Bank Account: ಇಷ್ಟು ಹಣ ಬ್ಯಾಂಕ್ ಅಕೌಂಟ್ ನಲ್ಲಿ ಕಡ್ಡಾಯವಾಗಿ ಇರಲೇಬೇಕು ; ಮಿನಿಮಮ್ ಬ್ಯಾಲೆನ್ಸ್ ಬಗ್ಗೆ RBI ಹೊಸ ನಿಯಮ!
Bank Account: ಬ್ಯಾಂಕಿಂಗ್ ವ್ಯವಸ್ಥೆಯನ್ನುವುದು ನಮ್ಮ ಜೀವನದ ಒಂದು ಬೇರ್ಪಡಿಸಲಾಗದಂತಹ ಭಾಗವೇ ಆಗಿಬಿಟ್ಟಿದೆ. ಕೆಲಸ ಮಾಡುವಂತಹ ಪ್ರತಿಯೊಬ್ಬರು ಕೂಡ ತಮ್ಮ ಹಣವನ್ನು ಬ್ಯಾಂಕಿನಲ್ಲಿ ಒಟ್ಟುಗೂಡಿಸಿ ಇಡುತ್ತಾರೆ. ಅದರಲ್ಲೂ ವಿಶೇಷವಾಗಿ ಸೇವಿಂಗ್ ಅಕೌಂಟ್ ಮೂಲಕ ಹಣವನ್ನು ಉಳಿತಾಯ ಮಾಡುವುದಕ್ಕೆ ಬ್ಯಾಂಕ್ ಖಾತೆಗಳನ್ನು ಪ್ರಮುಖವಾಗಿ ಎಲ್ರೂ ಬಳಸುತ್ತಾರೆ. ಇನ್ನು ಬ್ಯಾಂಕ್ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಬ್ಯಾಂಕಿನವರು ಇಂತಿಷ್ಟು ಹಣ ಅಕೌಂಟ್ ನಲ್ಲಿ ಇರ್ಲೇಬೇಕು ಎನ್ನುವಂತಹ ನಿಯಮಗಳನ್ನು ಹೇಳುತ್ತಾರೆ. ಸಾಕಷ್ಟು ಬಾರಿ ಈ ಬ್ಯಾಂಕ್ ಖಾತೆಯಲ್ಲಿ ವಾರ್ಷಿಕ ಚಾರ್ಜ್ ಸೇರಿದಂತೆ ಇನ್ನೂ ಹಲವಾರು ಶುಲ್ಕಗಳನ್ನು ಕೂಡ ವಿಧಿಸಲಾಗುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಪ್ರತಿಯೊಂದು ಬ್ಯಾಂಕಿನಲ್ಲಿ ಕೂಡ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು ಎನ್ನುವಂತಹ ನಿಯಮಗಳು ಬ್ಯಾಂಕುಗಳಿಂದ ಬ್ಯಾಂಕಿಗೆ ಬೇರೆ ಆಗಿರುತ್ತದೆ. ಇನ್ನು ಈ ಎಲ್ಲಾ ಬ್ಯಾಂಕುಗಳನ್ನು ನಿರ್ವಹಣೆ ಮಾಡುವಂತಹ ಕೆಲಸವನ್ನು ಮಾಡುವುದು ನಮ್ಮ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ಹಣಕಾಸಿನ ವ್ಯವಹಾರಗಳ ಪ್ರತಿಯೊಂದು ನಿಯಮಾವಳಿಗಳನ್ನು ಬದಲಾಯಿಸುವ ಹಾಗೂ ಜಾರಿಗೆ ತರುವಂತಹ ಹಕ್ಕನ್ನು ಹೊಂದಿರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.
ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡುವಂತಹ ನಿಯಮ
ಕೆಲವೊಂದು ಖಾತೆಗಳಲ್ಲಿ 500 ರೂಪಾಯಿಗಳವರೆಗೆ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು ಎನ್ನುವಂತಹ ನಿಯಮ ಇದ್ರೆ ಇನ್ನು ಕೆಲವು ಬ್ಯಾಂಕುಗಳಲ್ಲಿ ಹತ್ತು ಸಾವಿರ ರೂಪಾಯಿಗಳ ವರೆಗೂ ಕೂಡ ಇಡಬೇಕು ಎನ್ನುವುದಾಗಿ ಹೇಳುತ್ತಾರೆ. ಇನ್ನು ಹೊಸದಾಗಿ ಬಂದಿರುವಂತಹ ನಿಯಮಗಳ ಪ್ರಕಾರ ಒಂದು ವೇಳೆ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲ ಅಂದ್ರೆ ಅವುಗಳ ಮೇಲೆ ಶುಲ್ಕವನ್ನು ವಿಧಿಸುವ ಹಾಗಿಲ್ಲ ಎನ್ನುವುದಾಗಿ ನಿಯಮ ಜಾರಿಯಾಗಿದೆ. ಇದು ಸಾಮಾನ್ಯ ಬ್ಯಾಂಕ್ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತಹ ಸುದ್ದಿಯಾಗಿದೆ ಎಂದು ಹೇಳಬಹುದು.
- ಒಂದು ವೇಳೆ ನಿಮ್ಮ ಸೇವಿಂಗ್ ಖಾತೆಯಲ್ಲಿ ನೀವು ಒಂದು ವರ್ಷಗಳಿಂದ ಯಾವುದೇ ರೀತಿಯ ಟ್ರಾನ್ಸಾಕ್ಷನ್ ಮಾಡಿಲ್ಲ ಅಂದ್ರೆ ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ ಆದರೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡಿಲ್ಲ ಎನ್ನುವ ಕಾರಣಕ್ಕಾಗಿ ನಿಮ್ಮ ಮೇಲೆ ಹೆಚ್ಚಿನ ಶುಲ್ಕಗಳನ್ನು ವಿಧಿಸುವಂತಿಲ್ಲ ಎಂಬುದಾಗಿ ಹೊಸ ನಿಯಮಗಳಲ್ಲಿ ಹೇಳಲಾಗಿದೆ.
- ಸಾಕಷ್ಟು ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇವಲ ಸ್ಕಾಲರ್ಶಿಪ್ ಹಣವನ್ನು ಪಡೆಯುವುದಕ್ಕಾಗಿಯೇ ಬ್ಯಾಂಕ್ ಖಾತೆಯನ್ನು ಪ್ರಾರಂಭ ಮಾಡಿರಬಹುದು ಹೀಗಾಗಿ ಆ ಸಂದರ್ಭದಲ್ಲಿ ಕೂಡ ಮಿನಿಮಮ್ ಬ್ಯಾಲೆನ್ಸ್ ಮಾಡದೆ ಹೋದಲ್ಲಿ ಅವರ ಖಾತೆಗೆ ಹೆಚ್ಚಿನ ಶುಲ್ಕಗಳನ್ನು ವಿಧಿಸುವ ಅಧಿಕಾರ ಬ್ಯಾಂಕಿಗೆ ಇರುವುದಿಲ್ಲ.
ಒಂದು ವೇಳೆ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದರಿಂದ ಎರಡು ವರ್ಷಗಳ ಕಾಲ ಯಾವುದೇ ರೀತಿಯ ಹಣದ ಟ್ರಾನ್ಸಾಕ್ಷನ್ ಮಾಡದೆ ಹೋದಲ್ಲಿ ಆ ಸಂದರ್ಭದಲ್ಲಿ ಬ್ಯಾಂಕಿನಿಂದ ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಖಾತೆಯಲ್ಲಿ ಹೆಚ್ಚಿನ ಶುಲ್ಕವನ್ನು ವಿಧಿಸುವುದಕ್ಕೆ ಹೋಗಲು ಬ್ಯಾಂಕುಗಳಿಗೆ ನಿಯಮಗಳ ಅನ್ವಯ ಅಧಿಕಾರ ಇಲ್ಲ.
Comments are closed.