Land Rules: ಕೃಷಿ ಭೂಮಿ ನಿಮ್ದೇ ಆಗಿದ್ರೂ ಸರಿ, ಬೇಕಾದಾಗ ಮನೆ ನಿರ್ಮಾಣ ಮಾಡ್ಕೊಳ್ಳೋ ಹಾಗಿಲ್ಲ; ಈ ರೂಲ್ಸ್ ತಿಳ್ಕೊಳ್ಳಿ!

Land Rules: ನಮ್ಮ ಭಾರತ ದೇಶ ಅನಾದಿಕಾಲದಿಂದಲೂ ಕೂಡ ಕೃಷಿ ಹಾಗೂ ವ್ಯವಸಾಯವನ್ನು ನಂಬಿಕೊಂಡು ಬಂದಿರುವಂತಹ ದೇಶವಾಗಿದೆ. ಇದೇ ಕಾರಣಕ್ಕಾಗಿ ನಮ್ಮ ಭಾರತ ದೇಶದಲ್ಲಿ ರೈತ ಬೆನ್ನೆಲುಬು ಎಂಬುದಾಗಿ ಕರೆಯಲ್ಪಡುತ್ತಾನೆ. ರೈತರಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಹಾಗೂ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೃಷಿ ವ್ಯವಸಾಯಗಳಿಂದ ದೂರ ಆಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಜನರಿಗೆ ಪ್ರೋತ್ಸಾಹ ನೀಡಲು ಕೃಷಿ ಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಹಾಗೂ ಸಾಲ ಸೌಲಭ್ಯಗಳನ್ನು ಕೂಡ ಜಾರಿಗೆ ತರಲಾಗಿದೆ. ಇನ್ನು ಕೆಲವರು ಕೃಷಿಯನ್ನು ಮರೆತು ಬಿಡುವುದರಿಂದಲೂ ಕೂಡ ಮುಂದೆ ಹೋಗಿ ಕೃಷಿ ಭೂಮಿಯನ್ನ ಮನೆ ಕಟ್ಟೋದಕ್ಕೆ ಬಳಸಿಕೊಳ್ಳುವುದಕ್ಕೆ ಯೋಚಿಸುತ್ತಿದ್ದಾರೆ. ಇಂಥವರಿಗೆ ಈ ಲೇಖನ ಪ್ರಮುಖವಾಗಿ ಅನ್ವಯವಾಗುತ್ತದೆ.

ಕೃಷಿ ಭೂಮಿಯಲ್ಲಿ ಮನೆ ಕಟ್ಟಿದರೆ ಉಂಟಾಗುತ್ತದೆ ತೊಂದರೆ

ಸಾಮಾನ್ಯವಾಗಿ ಕೃಷಿ ಭೂಮಿಯನ್ನು ಕೇವಲ ಕೃಷಿ ಮಾಡುವುದಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ ಹೀಗಾಗಿ, ಕೃಷಿ ಭೂಮಿ ನಿಮ್ಮ ಹೆಸರು ನಲ್ಲಿ ಇದ್ದರೂ ಕೂಡ ಇದನ್ನು ಮನೆ ಕಟ್ಟೋದಕ್ಕೆ ಉಪಯೋಗಿಸಿಕೊಳ್ಳುವುದಕ್ಕೆ ನೀವು ಸಾಕಷ್ಟು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಬೇಕಾಗುತ್ತದೆ. ಹಾಗಿದ್ರೆ ಮಾತ್ರ ಕೃಷಿ ಭೂಮಿಯಲ್ಲಿ ಮನೆ ಕಟ್ಟುವಂತಹ ಅವಕಾಶವನ್ನು ನೀಡಲಾಗುತ್ತದೆ.

