Summer Tips: ಫ್ಯಾನ್ ನಂಬರ್ 5ರಲ್ ಇಟ್ರೂ ಸ್ಪೀಡ್ ಆಗಿ ತಿರ್ಗ್ತಾ ಇಲ್ವಾ? ನಿಮ್ಮ ಫ್ಯಾನ್ ಸ್ಲೋ ನಾ? ಹಾಗಾದ್ರೆರ್ ಜಸ್ಟ್ 70 ರೂ. ನಲ್ಲಿ ಸ್ಪೀಡ್ ತಿರುಗೋ ಹಾಗೆ ಮಾಡ್ಕೊಳ್ಳಿ!

Summer Tips: ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವುದು ಈ ಬಾರಿಯ ಬೇಸಿಗೆಗಾಲ ಎನ್ನುವುದು ಈ ಹಿಂದಿಗಿಂತ ಸಾಕಷ್ಟು ಉಷ್ಣದಾಯಕವಾಗಿದೆ. ಎಷ್ಟೇ ಪ್ರಯತ್ನ ಮಾಡಿದ್ರು ಕೂಡ ಇದರ ಬಿಸಿಯಿಂದ ತಡೆದುಕೊಳ್ಳಲು ಸಾಧ್ಯವಾಗ್ತಾಯಿಲ್ಲ. ಅಷ್ಟರ ಮಟ್ಟಿಗೆ ಸೆಕೆ ಅನ್ನೋದು ಎಲ್ಲರನ್ನ ಕಾಡುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಬಯಸುವುದು ತಂಪಾದ ಪಾನೀಯ ಹಾಗೂ ತಂಪಾದ ಫ್ಯಾನ್ನ ಗಾಳಿ. ಈ ಬಾರಿಯ ಬೇಸಿಗೆಗಾಲ ಎಷ್ಟೊಂದು ಜನರನ್ನು ಕಾಡುತ್ತಿದೆ ಎಂದರೆ ನೀರಿನ ಬರಗಾಲ ಕೂಡ ಪ್ರಾರಂಭ ಆಗುವುದಕ್ಕೆ ಇನ್ನೂ ಹೆಚ್ಚಿನ ದಿನ ಬೇಕಾಗಿಲ್ಲ ಅನ್ನೋ ರೀತಿಯಲ್ಲಿದೆ.

ಸಾಮಾನ್ಯವಾಗಿ ನೋಡುವುದಾದರೆ ಈ ಬೇಸಿಗೆ ಕಾಲದಲ್ಲಿ ಏರ್ ಕೂಲರ್ ಹಾಗೂ ಎಸಿ ಹೆಚ್ಚಿನ ತಂಪನ್ನು ನೀಡುತ್ತವೆ. ಆದರೆ ಇದನ್ನು ಖರೀದಿಸುವುದಕ್ಕೆ ಎಲ್ಲರ ಬಳಿ ಕೂಡ ಹಣ ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕೂಡ ಬೇಸಿಗೆಗಾಲದ ಬಿಸಿಯಿಂದ ತಪ್ಪಿಸಿಕೊಳ್ಳಲು ಫ್ಯಾನ್ ಅನ್ನು ಮನೆಯಲ್ಲಿ ಬಳಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಕೆಲವೊಮ್ಮೆ ಫ್ಯಾನುಗಳು ವೇಗವಾಗಿ ಬೀಸೋದಿಲ್ಲ. ಇದರಿಂದ ಜನರು ತಪ್ಪು ತಿಳಿದುಕೊಂಡು ಪ್ಯಾನ್ ಹಾಳಾಗಿದೆ ಎಂಬುದಾಗಿ ತಿಳಿದುಕೊಳ್ಳುತ್ತಾರೆ. ಇವತ್ತಿನ ಈ ಲೇಖನದಲ್ಲಿ ಯಾವ ರೀತಿಯಲ್ಲಿ ಕೇವಲ 70 ರೂಪಾಯಿಗಳ ಮೂಲಕ ಫ್ಯಾನ್ ಅನ್ನು ವೇಗವಾಗಿ ತಿರುಗುವ ಹಾಗೆ ಮಾಡಬಹುದು ಎನ್ನುವುದನ್ನ ತಿಳಿದುಕೊಳ್ಳೋಣ ಬನ್ನಿ.

