Rental rules: ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್. ಈ ಸುದ್ದಿ ಕೇಳಿದರೆ ಎದ್ದು ಬಿದ್ದು ಕುಣಿತೀರ. ಡಿಪೋಸಿಟ್ ಹಣ ಹೊಂದಿಸೋದೇ ಬೇಡ!

Rental rules: ಹಳ್ಳಿಗಳಿಂದ ಹಿಡಿದು ಪಟ್ಟಣದವರಿಗೂ ಕೂಡ ಕೆಲಸವನ್ನು ಅರಿಸಿಕೊಂಡು ಬರುವಂತಹ ಪ್ರತಿಯೊಬ್ಬರೂ ಕೂಡ ಇವತ್ತಿಗೂ ಬಾಡಿಗೆ ಮನೆಯಲ್ಲಿ ನೆಲೆಸುವಂತಹ ಉದಾಹರಣೆಯನ್ನು ನೀವು ನೋಡಬಹುದಾಗಿದೆ. ಯಾಕೆಂದ್ರೆ ಅವರು ಹೋಗುವಂತಹ ಸ್ಥಳಗಳಲ್ಲಿ ಅವರಿಗೆ ಬೇಕಾಗಿ ಇರುವಂತಹ ವಾಸ ಸ್ಥಳ ಇಲ್ಲದಿದ್ದಾಗ ಅನುಕೂಲಕ್ಕೆ ಸಿಗುವಂತಹ ಬಾಡಿಗೆ ಮನೆಗಳನ್ನು ಅವರು ನಂಬಿಕೊಳ್ಳಬೇಕಾಗುತ್ತದೆ.

ಇನ್ನು ಈಗ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಇರುವಂತಹ ಕೆಲವೊಂದು ಹಗ್ಗ ಜಗ್ಗಾಟದ ಜಗಳಗಳು ಸರ್ಕಾರವನ್ನು ಕೂಡ ತಲುಪುವ ರೀತಿಯಲ್ಲಿ ಸದ್ದು ಮಾಡುತ್ತಿವೆ. ಮನೆಯ ಮಾಲೀಕರು ತಮ್ಮದೇ ಆದಂತಹ ಹೊಸ ನಿಯಮಗಳನ್ನು ಹಾಗೂ ಬಾಡಿಗೆದಾರರಿಗೆ ತೊಂದರೆ ನೀಡುವ ಕೆಲಸವನ್ನು ಮಾಡುತ್ತಾರೆ.

ಇನ್ನು ಸರ್ಕಾರ ಇದರಿಂದ ಎಚ್ಚೆತ್ತುಕೊಂಡಿದ್ದು ಇನ್ಮುಂದೆ ಯಾವುದೇ ರೀತಿಯಲ್ಲಿ ಕೂಡ ಬಾಡಿಗೆದಾರರಿಗೆ ಮಾನಸಿಕ ಅಥವಾ ಯಾವುದೇ ರೀತಿಯ ತೊಂದರೆಗಳನ್ನು ಮನೆಯ ಮಾಲೀಕರು ನೀಡುವ ಹಾಗಿಲ್ಲ ಎನ್ನುವ ರೀತಿಯಲ್ಲಿ ನಿಯಮಗಳನ್ನು ಜಾರಿಗೆ ತಂದಿದೆ. ಇದೇ ಕಾರಣಕ್ಕಾಗಿ ಇತ್ತೀಚಿಗಷ್ಟೇ modern tenant act ಅನ್ನು ಜಾರಿಗೆ ತರಲಾಗಿದೆ.

