Post office job: ಹತ್ತನೇ ತರಗತಿ ಪಾಸಾದವರಿಗೂ ಸರ್ಕಾರಿ ಕೆಲಸ; ಪೋಸ್ಟ್ ಆಫೀಸ್ ಖಾಲಿ ಇರೋ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ!

Post office job: ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಆಹ್ವಾನ ಮಾಡಲಾಗಿದ್ದು ಒಂದು ವೇಳೆ ನೀವು ಆಸಕ್ತಿಯನ್ನು ಹೊಂದಿದ್ದರೆ ನೀವು ಕೂಡ ಕೆಲಸಕ್ಕೆ ಇವತ್ತೇ ಕೊನೆಯ ದಿನವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಐದು ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಆಹ್ವಾನ ಕರೆಯಲಾಗಿದೆ. ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬನ್ನಿ ಈ ಕೆಲಸದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಮೊದಲಿಗೆ ಈ ಕೆಲಸವನ್ನು ಸೇರಲು ನಿಮಗೆ ಇರಬೇಕಾಗಿರುವಂತಹ ವಿದ್ಯಾರ್ಹತೆಯ ಬಗ್ಗೆ ಮಾತನಾಡುವುದಾದರೆ ಮಾನ್ಯತೆಯನ್ನು ಪಡೆದಿರುವಂತಹ ವಿಶ್ವವಿದ್ಯಾಲಯ ಅಥವಾ ಯಾವುದೇ ಶಿಕ್ಷಣ ಮಂಡಳಿಯಿಂದ 10ನೇ ತರಗತಿಯನ್ನು ಪಾಸ್ ಮಾಡಿರಬೇಕು. ಭಾರತೀಯ ಅಂಚೆ ಇಲಾಖೆಯ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ವಯಸ್ಸು ಇವತ್ತಿಗೆ ಅಂದರೆ ಮಾರ್ಚ್ 19ಕ್ಕೆ 56 ವರ್ಷಗಳಿಗೆ ಮೀರದಂತೆ ಇರಬೇಕು. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆ ಕೂಡ ಇರುತ್ತದೆ. ಇಲಾಖೆಯ ಅಧಿಸೂಚನೆಯ ಪ್ರಕಾರ ಒಂದು ವೇಳೆ ನೀವು ಈ ಕೆಲಸಕ್ಕೆ ಆಯ್ಕೆಯಾದರೆ ನಿಮಗೆ ಪ್ರತಿ ತಿಂಗಳಿಗೆ 5,200 ರೂಪಾಯಿಗಳಿಂದ ಪ್ರಾರಂಭಿಸಿ 20200 ರೂಪಾಯಿಗಳವರೆಗೆ ಸಂಬಳ ಸಿಗುತ್ತದೆ.

ಕೆಲಸಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಕೆಲಸ ಮಾಡಬೇಕಾದ ಸ್ಥಳ ಎಲ್ಲಿ ಎಂಬುದು ಕೂಡ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಲಡಾಕ್, ರಾಜೌರಿ, ಬಾರಮುಲ್ಲ ಹಾಗೂ ಉದಂಪುರ್ ನಲ್ಲಿ ಕೆಲಸಕ್ಕೆ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಪೋಸ್ಟಿಂಗ್ ಅನ್ನು ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಬಗ್ಗೆ ಮಾತನಾಡುವುದಾದರೆ ಮೊದಲಿಗೆ ಲಿಖಿತ ಪರೀಕ್ಷೆಯ ಮೂಲಕ ನೀವು ನಿಮ್ಮ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಅಲ್ಲಿಂದ ಶಾರ್ಟ್ ಲಿಸ್ಟ್ ಆದಂತಹ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ ಆಯ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಹಾಯಕ ಪೋಸ್ಟ್‌ಮಾಸ್ಟರ್ ಜನರಲ್ (ನೇಮಕಾತಿ)
O/o ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್
J&K ಸರ್ಕಲ್
ಮೇಘಧೂತ್ ಭವನ
ರೈಲ್ ಹೆಡ್ ಕಾಂಪ್ಲೆಕ್ಸ್
ಜಮ್ಮು – 180012 ಈ ಅಡ್ರೆಸ್ಸ್ ಗೆ ನೀವು ನಿಮ್ಮ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಆಫ್ಲೈನ್ ಮೂಲಕ ಕಳಿಸಬಹುದಾಗಿದೆ ಇಲ್ಲವೇ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸ ಬಹುದಾಗಿದೆ. ಫೆಬ್ರವರಿ 17 ರಿಂದ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು ಮಾರ್ಚ್ 19 ಅಂದರೆ ಇವತ್ತು ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕವಾಗಿದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಅರ್ಜಿ ಸಲ್ಲಿಕೆ ಮಾಡಿ. ನೀವು ಅಥವಾ ಕೆಲಸದ ಅಗತ್ಯತೆ ಇರುವಂತಹ ಹಾಗೂ ಈ ಮೇಲಿನ ಅರ್ಹತೆಗಳನ್ನು ಪೂರೈಸುವಂತಹ ಯಾವುದೇ ಪರಿಸ್ಥಿತಿ ಇದ್ದರೂ ಕೂಡ ಈ ಮಾಹಿತಿಯನ್ನು ಅವರ ಜೊತೆಗೆ ಶೇರ್ ಮಾಡಿಕೊಳ್ಳುವ ಮೂಲಕ ಅವರಿಗೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಸಹಾಯ ಮಾಡಿ.

Comments are closed.