷ್ಟು ವರ್ಷ ಲತಾ ಧರ್ಮಸ್ಥಳದಲ್ಲಿ ಇದ್ದಳು. ಧರ್ಮಸ್ಥಳದಲ್ಲಿಯೇ ಲತಾ ಅಂತಿಮ ಸಂಸ್ಕಾರವನ್ನು ಮಾಡುವಂತಹ ತಯಾರಿಯನ್ನು ಮಾಡಿಕೊಳ್ಳಲಾಗಿದ್ದು, ಆಕೆಗೆ ಅಂತಿಮ ವಿದಾಯವನ್ನು ನೀಡುವುದಕ್ಕೆ ಭಕ್ತಗಣ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದೆ ಎಂದು ಹೇಳಬಹುದಾಗಿದೆ. ಮೂಕ ಪ್ರಾಣಿಯಾಗಿದ್ದರೂ ಕೂಡ ಮನುಷ್ಯರಂತೆ ಭಾವನ ಜೀವಿಯಾಗಿ ವರ್ತಿಸುತ್ತಿದ್ದ ಲತಾ ಶಿವರಾತ್ರಿಯ ದಿನದಂದು ಈ ಲೋಕವನ್ನು ತ್ಯಜಿಸಿರುವುದು ಸಾಕಷ್ಟು ಜನರಿಗೆ ಬೇಸರವನ್ನು ತರಿಸಿದೆ. ಧರ್ಮಸ್ಥಳಕ್ಕೆ ಬರುವಂತಹ ಪ್ರತಿಯೊಬ್ಬ ಭಕ್ತರ ನೆಚ್ಚಿನ ಆನೆಯಾಗಿದ್ದ ಲತಾ ಈಗ ಶಿವೈಕ್ಯಳಾಗಿದ್ದಾಳೆ.

ಖಂಡಿತವಾಗಿ ಶಿವರಾತ್ರಿಯ ಸಂದರ್ಭದಲ್ಲಿ ಮೊದಲ ಬಾರಿಗೆ ಧರ್ಮಸ್ಥಳದಲ್ಲಿ ಬೇಸರ ಕಂಡುಬಂದಿರುವ ಉದಾಹರಣೆ ಇದೇ ಆಗಿರಬಹುದು ಎಂದು ಹೇಳಬಹುದಾಗಿದೆ. ಧರ್ಮಸ್ಥಳದಲ್ಲಿ ಶಿವರಾತ್ರಿಯ ಶುಭ ದಿನದಂದೇ ಲತಾ ಎಲ್ಲರನ್ನ ದೂರ ಮಾಡಿ ಹೋಗಿರೋದು ಖಂಡಿತವಾಗಿ ಪ್ರತಿಯೊಬ್ಬರ ಮನಸ್ಸಿಗೆ ಬೇಸರವನ್ನು ಧರಿಸಿದೆ ಹಾಗೂ ಪ್ರತಿಯೊಬ್ಬರೂ ಕೂಡ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಭಾವನೆಯನ್ನು ಹೊಂದಿದ್ದಾರೆ ಎನ್ನಬಹುದಾಗಿದೆ.

ಇವನ ಪಾದವನ್ನು ಸೇರಿರುವಂತಹ ಲತಾ ಆನೆಗೆ ಆ ದೇವರು ಮುಕ್ತಿಯನ್ನು ನೀಡಿ ಹರಸಲಿ ಎಂಬುದಾಗಿ ಆಶಿಸೋಣ. ಖಂಡಿತವಾಗಿ ನಾವೆಲ್ಲರೂ ಕೂಡ ಪ್ರತಿಬಾರಿ ಧರ್ಮಸ್ಥಳಕ್ಕೆ ಬಂದಾಗ ಲತಾ ಆನೆಯ ಆಶೀರ್ವಾದವನ್ನು ಪಡೆದುಕೊಂಡಿರುತ್ತೇವೆ. ಇನ್ಮುಂದೆ ಧರ್ಮಸ್ಥಳಕ್ಕೆ ಹೋದ ಸಂದರ್ಭದಲ್ಲಿ ಲತಾ ಆನೆಯ ಅನುಪಸ್ಥಿತಿ ನಮ್ಮನ್ನು ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಕೆಯ ಹರುಷದ ಮುಖ ಹಾಗೂ ತಾಯಿಯ ವಾತ್ಸಲ್ಯವನ್ನು ಖಂಡಿತವಾಗಿ ಧರ್ಮಸ್ಥಳಕ್ಕೆ ಆಗಮಿಸುವಂತಹ ಸಹಸ್ರಾರು ಲಕ್ಷಾಂತರ ಭಕ್ತಾಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

Comments are closed.