Court: ಕೇವಲ ಆರು ತಿಂಗಳಲ್ಲಿ ಬಡವರಿಗೆ ಸಿಗುತ್ತೆ ನ್ಯಾಯ; ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Court: ಇನ್ನೂ ಬಡವರು ನ್ಯಾಯಾಲಯದಲ್ಲಿ ಸಿಗುವಂತಹ ತೀರ್ಪಿಗಾಗಿ ವರ್ಷಗಟ್ಟಲೆ ಕಾಯಬೇಕಾದಂತಹ ಅಗತ್ಯವಿಲ್ಲ. ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ತೀರ್ಪನ್ನು ನೀಡುವಂತಹ ಸಿವಿಲ್ ಪ್ರೊಸೀಜರ್ ಕೋಡ್ ಅನ್ನು ಅಂಗೀಕರಿಸಲಾಗಿದೆ. ಕಳೆದ ಜುಲೈನಲ್ಲಿ ಅಂಗೀಕರಿಸಲಾದ ಈ ಪ್ರೊಸೀಜರ್ ಅನ್ನು ಈ ಫೆಬ್ರವರಿಯಲ್ಲಿ ರಾಷ್ಟ್ರದ ಪ್ರಥಮ ಪ್ರಜೆ ಆಗಿರುವಂತಹ ದ್ರೌಪದಿ ಮುರ್ಮು ಅವರಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಪ್ರಮುಖವಾಗಿ ಎಲ್ಲರೂ ತಿಳಿದುಕೊಳ್ಳಬೇಕಾಗಿರುವ ವಿಚಾರ ಏನಂದರೆ ರೈತರು ಅಥವಾ ಆರ್ಥಿಕವಾಗಿ ಹಿಂದುಳಿದಿರುವಂತಹ ಜನರಿಗೆ ಆರು ತಿಂಗಳ ಒಳಗಾಗಿ ನ್ಯಾಯವನ್ನು ಒದಗಿಸುವ ಕಾರಣಕ್ಕಾಗಿ ಈ ತಿದ್ದುಪಡಿಯನ್ನು ಜಾರಿಗೆ ತರಲಾಗುತ್ತಿದೆ. ನಿಜಕ್ಕೂ ಕೂಡ ಈ ಪ್ರೊಸೀಜರ್ ಎನ್ನುವುದು ಬಡವರಿಗೆ ಇನ್ಮುಂದೆ ಕೋರ್ಟಿನ ಕಡೆ ವರ್ಷಗಟ್ಟಲೆ ಸುತ್ತಬೇಕಾದ ಅವಶ್ಯಕತೆ ಇರುವುದಿಲ್ಲ ಎನ್ನುವುದನ್ನು ತಿಳಿಸುವುದಕ್ಕೆ ಹೊರಟಿದೆ.

ಸಾಕಷ್ಟು ಬಾರಿ ನೀವು ನೋಡಿರಬಹುದು ಅದು ಬಡವರೇ ಆಗಿರಲಿ ಅಥವಾ ಶ್ರೀಮಂತರ ಆಗಿರಲಿ ಕೋರ್ಟಿನ ವಿವಾದಗಳು ಬೇಗನೆ ಮುಗಿಯುವುದಿಲ್ಲ. ದೀರ್ಘ ಕಾಲದವರೆಗೆ ಕೋರ್ಟಿನ ಕೇಸುಗಳು ಬಗೆಹರಿಯದೆ ನಡೆಯುತ್ತಲೇ ಇರುತ್ತವೆ ಹೀಗಾಗಿ ಅದರಲ್ಲಿ ಒಳಗೊಂಡಿರುವಂತಹ ವ್ಯಕ್ತಿಗಳು ತಮ್ಮ ಸಮಯ ಹಾಗೂ ಹಣ ಎರಡನ್ನು ಕೂಡ ವ್ಯರ್ಥ ಮಾಡಬೇಕಾಗಿರುತ್ತದೆ. ಇದೇ ಕಾರಣಕ್ಕಾಗಿ ಸಾಕಷ್ಟು ಕಡೆಗಳಲ್ಲಿ ಪರಸ್ಪರ ವೈಯಕ್ತಿಕ ರಾಜ್ಯ ಸಂಧಾನಗಳು ನಡೆಯುವುದನ್ನು ಕೂಡ ನೀವು ನೋಡಿರಬಹುದು. ಬಡವರಿಗೆ ಕೆಲವೊಮ್ಮೆ ಸರಿಯಾದ ನ್ಯಾಯ ದೊರಕದೆ ಇರುವಂತಹ ಸಾಧ್ಯತೆ ಕೂಡ ಇರುತ್ತದೆ. ಬಡವರ ಸಮಯ ಹಾಗೂ ಹಣ ಎರಡು ಕೂಡ ಯಾವುದೇ ಕಾರಣವಿಲ್ಲದೆ ವ್ಯರ್ಥ ಆಗುತ್ತಿರುವಂತಹ ಕಾರಣದಿಂದಾಗಿ ಈಗ ಈ ಹೊಸ ನಿಯಮವನ್ನು ಜಾರಿಗೆ ತರುವಂತಹ ತಯಾರಿಗಳು ನಡೆಯುತ್ತಿವೆ. ಇದೇ ಕಾರಣಕ್ಕಾಗಿ ಈಗ ನ್ಯಾಯಾಲಯದಲ್ಲಿ ಹೊಸ ಸಿವಿಲ್ ತಿದ್ದುಪಡಿಗಳನ್ನು ಜಾರಿಗೆ ತರುವಂತಹ ಪ್ರಕ್ರಿಯೆಗಳು ನಡೆಯುತ್ತಿವೆ. ಕಾನೂನು ಸಚಿವರಾಗಿರುವಂತಹ ಎಚ್ ಕೆ ಪಾಟೀಲ್ ರವರು ಕೂಡ ಇನ್ನು ಮುಂದೆ ಈ ಸಿವಿಲ್ ಪ್ರೊಸೀಜರ್ ಕೋಡ್ ಅನ್ನು ಜಾರಿಗೆ ತರಲಾಗುತ್ತದೆ ಎನ್ನುವಂತಹ ಭರವಸೆಯನ್ನು ಕೂಡ ನೀಡಿದ್ದಾರೆ.