ಇದರ ರೀತಿಯಲ್ಲಿ ಬಾಡಿಗೆ ಮನೆಗಳಿಗೆ ಎಷ್ಟು ಹಣವನ್ನು ಬಾಡಿಗೆ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಕೂಡ ಸ್ಪಷ್ಟವಾದ ನಿಯಮವನ್ನು ಜಾರಿಗೆ ತರಲಾಗಿದೆ. ಬಾಡಿಗೆ ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ ಬೇರೆ ಚಾರ್ಜಸ್ ಗಳನ್ನು ನೀಡುವುದು ಹಾಗೂ ಅಡ್ವಾನ್ಸ್ ಹಣದ ಬಗ್ಗೆ ಕೂಡ ಇದರಲ್ಲಿ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಇದುವರೆಗೆ ಬಾಡಿಗೆ ಮನೆಯಲ್ಲಿ ಇರುವವರಿಗೆ 10 ತಿಂಗಳುಗಳ ಅಡ್ವಾನ್ಸ್ ಅನ್ನು ನೀಡಬೇಕು ಎನ್ನುವುದಾಗಿ ಮನೆಯ ಓನರ್ಗಳು ಹೇಳುತ್ತಿದ್ದರು. ಇಷ್ಟು ಮಾತ್ರವಲ್ಲದೆ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಅಡ್ವಾನ್ಸ್ ಹಣದಲ್ಲಿ ಆ ಚಾರ್ಜರ್ಸ್ ಈ ಚಾರ್ಜಸ್ ಎಂಬುದಾಗಿ ಹಣವನ್ನು ಕೂಡ ಕೀಳಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ನಿಯಮಗಳು ಬದಲಾಗಲಿವೆ ಹಾಗೂ ಕೇವಲ ಆರು ತಿಂಗಳುಗಳ ಅಡ್ವಾನ್ಸ್ ಅನ್ನು ಮಾತ್ರ ಹೆಚ್ಚೆಂದರೆ ನೀಡಬಹುದಾಗಿದೆ.

ಇದು ಅಂಗಡಿ ಮುಂಗಟ್ಟುಗಳಿಗೆ ಆದರೆ ಇನ್ನು ಬಾಡಿಗೆ ಮನೆಗಳಿಗೆ ಕೇವಲ ಎರಡು ತಿಂಗಳ ಅಡ್ವಾನ್ಸ್ ಅನ್ನು ನೀಡಿದರೆ ಸಾಕು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಚಾರ್ಜಸ್ ಗಳನ್ನು ನೀವು ನೀಡಬೇಕಾದ ಅಗತ್ಯ ಇರುವುದಿಲ್ಲ ಹಾಗೂ ಏನಾದರೂ ಹಾನಿ ಆದಲ್ಲಿ ಮಾತ್ರ ಅದರ ಹಣವನ್ನು ಅಡ್ವಾನ್ಸ್ ಹಣದಲ್ಲಿ ಕಡಿತುಗೊಳಿಸಬಹುದಾಗಿದೆ ಎಂಬುದಾಗಿ ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮನೆಯ ಮಾಲೀಕರು ಕೂಡ 11 ತಿಂಗಳಿಗೊಮ್ಮೆ ರೆಂಟಲ್ ಅಗ್ರಿಮೆಂಟ್ ಅನ್ನು ಮಾಡಿಕೊಳ್ಳಬಹುದಾಗಿದೆ ಎಂಬ ಸಿಹಿ ಸುದ್ದಿಯನ್ನು ಕೂಡ ನೀಡಲಾಗಿದೆ.

ಇನ್ನು ಒಂದುವೇಳೆ ಮನೆ ಖಾಲಿ ಮಾಡ್ದೆ ಇದ್ರೆ ಬಾಡಿಗೆದಾರರು ಕೂಡ ಮನೆಯ ಮಾಲಕರಿಗೆ ದುಪ್ಪಟ್ಟು ಹಣವನ್ನು ಬಾಡಿಗೆ ರೂಪದಲ್ಲಿ ನೀಡಬೇಕಾಗಿರುತ್ತದೆ. ಈ ಕಾಯ್ದೆ ಜಾರಿಗೆ ಬಂದ ನಂತರ ಪ್ರತಿಯೊಂದು ರೆಂಟಲ್ ಅಗ್ರಿಮೆಂಟ್ಗಳು ಕೂಡ ಈ ನಿಯಮದ ಅಡಿಯಲ್ಲಿಯೇ ರಿಜಿಸ್ಟರ್ ಆಗಲಿವೆ.

Comments are closed.