ಕೇವಲ 70 ರೂಪಾಯಿಗಳಲ್ಲಿ ಫ್ಯಾನ್ ಅನ್ನು ವೇಗವಾಗಿ ತಿರುಗುವಂತೆ ಮಾಡಬಹುದು.

ಸಾಮಾನ್ಯವಾಗಿ ಅದರ ಮ್ಯಾಕ್ಸಿಮಮ್ ಸ್ಪೀಡ್ ನಲ್ಲಿ ಇಟ್ರು ಕೂಡ ಫ್ಯಾನ್ ಒಂದನೇ ಹಂತದಲ್ಲಿ ಯಾವ ರೀತಿ ತಿರುಗಬೇಕೋ ಆ ರೀತಿ ತಿರುಗಿದರೆ ಅದರ ಅರ್ಥ ಫ್ಯಾನಿನ ಬ್ಲೇಡ್ ಗಳಲ್ಲಿ ಧೂಳಿನ ಕಣಗಳು ಹೆಚ್ಚಾಗಿ ಕುಳಿತಿವೆ ಹಾಗೂ ಅವುಗಳನ್ನು ನೀವು ಕ್ಲೀನ್ ಮಾಡಿದ್ರೆ ಫ್ಯಾನ್ ವೇಗವಾಗಿ ತಿರುಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ನೀವು ಫ್ಯಾನ್ ಬ್ಲೇಡ್ ಗಳನ್ನು ಸರಿಯಾದ ರೀತಿಯಲ್ಲಿ ಒದ್ದೆ ಬಟ್ಟೆಯಿಂದ ವರಿಸಿದ ನಂತರ ಒಣ ಬಟ್ಟೆಯಿಂದ ಒರೆಸಿದರೆ ಎಲ್ಲಾ ಧೂಳಿನ ಕಣಗಳು ಮಾಯವಾಗುತ್ತವೆ.

ಹೀಗಾಗಿ ಕೊನೆದಾಗಿ ನೀವು ಒಣ ಬಟ್ಟೆಯಿಂದ ಒರೆಸಬೇಕು ಯಾಕೆಂದರೆ ಒದ್ದೆ ಇರುವಂತಹ ಬಟ್ಟೆಯಲ್ಲಿ ಒರೆಸಿ ನಂತರ ಆ ಧೂಳಿನ ಕಣಗಳು ಫ್ಯಾನ್ ಇನ ಬ್ಲೇಡ್ ಗಳಿಗೆ ಅಂಟಿಕೊಳ್ಳುತ್ತವೆ. ಇದರಿಂದಾಗಿ ಮತ್ತೆ ಬ್ಲೇಡ್ ಗಳ ಮೇಲೆ ಕೊಳಕು ಎನ್ನುವುದು ತುಂಬಿಕೊಳ್ಳುತ್ತದೆ. ಒಂದು ವೇಳೆ ಈ ವಿಧಾನ ಕೂಡ ಕೆಲಸ ಮಾಡದೆ ಇದ್ದಲ್ಲಿ ನೀವು 70 ರಿಂದ 80 ರೂಪಾಯಿಗಳನ್ನು ನೀಡುವ ಮೂಲಕ ಹೊಸ ಕಂಡೆನ್ಸರ್ ಅನ್ನು ಖರೀದಿಸಿ ಅಳವಡಿಸಿದರೆ ಸಾಕು ಫ್ಯಾನ್ ವೇಗವಾಗಿ ತಿರುಗುತ್ತದೆ. ಇನ್ನು ಇದರ ಜೊತೆಗೆ ಕೆಪಾಸಿಟರ್ ಅನ್ನು ನೀವೇ ಖುದ್ದಾಗಿ ಬದಲಾಯಿಸಬಹುದು. ಈ ಮೂಲಕ ನಿಧಾನವಾಗಿ ಚಲಿಸುತ್ತಿರುವಂತಹ ನಿಮ್ಮ ಫ್ಯಾನ್ ಅನ್ನು ವೇಗವಾಗಿ ತಿರುಗುವಂತೆ ಮಾಡಬಹುದಾಗಿದೆ.

Comments are closed.