Social Media: ಅನು ಅಕ್ಕ ಕಣ್ಣೀರು ಹಾಕಿದ ವಿಡಿಯೋ ನೋಡಿ ಬಿಗ್ ಬಾಸ್ ನಟ ವಿನಯ್ ಷಾಕಿಂಗ್ ಪ್ರತಿಕ್ರಿಯೆ- ಒಮ್ಮೆಲೇ ಹೇಳಿದ್ದೇನು ಗೊತ್ತೆ?

Social Media: ಅನು ಅಕ್ಕ ಬಹುತೇಕ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ತಿಳಿದಿರುವಂತಹ ವ್ಯಕ್ತಿತ್ವ ಆಗಿದೆ ಎಂದು ನಮ್ಮ ಅಭಿಪ್ರಾಯ. ಯಾಕೆಂದ್ರೆ ಅನು ಅಕ್ಕ ಕರ್ನಾಟಕದ ಸಾಕಷ್ಟು ಶಾಲೆಗಳಿಗೆ ಅವುಗಳು ಸುಣ್ಣ ಕಾಣದೆ ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ಅವುಗಳಿಗೆ ಬಣ್ಣ ಹಚ್ಚುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು ಕನ್ನಡಿಗರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಈ ನಿಸ್ವಾರ್ಥ ಸೇವೆಯ ಮೂಲಕವೇ ಅನು ಅಕ್ಕ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಆದರೆ ಇತ್ತೀಚಿಗಷ್ಟೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಗೆ ಬಂದಿದ್ದ ಅನು ಅಕ್ಕ, ಕಣ್ಣೀರು ಹಾಕಿಕೊಂಡು ತಮ್ಮ ದುಃಖವನ್ನು ತೋಡಿಕೊಂಡ ಘಟನೆ ನಡೆದಿತ್ತು. ನಾವೆಲ್ಲ ಇಷ್ಟೆಲ್ಲಾ ದುಡ್ಡಿನ ಆಸೆ ಬಿಟ್ಟು ಕೆಲಸ ಮಾಡುತ್ತಿದ್ದರು ಕೂಡ ನೀವೆಲ್ಲ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದೀರಾ ಎಷ್ಟು ನೋವಾಗುತ್ತೆ ಗೊತ್ತಾ ಅನ್ನೋದಾಗಿ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಖ ಸುಮ್ಮನೆ ಯಾವುದೇ ಕಾರಣವಿಲ್ಲದೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವುದರ ಹಿನ್ನೆಲೆಯಲ್ಲಿ ಈ ರೀತಿಯಾಗಿ ಅನುವಕ್ಕ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಗೆ ಬಂದು ಕಣ್ಣೀರು ಹಾಕಿದ್ರು. ಈ ಸಂದರ್ಭದಲ್ಲಿ ಅನು ಅಕ್ಕ ನನಗೆ ಯಾವುದೇ ರೀತಿಯ ಸೆಲೆಬ್ರಿಟಿ ಅಥವಾ ಸ್ಟಾರ್ ಆಗಬೇಕು ಎನ್ನುವಂತಹ ಆಸೆ ಇಲ್ಲ. ಸಮಾಜಕ್ಕೆ ಹಾಗೂ ದೇಶಕ್ಕೆ ಒಂದೊಳ್ಳೆ ಕೊಡುಗೆ ನೀಡಬೇಕು ಅನ್ನೋದು ನನ್ನ ಗುರಿಯೆನ್ನುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನು ನೋಡಿರುವಂತಹ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವಂತಹ ಹಾಗೂ ಸ್ವಚ್ಛತೆಯನ್ನು ಕಾಪಾಡುವಂತಹ ಕೆಲಸವನ್ನು ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿರುವ ಅನು ಅವರು ಕಣ್ಣೀರು ಹಾಕಿರೋದು ನೋಡಿ ನನಗೆ ತುಂಬಾನೇ ಬೇಜಾರಾಯ್ತು. ಅಂಥಹ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವಂತಹ ಜನರಿಗೆ ಕೆಟ್ಟದಾಗಿ ಫೇಕ್ ಅಕೌಂಟ್ ಮೂಲಕ ಕಾಮೆಂಟ್ ಮಾಡೋದು ನಿಜಕ್ಕೂ ಕೂಡ ಸರಿಯಲ್ಲ. ಕನ್ನಡಿಯಲ್ಲಿ ನಿಮ್ಮ ಮುಖ ನೋಡಿ ನೀವು ಬಳಸುವಂತಹ ಆ ಕೆಟ್ಟ ಪದವನ್ನು ನಿಮ್ಮ ತಾಯಿ ಅಥವಾ ತಂಗಿಗೆ ಬಳಸಿ. ಅಂತಹ ಫೇಕ್ ಆಗಿ ಖಾತೆಯನ್ನು ಕ್ರಿಯೇಟ್ ಮಾಡಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ಸೈಬರ್ ಪ್ರಕರಣವನ್ನು ದಾಖಲಿಸಲಾಗುತ್ತದೆ ಅಂತ ವಿನಯ್ ಗೌಡ ಹೇಳಿಕೊಂಡಿದ್ದಾರೆ.

ಅನು ಅಕ್ಕ ಅವರ ಪರವಾಗಿ ವಿನಯ್ ಗೌಡ ಅವರು ತಮ್ಮ ಸ್ಟ್ಯಾಂಡ್ ಅನ್ನು ತೋರಿಸಿದ್ದು ನಿಜಕ್ಕೂ ಕೂಡ ಎಲ್ಲರ ಮನಸ್ಸನ್ನು ಗೆದ್ದಿದೆ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿಯ ಬೆಂಬಲದ ಮೂಲಕ ಅನು ಅಕ್ಕ ಸರ್ಕಾರಿ ಶಾಲೆಗಳ ಉಳಿವಿಗಾಗಿ ಮಾಡುತ್ತಿರುವಂತಹ ಕೆಲಸ ಮುಂದುವರೆಯಲಿ ಎಂಬುದಾಗಿ ಆಶಿಸೋಣ. ಈ ರೀತಿ ಎಲ್ಲಾ ಆಸೆಯನ್ನು ಬಿಟ್ಟು ನಿಸ್ವಾರ್ಥವಾಗಿ ಸೇವೆ ಮಾಡುವವರು ನಮಗೆ ಸಿಗುವುದು ಕಡಿಮೆ, ಹಾಗೂ ಇಂತಹ ವ್ಯಕ್ತಿಗಳು ಸಿಕ್ಕಾಗ ಅವರಿಗೆ ಪ್ರೋತ್ಸಾಹ ನೀಡಿ ಅವರ ಕಾರ್ಯಗಳಿಗೆ ಇನ್ನಷ್ಟು ಉತ್ತೇಜನ ನೀಡುವಂತಹ ಕೆಲಸವನ್ನು ಮಾಡೋಣ ಹೊರತು ಈ ರೀತಿಯಾಗಿ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ.

Comments are closed.