ಒಂದು ವೇಳೆ ನೀವು ಸರ್ಕಾರದ ನಿಯಮಗಳನ್ನು ಪಾಲಿಸದೆ ನೇರವಾಗಿ ಇಂತಹ ಕೃಷಿ ಭೂಮಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿದರೆ ನಿಮ್ಮ ಮನೆಯನ್ನು ಕೆಡವಿ ಬಿಡಬಹುದಾದಂತಹ ಸನ್ನಿವೇಶ ಕೂಡ ಎದುರಾಗಬಹುದಾಗಿದೆ. ಆ ವ್ಯವಸಾಯ ಭೂಮಿ ಆತನ ವೈಯಕ್ತಿಕ ಆಸ್ತಿಯಾಗಿದ್ದರೂ ಕೂಡ ಸರ್ಕಾರ ಈ ರೀತಿ ಹೇಳದೆ ಕೇಳದೆ ಮನೆಯನ್ನು ಕಟ್ಟೋದಕ್ಕೆ ಬಿಡುವುದಿಲ್ಲ.

ಈ ರೀತಿ ಕೃಷಿ ಭೂಮಿಯಲ್ಲಿ ಮನೆ ಕಟ್ಟಬಹುದು

ಕೃಷಿ ಭೂಮಿಯಲ್ಲಿ ನೇರವಾಗಿ ಮನೆ ಕಟ್ಟುವುದಕ್ಕೆ ಸಾಧ್ಯವಿಲ್ಲ ಇದಕ್ಕೆ ಭೂ ಇಲಾಖೆ ನೇರವಾದ ವಿರೋಧವನ್ನು ವ್ಯಕ್ತಪಡಿಸುತ್ತದೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನೀವು ಕಾನೂನು ನಿಯಮಗಳ ಪ್ರಕಾರ ನಿಮ್ಮ ಕೃಷಿ ಭೂಮಿಯನ್ನು ಮನೆ ಕಟ್ಟುವ ಭೂಮಿಯನ್ನಾಗಿ ಕನ್ವರ್ಷನ್ ಮಾಡಿ ನಂತರ ಮನೆ ಕಟ್ಟಿಸಿದರೆ ಆ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನಾತ್ಮಕ ಸಮಸ್ಯೆಗಳಿಂದ ನೀವು ಬಳಲ ಬೇಕಾಗಿರುವ ಅಗತ್ಯವಿಲ್ಲ. ಈ ನಿಯಮದ ಪ್ರಕಾರ ನೀವು ಗ್ರಾಮ ಪಂಚಾಯತ್ ಅಥವಾ ಮುನ್ಸಿಪಾಲಿಟಿಯಿಂದ NOC ಸರ್ಟಿಫಿಕೇಟ್ ಅನ್ನು ತೆಗೆದುಕೊಂಡರೆ ಸಾಕು ಭೂಮಿಯ ಕನ್ವರ್ಷನ್ ಮಾಡಿ ಅದರಲ್ಲಿ ಮನೆ ಕಟ್ಟಿಸಬಹುದು. ಭೂಮಿಯನ್ನು ಕನ್ವರ್ಷನ್ ಮಾಡುವಾಗ ಅದಕ್ಕೆ ಬೇಕಾಗಿರುವಂತಹ ಭೂಮಿಯ ಪತ್ರಗಳ ದಾಖಲೆಗಳು ಅತ್ಯಂತ ಪ್ರಮುಖವಾಗಿರುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ನೇರವಾಗಿ ಕೃಷಿ ಭೂಮಿಯನ್ನು ನೀವು ಮನೆ ಕಟ್ಟಿಸುವುದಕ್ಕೆ ಉಪಯೋಗಿಸಲು ಸಾಧ್ಯವಿಲ್ಲ ಅದನ್ನು ಈ ರೀತಿ ಕಾನೂನಾತ್ಮಕವಾಗಿ ಕನ್ವರ್ಷನ್ ಮಾಡಿ ನಂತರವಷ್ಟೇ ಮನೆ ಕಟ್ಟಲು ಸಾಧ್ಯ. ಹೀಗಾಗಿ ಒಂದು ವೇಳೆ ಮನೆ ಕಟ್ಟಿಸುವುದಕ್ಕೆ ನಿಮಗೆ ಕೃಷಿಭೂಮಿಯೇ ಕೊನೆ ಆಯ್ಕೆ ಅನ್ನೋದಾಗಿದ್ರೆ ಮಾತ್ರ ಈ ರೀತಿಯ ನಿರ್ಧಾರವನ್ನು ಕೈ ತೆಗೆದುಕೊಳ್ಳಿ.

Comments are closed.