ಇದರ ಪ್ರಕಾರ ಇನ್ನು ಮುಂದಿನ ದಿನಗಳಲ್ಲಿ ರೈತರು ಅಥವಾ ಹಣಕಾಸಿನ ವಿಚಾರದಲ್ಲಿ ಹಿಂದುಳಿದಿರುವಂತಹ ವ್ಯಕ್ತಿ ವಾದಿ ಆಗಿರಲಿ ಅಥವಾ ಪ್ರತಿವಾದಿ ಆಗಿರಲಿ ಅವರ ಕಾನೂನು ವ್ಯಾಜ್ಯವನ್ನು ಆರು ತಿಂಗಳ ಒಳಗಾಗಿ ನ್ಯಾಯಾಲಯದಿಂದ ವಿಲೇವಾರಿ ಮಾಡುವಂತಹ ನಿಯಮಗಳನ್ನು ಪರಿಪಾಲಿಸಬೇಕಾಗಿರುತ್ತದೆ. ಈ ನಿಯಮಗಳಿಂದ ಮುಂದಿನ ದಿನಗಳಲ್ಲಿ ದುರ್ಬಲ ವರ್ಗದ ಜನರಿಗೆ ನ್ಯಾಯಾಲಯದಲ್ಲಿ ವೇಗವಾಗಿ ನ್ಯಾಯವನ್ನು ಪಡೆಯುವಂತಹ ಅವಕಾಶ ಇರುತ್ತದೆ. ನ್ಯಾಯಾಲಯದಲ್ಲಿ ಈಗಾಗಲೇ ಸಾಕಷ್ಟು ಸಮಯಗಳಿಂದ ಪೆಂಡಿಂಗ್ ಇರುವಂತಹ ಕೇಸ್ ಗಳಿಗೂ ಕೂಡ ಸಿವಿಲ್ ಪ್ರೊಸೀಜರ್ ಕೋಡ್ ನಿಯಮಗಳನ್ನು ಅಳವಡಿಸಲಾಗುತ್ತದೆ ಎನ್ನುವಂತಹ ಮಾತುಗಳು ಕೂಡ ಕೇಳಿ ಬಂದಿವೆ. ಸಾಕಷ್ಟು ವರ್ಷಗಳಿಂದ ಕಾಯುತ್ತಿರುವಂತಹ ಕಾನೂನು ಪ್ರಕರಣಗಳ ವಿಲೇವಾರಿ ಕೂಡ ಆದಷ್ಟು ಶೀಘ್ರದಲ್ಲಿಯೇ ನಡೆಯಲಿದೆ.

ಒಂದು ವೇಳೆ ವ್ಯಕ್ತಿಯ ಆದಾಯ ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ಅದು ಐದು ವರ್ಷಗಳ ಹಳೆಯ ಕೇಸ್ ಆಗಿದ್ರು ಕೂಡ ಮೇಲ್ಮನವಿಯನ್ನು ಸಲ್ಲಿಸಿ ಆ ಪ್ರಕರಣವನ್ನು ಕ್ಲಿಯರ್ ಮಾಡಿಕೊಳ್ಳಬಹುದು ಎಂಬುದಾಗಿ ನ್ಯಾಯಾಲಯದಿಂದ ಆದೇಶ ಹೊರಬಂದಿದೆ. ಇನ್ನು ಸಚಿವರು ಹೇಳಿರುವ ಪ್ರಕಾರ ಈ ರೀತಿಯ ಪ್ರಕರಣಗಳನ್ನು ವಿಲೇವಾರಿ ಮಾಡುವುದಕ್ಕೆ ನ್ಯಾಯಾಲಯಗಳಿಗೆ ಸರ್ಕಾರ ಸಂಪೂರ್ಣವಾದ ಬೆಂಬಲವನ್ನು ನೀಡಲಿದೆ ಎಂಬುದಾಗಿ ಹೇಳಿಕೊಂಡಿದೆ.

Comments are closed.