WPL 2024: ಹುಡುಗಿಯರ ಆರ್‌ಸಿಬಿ ತಂಡಕ್ಕೆ ಗೆದ್ರೂ ಸಿಕ್ಕ ಮೊತ್ತ ಇಷ್ಟೇನಾ? ಅದ್ರಲ್ಲಿ ನಮ್ಮ ಕನ್ನಡತಿ ಶ್ರೇಯಂಕಾ ಪಾಟೀಲ್ ಗೆದ್ದಿರೋ ಹಣ ಎಷ್ಟು ಗೊತ್ತಾ?

WPL 2024: ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದಿಲ್ಲ ಎನ್ನುವಂತಹ ಕಳಂಕವನ್ನು ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಮಹಿಳಾ ಆರ್ಸಿಬಿ ತಂಡ ತೆಗೆದು ಹಾಕಿದೆ. ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾದ ಎರಡನೇ ವರ್ಷಕ್ಕೆ ಆರ್‌ಸಿಬಿ ತಂಡ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳಿಗೆ ಸಂತೋಷದ ಕ್ಷಣಗಳನ್ನು ನೀಡಿದೆ ಎಂದು ಹೇಳಬಹುದಾಗಿದೆ. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದಂತಹ ದೆಹಲಿ ಕ್ಯಾಪಿಟಲ್ಸ್ ತಂಡ 18.3 ಓವರ್ ಗಳಲ್ಲಿ ಕೇವಲ 113 ರನ್ಗಳಿಗೆ ಆಲ್ ಔಟ್ ಆಯ್ತು. ದೆಹಲಿ ತಂಡದ ಪರ ಶೆಫಾಲಿ ವರ್ಮಾ 44 ರನ್ನುಗಳು ಹಾಗೂ ಮೆಗ್ ಲ್ಯಾನಿಂಗ್ 23 ರನ್ನು ಗಳಿಸಿದ್ದೆ ಹೈಯೆಸ್ಟ್ ಆಗಿತ್ತು.

ಆರ್ಸಿಬಿ ಪರ ನಮ್ಮ ಕನ್ನಡತಿ ಶ್ರೇಯಂಕಾ ಪಾಟೀಲ್ ನಾಲ್ಕು ವಿಕೆಟ್ಗಳನ್ನು ಕೀಳುವ ಮೂಲಕ ಗೆಲುವಿನ ಪ್ರಮುಖ ಕಾರಣೀಕರ್ತರಾಗಿರುತ್ತಾರೆ. ಸುಲಭ ಟಾರ್ಗೆಟ್ ಅನ್ನು ಪಡೆದುಕೊಂಡಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸುಲಭವಾಗಿಯೇ ಗೆಲುವನ್ನು ಪಡೆದುಕೊಂಡಿದೆ. ಮೂರು ಎಸೆತಗಳು ಬಾಕಿ ಉಳಿದಿರುವಂತೆ ಎರಡು ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಆರ್‌ಸಿಬಿ ತಂಡ ಬೆನ್ನತ್ತಿತ್ತು. ಈ ಮೂಲಕ ಮೊದಲ ಬಾರಿಗೆ ಕಪ್ ಗೆದ್ದಿರುವಂತಹ ಸಾಧನೆಯನ್ನು ತಂಡ ಮಾಡಿದೆ. ಬ್ಯಾಟಿಂಗ್ ಸಂದರ್ಭದಲ್ಲಿ ಕೂಡ ಎಲ್ಲಿಸ್ ಪೆರ್ರಿ, ಸ್ಮೃತಿ ಮಂದನ, ಸೋಫಿ ಡಿವೈನ್ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಕೂಡ ಗೆಲುವಿಗೆ ಕಾರಣವಾಗಿತ್ತು.

ಇನ್ನು ಗೆದ್ದಿರುವಂತಹ ಆರ್‌ಸಿಬಿ ತಂಡಕ್ಕೆ ಎಷ್ಟು ನಗದು ಬಹುಮಾನ ಸಿಕ್ಕಿದೆ ಎನ್ನುವ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಕಾತುರತೆ ಇದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ವಿಜೇತ ತಂಡಕ್ಕೆ ಆರು ಕೋಟಿ ಹಾಗೂ ಸೆಕೆಂಡ್ ಬಂದಿರುವಂತಹ ತಂಡಕ್ಕೆ ಮೂರು ಕೋಟಿ ರೂಪಾಯಿ ನಗದು ಬಹುಮಾನವನ್ನು ನೀಡಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿತೆಯರಿಗೆ 6 ಕೋಟಿ ರೂಪಾಯಿಗಳ ನಗದು ಬಹುಮಾನ ಸಿಕ್ಕಿದೆ. ನಮ್ಮ ಹೆಮ್ಮೆಯ ಕನ್ನಡತಿ ಆಗಿರುವಂತಹ ಶ್ರೇಯಾಂಕ ಪಾಟೀಲ್ ಈ ಬಾರಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ವಿಕೆಟ್ಗಳನ್ನು ಕೆತ್ತಿರುವ ಸಾಧನೆಯನ್ನು ಮಾಡಿದ್ದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಪೆರ್ರಿ ಅತ್ಯಂತ ಹೆಚ್ಚು ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಅನ್ನು ಪಡೆದುಕೊಂಡಿದ್ದು ಇದು ಕೂಡ ಆರ್ಸಿಬಿ ತಂಡದ ಪಾಳಯಕ್ಕೆ ಸಿಕ್ಕಿದೆ. ಈ ಕಾರಣಕ್ಕಾಗಿ ಇಬ್ಬರಿಗೂ ಕೂಡ ತಲಾ ಐದು ಲಕ್ಷ ರೂಪಾಯಿಗಳ ಬಹುಮಾನ ಸಿಕ್ಕಿದೆ. ವಿಶೇಷವಾಗಿ ನಮ್ಮ ಕನ್ನಡತಿ ಆಗಿರುವಂತಹ ಶ್ರೇಯಾಂಕ ಪಾಟೀಲ್ ಅತ್ಯಂತ ಹೆಚ್ಚು ವಿಕೆಟ್ ಕಬಳಿಸುವ ಮೂಲಕ ಪರಿಣಾಮಕಾರಿ ಬೌಲರ್ ಆಗಿ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದು ತಂಡದ ಗೆಲುವಿನ ಪ್ರಮುಖ ಕಾರಣೀಕರ್ತರಲ್ಲಿ ಒಬ್ಬರಾಗಿದ್ದಾರೆ.

ಶ್ರೇಯಂಕಾ ಪಾಟೀಲ್ ಕೇವಲ ಅತ್ಯಂತ ಹೆಚ್ಚು ವಿಕೆಟ್ ಕಬಳಿಸಿರುವಂತಹ ಆಟಗಾರ್ತಿಯ ಪ್ರಶಸ್ತಿಯನ್ನು ಮಾತ್ರವಲ್ಲದೇ, ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿ ಎನ್ನುವಂತಹ ಪ್ರಶಸ್ತಿಯನ್ನು ಕೂಡ ಈ ಬಾರಿಯ ಮಹಿಳಾ ಕ್ರಿಕೆಟ್ ಲೀಗ್ ನಲ್ಲಿ ಪಡೆದುಕೊಂಡಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ತೋರ್ಪಡಿಸಿರುವ ಅವರು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಕೂಡ ಅದೇ ಪ್ರದರ್ಶನವನ್ನು ತೋರ್ಪಡಿಸಿದರು ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.

Comments are closed.